ಬೆಳಗಾವಿ ಚಲೋ: ಬೆಳಗಾವಿಯತ್ತ ಬರುತ್ತಿರುವ ಕರವೇ ಕಾರ್ಯಕರ್ತರು

ಬೆಳಗಾವಿ: ಎಂಇಎಸ್ ಉದ್ಧಟತನ ಹಾಗೂ ಕನ್ನಡಿಗರ ಮೇಲೆ ಪೊಲೀಸ್ ಹಲ್ಲೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು, ಮಂಗಳವಾರ ಬೆಳಗಾವಿ ಚಲೋ ನಡೆಸಿದರು.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ನೂರಾರು ವಾಹನಗಳು ಹಾಗೂ ಸಾವಿರಾರು ಕನ್ನಡ ಧ್ವಜಗಳನ್ನು ಹೊತ್ತ ನೂರಾರು ಕಾರ್ಯಕರ್ತರು ಪೊಲೀಸರ ವಿರೋಧದ ನಡುವೆಯೂ ನಗರದತ್ತ ಬರುತ್ತಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಂತರ ನೂರಾರು ವಾಹನಗಳೊಂದಿಗೆ ಬೆಳಗಾವಿಯತ್ತ ಹೊರಟ ನಾರಾಯಣಗೌಡ ಮತ್ತು ನೂರಾರು ಕಾರ್ಯಕರ್ತರನ್ನು ಹಿರೇಬಾಗೆವಾಡಿ ಟೋಲ್ ನಲ್ಲಿ ಪೊಲೀಸರು ಬೆಳಗಾವಿ ನಗರ ಪ್ರವೇಶಿಸದಂತೆ ತಡೆದರು.

ಪೊಲೀಸರೊಂದಿಗೆ ವಾಗ್ವಾದ ನಡೆದ ನಂತರ ನಾರಾಯಣಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಕಾಲ್ನಡಿಗೆಯಲ್ಲಿಯೇ ಬೆಳಗಾವಿ ನಗರದತ್ತ ಸುಮಾರು 25 ಕಿಮೀ ಹೊರಟು ನಡೆದರು.
ಕರವೇ ಬೆಳಗಾವಿಯತ್ತ ಬರುತ್ತಿರುವುದರಿಂದ ಬೆಳಗಾವಿ ನಗರದಾದ್ಯಂತ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಹಾಕಲಾಗಿದೆ.
ಕನ್ನಡಿಗ ವಿದ್ಯಾರ್ಥಿ ಮೇಲೆ ಎಂಇಎಸ್ ಬೆಂಬಲಿತ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ನಂತರ ಠಾಣೆಗೆ ದೂರು ಕೊಡಲು ಹೋದ ವಿದ್ಯಾರ್ಥಿ ಮೇಲೆ ಪೊಲೀಸರು ಠಾಣೆಯಲ್ಲಿ ಹಲ್ಲೆ ನಡೆಸಿದ್ದ ಆರೋಪ ಕೇಳಿಬಂದಿತ್ತು. ಕನ್ನಡ ವಿರೋಧಿ ಹಲ್ಲೆಕೋರ ಪೊಲೀಸ್ ಅಧಿಕಾರಿಯನ್ನು ತಕ್ಷಣವೇ ಅಮಾನತುಮಾಡಬೇಕು ಎಂದು ಕರವೇ ಒತ್ತಾಯಿಸಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement