ನನಗೆ ನಾಚಿಕೆಯಾಗುತ್ತಿದೆ : ಹಿಂದೂಗಳ ಕುರಿತ ವಿವಾದಾತ್ಮಕ ಹೇಳಿಕೆಗಳಿಗೆ ಕ್ಷಮೆಯಾಚಿಸಿದ ಅಸ್ಸಾಂನ ಬದ್ರುದ್ದೀನ್ ಅಜ್ಮಲ್

ಹೊಜೈ (ಅಸ್ಸಾಂ) : ಹಿಂದೂಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ದಿನದ ನಂತರ, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ಶನಿವಾರ ‘ಕ್ಷಮೆಯಾಚನೆ’ ಮಾಡಿದ್ದಾರೆ.
ಯಾರ ಭಾವನೆಗಳನ್ನು ನೋಯಿಸುವ ಉದ್ದೇಶ ನನಗಿಲ್ಲ, ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನನಗಿರಲಿಲ್ಲ. ನನ್ನ ಹೇಳಿಕೆಗೆ ತೀವ್ರ ವಿಷಾದವಿದೆ. ಹಿರಿಯ ನಾಯಕನಾಗಿದ್ದ ನಾನು ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು. ನನ್ನ ಹೇಳಿಕೆಯಿಂದ ನೋವಾಗಿರುವ ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ. ನನ್ನ ಹೇಳಿಕೆಗಳಿಗೆ ನನಗೆ ನಾಚಿಕೆಯಾಗಿದೆ. ಸರ್ಕಾರವು ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಬೇಕು ಮತ್ತು ಅವರಿಗೆ ಶಿಕ್ಷಣ ಮತ್ತು ಉದ್ಯೋಗವನ್ನು ನೀಡಬೇಕು ಎಂದು ಅಜ್ಮಲ್ ಹೇಳಿದ್ದಾರೆ.

ಆದರೆ, ಜನಸಂಖ್ಯೆ ನಿಯಂತ್ರಣದ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು. ಶುಕ್ರವಾರ, ಅಜ್ಮಲ್ ಅವರು ಮುಸ್ಲಿಮರಂತೆ ಹಿಂದೂಗಳು ತಮ್ಮ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಬೇಕು ಎಂದು ಹೇಳಿದ್ದರು.
“ಮುಸ್ಲಿಂ ಪುರುಷರು 20-22 ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ ಮತ್ತು ಮುಸ್ಲಿಂ ಮಹಿಳೆಯರು 18 ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ, ಆದರೆ, (ಹಿಂದೂಗಳು) ಮದುವೆಗೆ ಮೊದಲು ಒಬ್ಬ ಎರಡು ಅಥವಾ ಮೂರು ಅಕ್ರಮ ಹೆಂಡತಿಯರನ್ನು ಹೊಂದಿರುತ್ತಾರೆ. ಅವರು ಹಣ ಉಳಿಸಲು ಮಕ್ಕಳಿಗೆ ಜನ್ಮ ನೀಡುವುದಿಲ್ಲ ಎಂದು ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
“ಅವರು (ಹಿಂದೂಗಳು) ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವಲ್ಲಿ ಮುಸ್ಲಿಮರನ್ನು ಅನುಸರಿಸಬೇಕು. ಹುಡುಗರಿಗೆ 20-22 ಮತ್ತು ಹುಡುಗಿಯರಿಗೆ 18-20 ವರ್ಷಕ್ಕೆ ಮದುವೆ ಮಾಡಿ ನಂತರ ಎಷ್ಟು ಮಕ್ಕಳು ಜನಿಸುತ್ತಾರೆ ಎಂಬುದನ್ನು ನೋಡಿ ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ನೀವು ಅಮಾಯಕರಲ್ಲ : ಬಾಬಾ ರಾಮದೇವ, ಆಚಾರ್ಯ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್‌ ಮತ್ತೆ ತರಾಟೆ

4.3 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement