2022ರಲ್ಲಿ ವಿದೇಶಗಳಲ್ಲಿರುವ ಭಾರತೀಯ ವಲಸೆ ಕಾರ್ಮಿಕರಿಂದ ಭಾರತಕ್ಕೆ ದಾಖಲೆ ಪ್ರಮಾಣದ 100 ಶತಕೋಟಿ ಡಾಲರ್‌ಗಳಷ್ಟು ಹಣ ರವಾನೆ : ವಿಶ್ವ ಬ್ಯಾಂಕ್ ವರದಿ

ನವದೆಹಲಿ: ಕಳೆದ ವಾರ ಬಿಡುಗಡೆಯಾದ ವಿಶ್ವಬ್ಯಾಂಕ್ ವರದಿಯ ಪ್ರಕಾರ, ಭಾರತದ ವಲಸೆ ಕಾರ್ಮಿಕರಿಂದ ಕಳುಹಿಸಲಾದ ಹಣವು ಈ ವರ್ಷ 12% ರಷ್ಟು ಹೆಚ್ಚಳಗೊಂಡು ದಾಖಲೆಯ $ 100 ಬಿಲಿಯನ್ ತಲುಪುವ ನಿರೀಕ್ಷೆಯಿದೆ.
ಇದು ಮೆಕ್ಸಿಕೋ ($60 ಶತಕೋಟಿ), ಚೀನಾ ($51 ಶತಕೋಟಿ), ಫಿಲಿಪೈನ್ಸ್ ($38 ಶತಕೋಟಿ), ಈಜಿಪ್ಟ್ ($32 ಶತಕೋಟಿ) ಮತ್ತು ಪಾಕಿಸ್ತಾನ ($29 ಶತಕೋಟಿ) ಹೆಚ್ಚಿನ ಒಳಹರಿವು ಪಡೆದವರನ್ನು ಹಿಂದಿಕ್ಕಿ ಭಾರತವು ವಿಶ್ವದ ಅಗ್ರ ಸ್ವೀಕೃತದಾರನಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಗಮನಾರ್ಹವಾಗಿ, 2021 ರಲ್ಲಿ ರವಾನೆ (remittance) ಬೆಳವಣಿಗೆಯು ಹಿಂದಿನ ವರ್ಷಕ್ಕಿಂತ 7.5%ರಷು ಹೆಚ್ಚಾಗಿದೆ.
ವಿಶ್ವಬ್ಯಾಂಕ್‌ನ ಇತ್ತೀಚಿನ ವಲಸೆ ಮತ್ತು ಅಭಿವೃದ್ಧಿ ಬ್ರೀಫ್‌ ಪ್ರಕಾರ, ದಕ್ಷಿಣ ಏಷ್ಯಾಕ್ಕೆ ರವಾನೆ(remittances)ಯು ನಿರೀಕ್ಷಿತ 3.5% ಹೆಚ್ಚಳ ಕಂಡು ಪ್ರಾದೇಶಿಕವಾಗಿ 2022 ರಲ್ಲಿ $163 ಶತಕೋಟಿಗೆ ಏರುವ ನಿರೀಕ್ಷೆಯಿದೆ. ಆದಾಗ್ಯೂ, ಈ ಪ್ರದೇಶದಲ್ಲಿ ರಾಷ್ಟ್ರಗಳಾದ್ಯಂತ ಗಮನಾರ್ಹ ಅಸಮಾನತೆ ಇದೆ. ಶ್ರೀಲಂಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಇತರ ದೇಶಗಳ ಸ್ವೀಕೃತಿಗಳು ಸರಿಸುಮಾರು 10% ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ, ಆದರೆ ಭಾರತಕ್ಕೆ ಸ್ವೀಕೃತಿಗಳು 12% ರಷ್ಟು ಹೆಚ್ಚಾಗುವ ಮುನ್ಸೂಚನೆ ಇದೆ. ವರದಿಯ ಪ್ರಕಾರ ನೇಪಾಳಕ್ಕೆ ಸ್ವೀಕೃತಿಗಳು 4% ರಷ್ಟು ಮಾತ್ರ ಹೆಚ್ಚಾಗಲಿದೆ.

ಪ್ರಮುಖ ಸುದ್ದಿ :-   "ಚಾಣಕ್ಯ ಕೂಡ...: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

‘2022 ರಲ್ಲಿ $100 ಶತಕೋಟಿ ಸ್ವೀಕರಿಸುವ ಹಾದಿಯಲ್ಲಿರುವ ಏಕೈಕ ದೇಶ ಭಾರತ’: ವಿಶ್ವ ಬ್ಯಾಂಕ್
2022 ರಲ್ಲಿ, ವಾರ್ಷಿಕವಾಗಿ 100 ಶತಕೋಟಿ ಡಾಲರ್ ಹಣವನ್ನು ಸ್ವೀಕರಿಸುವ ಹಾದಿಯಲ್ಲಿರುವ ವಿಶ್ವದ ಏಕೈಕ ದೇಶ ಭಾರತವಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. “ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್ ದೇಶಗಳಿಗೆ ರವಾನೆ ಹರಿವಿನ ಬೆಳವಣಿಗೆಯು ಶೇಕಡಾ 9.3 ಎಂದು ಅಂದಾಜಿಸಲಾಗಿದೆ, ದಕ್ಷಿಣ ಏಷ್ಯಾದಲ್ಲಿ 3.5 ಶೇಕಡಾ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ ಶೇಕಡಾ 2.5 ಮತ್ತು ಪೂರ್ವ ಏಷ್ಯಾ ಮತ್ತು ಪೆಸಿಫಿಕ್‌ನಲ್ಲಿ ಶೇಕಡಾ 0.7 ರಷ್ಟು ಎಂದು ಅಂದಾಜಿಸಲಾಗಿದೆ. 2022 ರಲ್ಲಿ, ಮೊದಲ ಬಾರಿಗೆ ಭಾರತವು USD 100 ಶತಕೋಟಿಗಿಂತ ಹೆಚ್ಚಿನ ವಾರ್ಷಿಕ ಹಣ ರವಾನೆ(remittance)ಯನ್ನು ಸ್ವೀಕರಿಸುವ ಹಾದಿಯಲ್ಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವಬ್ಯಾಂಕ್ ಪ್ರಕಾರ, ವೇತನ ಹೆಚ್ಚಳ ಮತ್ತು ಅಮೆರಿಕ ಮತ್ತು ಇತರ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ದೇಶಗಳಲ್ಲಿ ಬಲವಾದ ಕಾರ್ಮಿಕ ಮಾರುಕಟ್ಟೆಯಿಂದ ಭಾರತಕ್ಕೆ ರೆಮಿಟ್ಟೆನ್ಸ್‌ ಹೆಚ್ಚಿಸಲಾಗಿದೆ. ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ದೇಶಗಳಲ್ಲಿನ ಕಡಿಮೆ ಕೌಶಲ್ಯದ, ಅನೌಪಚಾರಿಕ ಉದ್ಯೋಗದಿಂದ ಉನ್ನತ-ಆದಾಯದ ದೇಶಗಳಾದ ಅಮೆರಿಕ, ಯುನೈಟೆಡ್ ಕಿಂಗ್‌ಡಮ್ ಮತ್ತು ಏಷ್ಯಾ ಪೆಸಿಫಿಕ್ ದೇಶಗಳಾದ ಸಿಂಗಾಪುರ, ಜಪಾನ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಸ್ಥಳಗಳಿಗೆ ಕ್ರಮೇಣವಾಗಿ ಭಾರತೀಯ ವಲಸಿಗರ ಸ್ಥಳಾಂತರ ಕಂಡುಬಂದಿದೆ.
ಗಮನಾರ್ಹವಾಗಿ, 2016-17 ಮತ್ತು 2020-21 ರ ನಡುವೆ, ಅಮೆರಿಕ, ಯುನೈಟೆಡ್ ಕಿಂಗ್‌ಡಮ್ ಮತ್ತು ಸಿಂಗಾಪುರದಂತಹ ದೇಶಗಳಿಂದ ರೆಮಿಟ್ಟೆನ್ಸ್‌ ಪಾಲು 26% ರಿಂದ 36% ಕ್ಕಿಂತ ಹೆಚ್ಚಾಗಿದೆ, ಆದರೆ 5 GCC ದೇಶಗಳು ಅಂದರೆ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕುವೈತ್, ಓಮನ್ ಮತ್ತು ಕತಾರ್ ದೇಶಗಳದ್ದು 54 ರಿಂದ 28% ಕ್ಕೆ ಇಳಿದವು.
ಇದರ ಜೊತೆಯಲ್ಲಿ, ಭಾರತೀಯ ವಲಸಿಗರು ಅಮೆರಿಕದ ಡಾಲರ್ ವಿರುದ್ಧ ಭಾರತೀಯ ರೂಪಾಯಿಯ ಸವಕಳಿ (ಜನವರಿ ಮತ್ತು ಸೆಪ್ಟೆಂಬರ್ 2022 ರ ನಡುವೆ 10 ಪ್ರತಿಶತ) ಮತ್ತು ಹೆಚ್ಚಿದ ರೆಮಿಟ್ಟೆನ್ಸ್‌ ಹರಿವಿನ ಲಾಭವನ್ನು ಪಡೆದಿರಬಹುದು ಎಂದು ತೋರುತ್ತದೆ.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement