ಊಟದಲ್ಲಿ ಕೂದಲು ಸಿಕ್ಕಿತೆಂದು ಹೆಂಡತಿಯ ತಲೆಯನ್ನೇ ಬೋಳಿಸಿದ ಪತಿ ಮಹಾಶಯ..!

ಪಿಲಿಭಿತ್ (ಉತ್ತರ ಪ್ರದೇಶ): ಊಟ ಮಾಡುವಾಗ ಆಹಾರದಲ್ಲಿ ತಲೆಕೂದಲು ಸಿಕ್ಕಿತೆಂದು ಕೋಪಗೊಂಡ ಪತಿ ಮಹಾಶಯನೊಬ್ಬ ಹೆಂಡತಿಯ ತಲೆಯನ್ನೇ ಬೋಳಿಸಿದ ಘಟನೆ ಉತ್ತರ ಪ್ರದೇಶದ ಪಿಲಿಭಿತ್​​ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಪಿಲಿಭಿತ್ ಜಿಲ್ಲೆಯ ಗಜ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಮಿಲಾಕ್ ಗ್ರಾಮದ ಜಹೀರುದ್ದೀನ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಶುಕ್ರವಾರ ರಾತ್ರಿ ಮನೆಯಲ್ಲಿ ಅಡುಗೆ ಮಾಡಿ ಪತಿ, ಅತ್ತೆ ಹಾಗೂ ಮಾವನಿಗೆ ಊಟ ಬಡಿಸಿದ್ದಳು. ಆಗ ಆಹಾರದಲ್ಲಿ ಕೂದಲಿನ ಎಳೆಯನ್ನು ಕಂಡು ಗಂಡ ಕೋಪಗೊಂಡಿದ್ದಾನೆ.
ಅಷ್ಟಕ್ಕೆ ಆಕೆಯನ್ನು ಥಳಿಸಿ, ತನ್ನ ಅಪ್ಪ-ಅಮ್ಮನ ಸಹಾಯದಿಂದ ಪತ್ನಿಯ ತಲೆ ಬೋಳಿಸಿದ್ದಾನೆ. ಪತ್ನಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ. ಈಕೆ ಏಳು ವರ್ಷಗಳ ಹಿಂದೆ ಜಹೀರುದ್ದೀನ್​​ನನ್ನು ಮದುವೆಯಾಗಿದ್ದು, ಅಂದಿನಿಂದ 15 ಲಕ್ಷ ರೂ. ವರದಕ್ಷಿಣೆಗಾಗಿ ತನಗೆ ದಿನನಿತ್ಯ ಕಿರುಕುಳ ನೀಡುತ್ತಿರುವುದಾಗಿಯೂ ಅವಳು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಗಂಡ ಜಹೀರುದ್ದೀನ್, ಮಾವ ಜಮೀರುದ್ದೀನ್ ಮತ್ತು ಅತ್ತೆ ಜುಲೇಖಾ ಖಾತೂನ್ ವಿರುದ್ಧ ವರದಕ್ಷಿಣೆ ಕಾಯ್ದೆ ಮತ್ತು ಐಪಿಸಿಯ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಜಹೀರುದ್ದೀನ್​​ನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ನಂತರ ಈಗ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ರಾಹುಲ್ ಗಾಂಧಿಗೆ ನೋಟಿಸ್: ವರದಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement