ಹೈದರಾಬಾದ್: ಚಿನ್ನದ ನಾಣ್ಯಗಳನ್ನು ವಿತರಿಸುವ ಸ್ವಯಂಚಾಲಿತ ಟೆಲ್ಲರ್ ಮೆಷಿನ್ (ಎಟಿಎಂ) ಹೈದಾರಾಬಾದ್‌ನಲ್ಲಿ ಉದ್ಘಾಟನೆಗೊಂಡಿದೆ.
ಹೈದರಾಬಾದ್ ಮೂಲದ ಸ್ಟಾರ್ಟಪ್, ಓಪನ್‌ಕ್ಯೂಬ್ ಟೆಕ್ನಾಲಜೀಸ್‌ನಿಂದ ತಂತ್ರಜ್ಞಾನ ಬೆಂಬಲದೊಂದಿಗೆ ಗೋಲ್ಡ್ ಸಿಕ್ಕಾ ತನ್ನ ಮೊದಲ ಗೋಲ್ಡ್ ಎಟಿಎಂ ಅನ್ನು ಬೇಗಂಪೇಟೆಯಲ್ಲಿ ಪ್ರಾರಂಭಿಸಿದೆ ಮತ್ತು ಇದು ಭಾರತದ ಮೊದಲ ಗೋಲ್ಡ್ ಎಟಿಎಂ ಮತ್ತು ವಿಶ್ವದ ಮೊದಲ ರಿಯಲ್ ಟೈಮ್ ಗೋಲ್ಡ್ ಎಟಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಎಟಿಎಂ 0.5 ಗ್ರಾಂ ನಿಂದ 100 ಗ್ರಾಂ ವರೆಗಿನ ವಿವಿಧ ಮುಖಬೆಲೆಯ ಚಿನ್ನದ ನಾಣ್ಯಗಳನ್ನು ವಿತರಿಸುತ್ತದೆ ಮತ್ತು ಗೋಲ್ಸ್ ಸಿಕ್ಕಾ ಸಿಇಒ ಸೈ ತರುಜ್ ಪ್ರಕಾರ, ಗ್ರಾಹಕರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ವಿವಿಧ ಮುಖಬೆಲೆಯ ಚಿನ್ನದ ನಾಣ್ಯಗಳನ್ನು ಖರೀದಿಸಬಹುದು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
“ಗ್ರಾಹಕರಿಗೆ ಪಾರದರ್ಶಕ ಮತ್ತು ಸ್ಪಷ್ಟವಾಗುವಂತೆ ಬೆಲೆಗಳನ್ನು ಪರದೆಯ ಮೇಲೆ ನೇರವಾಗಿ ಪ್ರದರ್ಶಿಸಲಾಗುತ್ತದೆ ಮತ್ತು ನಾಣ್ಯಗಳನ್ನು 999 ಶುದ್ಧತೆಯೊಂದಿಗೆ ಪ್ರಮಾಣೀಕರಿಸಿದ ಟ್ಯಾಂಪರ್ ಪ್ರೂಫ್ ಪ್ಯಾಕ್‌ಗಳಲ್ಲಿ ವಿತರಿಸಲಾಗುತ್ತದೆ” ಎಂದು ಅವರು ಹೇಳಿದರು.
ಕಂಪನಿಯು ಹೈದರಾಬಾದ್‌ನಲ್ಲಿ ವಿಮಾನ ನಿಲ್ದಾಣ, ಹಳೆಯ ನಗರದಲ್ಲಿ ಮೂರು ಯಂತ್ರಗಳನ್ನು ಪ್ರಾರಂಭಿಸಲು ಯೋಜಿಸಿದೆ ಮತ್ತು ಅವುಗಳನ್ನು ಕರೀಂನಗರ ಮತ್ತು ವಾರಂಗಲ್‌ನಲ್ಲಿಯೂ ಪ್ರಾರಂಭಿಸಲು ಪ್ರಸ್ತಾಪಿಸಿದೆ. ಮುಂಬರುವ ಎರಡು ವರ್ಷಗಳಲ್ಲಿ ಭಾರತದಾದ್ಯಂತ 3,000 ಇಂತಹ ಎಟಿಂಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತರುಜ್ ಹೇಳಿದರು.
ತೆಲಂಗಾಣ ಮಹಿಳಾ ಆಯೋಗದ ಅಧ್ಯಕ್ಷೆ, ಸುನಿತಾ ಲಕ್ಷ್ಮಾ ರೆಡ್ಡಿ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಗೋಲ್ಡ್ ಸಿಕ್ಕಾ ಅಧ್ಯಕ್ಷೆ ಅಂಬಿಕಾ ಬರ್ಮನ್, ಓಪನ್ ಕ್ಯೂಬ್ ಸಿಇಒ ಟೆಕ್ನಾಲಜೀಸ್ ಪಿ.ವಿನೋದಕುಮಾರ ಮತ್ತು ಟಿ-ಹಬ್ ಸಿಇಒ ಎಂ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ