ಕುಮಟಾ: ಕುತೂಹಲಕ್ಕೆ ಕಾರಣವಾದ ಮುಸ್ಗುಪ್ಪೆ ಗ್ರಾಮದಲ್ಲಿ ಪತ್ತೆಯಾದ ಗುಹೆ..!

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರಿನ ಮುಸ್ಗುಪ್ಪೆ ಗ್ರಾಮದ ಬಳಿ ಗುಹೆಯೊಂದು ಪತ್ತೆಯಾಗಿದ್ದು, ಇದು ಸ್ಥಳೀಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಕುಮಟಾ ತಾಲೂಕಿನ ಮೂರೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮುಸ್ಗುಪ್ಪೆಯಲ್ಲಿ ರಸ್ತೆ ಬದಿಯಲ್ಲಿ ಮಣ್ಣು ತೆಗೆಯುತ್ತಿರುವಾಗ ಇದು ಕಂಡುಬಂದಿದೆ. ಇದು ಮಣ್ಣಿನ ಮಧ್ಯೆ ಪೊಳ್ಳು ಇರಬಹುದು ಎಂದು ಮಣ್ಣನ್ನು ತೆಗೆಯುತ್ತ ಹೋದಾಗ ಈ ಗುಹೆಯ ಆಳ ಿನ್ನಷ್ಟು ಜಾಸ್ತಿಯಾಗಿರುವುದು ಕಂಡುಬಂದಿದೆ, ಸುಮಾರು 8 ಅಡಿ ಆಳದಲ್ಲಿ ಗುಹೆ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಆದರೆ, ಯಾವುದೇ ಐತಿಹಾಸಿಕ ಕುರುಹುಗಳು ಈವರೆಗೆ ಕಂಡುಬಂದಿಲ್ಲ. ಇದು ಮತ್ತೊಂದು ಗುಹೆಗೆ ಸಂಪರ್ಕ ಕಲಿಸುತ್ತದೆಯೋ ಎಂಬುದು ಗೊತ್ತಾಗಿಲ್ಲ.
ಈ ಗುಹೆಯ ಬಗ್ಗೆ ತಜ್ಞರ ತಂಡ ಪರಿಶೀಲಿಸಿದ ಬಳಿಕವೇ ಸತ್ಯಾಸತ್ಯತೆ ತಿಳಿದುಬರಬೇಕಿದೆ. ಗುಹೆ ಪತ್ತೆಯಾದ ಸ್ಥಳ ಜನಾಕರ್ಷಣೆಯ ತಾಣವಾಗಿದ್ದು, ಜನರ ಕುತೂಹಲ ಹೆಚ್ಚು ಮಾಡಿದ್ದಂತೂ ಹೌದು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement