ಕುಮಟಾ: 5 ಸಾವಿರ ಕಿಮೀ ಭಾರತ ಸ್ಕೇಟಿಂಗ್ ಯಾತ್ರೆ

posted in: ರಾಜ್ಯ | 0

ಕುಮಟಾ: ಭಾರತ ಪುನಃ ವಿಶ್ವ ಗುರು ಪಟ್ಟವನ್ನು ಅಲಂಕರಿಸುವಂತಾಗಬೇಕು. ಭಾರತೀಯರ ಉತ್ಕೃಷ್ಠ ಪರಂಪರೆ ಪ್ರತಿಬಿಂಬಿಸಬೇಕು ಎಂಬ ಉದ್ದೇಶದಿಂದ ಕಾಶಿಯ ಸ್ಕೇಟಿಂಗ್ ಸ್ಕೂಲ್ ವಿದ್ಯಾರ್ಥಿಗಳು ತರಬೇತುದಾರರಾದ ರಾಜೇಶ ಜೋಗ್ರ ನೇತೃತ್ವದಲ್ಲಿ ಭಾರತ ಜೋಡಿಸುವ 5 ಸಾವಿರ ಕಿಮೀ ಸ್ಕೇಟಿಂಗ್ ಯಾತ್ರೆ ಕೈಗೊಂಡಿದ್ದಾರೆ.
ಜಮ್ಮು- ಕಾಶ್ಮೀರದಿಂದ ಆರಂಭವಾದ ಭಾರತ ಪರಂಪರೆ ಸಾರುವ ಯಾತ್ರೆಯು ತಮಿಳುನಾಡಿನ ಮೂಲಕ ಭಾರತದ ದಕ್ಷಿಣದ ತುತ್ತತುದಿ ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದರು ಧ್ಯಾನ ನಡೆಸಿದ ಪವಿತ್ರ ಸ್ಥಳದ ತನಕ ಸಾಗಲಿದೆ.
ಬುಧವಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಾಗುವಾಗ ಕುಮಟಾದಲ್ಲಿ ಈ ಸ್ಕೇಟಿಂಗ್‌ ಪಟುಗಳಿಗೆ ಅಭೂತಪೂರ್ವ ಸ್ವಾಗತ ನೀಡಲಾಯಿತು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಈ ಸಂದರ್ಭದಲ್ಲಿ ಸ್ಕೇಟಿಂಗ್ ತಂಡದ ಗಾಯತ್ರಿ ನಾಡಿಗ ಮಾತನಾಡಿ ಇವರೆಗೆ 3750 ಕಿಮೀ ಸಾಗಿ ಬಂದಿದ್ದೇವೆ. 90 ದಿನದ ಈ ಯಾತ್ರೆಯಲ್ಲಿ 20 ಜನರ ತಂಡವು 10 ಸಾವಿರ ಗ್ರಾಮಗಳನ್ನು ಸಂದರ್ಶನ ಮಾಡಲಿದೆ. ಈ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ, ಇತಿಹಾಸದ ಭವ್ಯತೆಯನ್ನು ಜನರಿಗೆ ಮನದಟ್ಟು ಮಾಡುತ್ತೇವೆ ಎಂದು ತಿಳಿಸಿದರು.
ಯಾತ್ರೆಯಾದ್ಯಂತ ಭಾರತ ವಿಕಾಸ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಿಜೆಪಿ ಸೇರಿದಂತೆ ಎಲ್ಲರೂ ಅತ್ಯಂತ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಶಾಸಕ ದಿನಕರ್ ಶೆಟ್ಟಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ, ಕುಮಾರ ಕಾರ್ಕಾಂಡೇಯ ಮೊದಲದವರು ಸ್ವಾಗತಿಸಿದರು.

ಇಂದಿನ ಪ್ರಮುಖ ಸುದ್ದಿ :-   ಶಾಸಕ ಮಾಡಾಳು ವಿರೂಪಾಕ್ಷಪ್ಪ ಐದು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ : ನ್ಯಾಯಾಲಯ ಆದೇಶ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 2

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement