ಬೆಂಗಳೂರು: ತಮ್ಮ ಸ್ವಾಧೀನದಲ್ಲಿರುವ ಫಾರ್ಮ್ ಹೌಸ್‍ಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪತಿ ಅತಿಕ್ರಮವಾಗಿ ನುಗ್ಗಿ ಆಸ್ತಿ ಕಬಳಿಸಲು ಯತ್ನಿಸಿದ್ದಾರೆ ಎಂದು ಗಾಯಕ ಲಕ್ಕಿ ಆಲಿ ಆರೋಪಿಸಿದ್ದಾರೆ.
ಖ್ಯಾತ ಹಿಂದಿ ನಟ ಮೊಹಮ್ಮದ್ ಆಲಿ ಅವರ ಪುತ್ರ ಲಕ್ಕಿ ಅಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸರಣಿ ಟ್ವೀಟ್‍ಗಳ ಮೂಲಕ ಈ ಬಗ್ಗೆ ದೂರಿದ್ದಾರೆ.
ತುರ್ತು ಕೆಲಸದ ನಿಮಿತ್ತ ನಾನು ದುಬೈಗೆ ಬಂದಿದ್ದೇನೆ. ಬೆಂಗಳೂರಿನ ಯಲಹಂಕದ ಕೆಂಚೇನಹಳ್ಳಿಯಲ್ಲಿರುವ ಟ್ರಸ್ಟ್ ಒಡೆತನಕ್ಕೆ ಸೇರಿದ್ದ ನಮ್ಮ ಫಾರ್ಮ್ ಹೌಸ್‍ಗೆ ಸುಧೀರ ರೆಡ್ಡಿ ಮತ್ತು ಮಧು ರೆಡ್ಡಿ ಎಂಬ ವ್ಯಕ್ತಿಗಳು ನುಗ್ಗಿ ಅತಿಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಐಎಎಸ್ ಅಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರ ಸಹಾಯದ ಮೂಲಕ ಈ ಕೆಲಸ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.
ಅತಿಕ್ರಮಣಕ್ಕೆ ಯತ್ನಿಸಿದ ಅವರು ರಾಜ್ಯ ಸರ್ಕಾರದ ಆಡಳಿತ ಯಂತ್ರವನ್ನು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸೂಕ್ತ ದಾಖಲೆಗಳನ್ನು ತೋರಿಸಲು ನಿರಾಕರಿಸಿದ್ದಾರೆ. ನಮ್ಮ ವಕೀಲರು ಈ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಅತಿಕ್ರಮಣಕಾರರ ಬಳಿ ಯಾವುದೇ ನ್ಯಾಯಾಲಯದ ಆದೇಶಗಳಿಲ್ಲ. ಈ ಆಸ್ತಿಯಲ್ಲಿ ನಾವು 50 ವರ್ಷಗಳಿಂದ ವಾಸಿಸುತ್ತಿದ್ದೇವೆ. ನಾನು ದುಬೈಗೆ ಬರುವ ಮುನ್ನ ನಿಮ್ಮನ್ನು ಭೇಟಿ ಮಾಡಲು ಯತ್ನಿಸಿದೆ. ಆದರೆ ನೀವು ಸಿಗಲಿಲ್ಲ. ಸ್ಥಳೀಯ ಪೊಲೀಸ್ ಠಾಣೆ ಮತ್ತು ಎಸಿಪಿ ಅವರಿಗೆ ದೂರು ನೀಡಿದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕರಿಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹಸಚಿವ ಆರಗ ಜ್ಞಾನೇಂದ್ರ, ಮಾಧ್ಯಮಗಳ ಮೂಲಕ ಈ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇನೆ. ಸಮಗ್ರವಾದ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಈ ಆರೋಪದ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಮಾಧ್ಯಮಗಳಲ್ಲಿ ಈ ವಿಚಾರವನ್ನು ನಾನು ನೋಡಿದ್ದೇನೆ. ಯಾವ ಕಾರಣಕ್ಕೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ತಿಳಿದಿಲ್ಲ. ಯಾವ ಪೊಲೀಸ್ ಠಾಣೆ ವ್ಯಾಪ್ತಿ ಎನ್ನುವ ಬಗ್ಗೆ ಮಾಹಿತಿ ತರಿಸಿಕೊಳ್ಳೊತ್ತೇನೆ. ಈ ಬಗ್ಗೆ ಡಿಜಿ ಜೊತೆ ನಾನು ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ