ಕರ್ನಾಟಕ ಸೇರಿ ದೇಶದ 19 ರಾಜ್ಯಗಳಲ್ಲಿ 10%ಕ್ಕಿಂತ ಕಡಿಮೆ ಮಹಿಳಾ ಶಾಸಕರು: ಸರ್ಕಾರದ ಅಂಕಿಅಂಶಗಳು

ನವದೆಹಲಿ: ಸರಕಾರದ ಅಂಕಿಅಂಶಗಳ ಪ್ರಕಾರ ಸಂಸತ್ತಿನಲ್ಲಿ ಮತ್ತು ದೇಶದ ಬಹುತೇಕ ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯವು ಶೇಕಡಾ 15ಕ್ಕಿಂತ ಕಡಿಮೆಯಿದೆ. 19 ರಾಜ್ಯಗಳ ವಿಧಾನಸಭೆಗಳು ಶೇಕಡಾ 10 ಕ್ಕಿಂತ ಕಡಿಮೆ ಮಹಿಳಾ ಶಾಸಕರನ್ನು ಹೊಂದಿವೆ.
ಡಿಸೆಂಬರ್ 9 ರಂದು ಲೋಕಸಭೆಯಲ್ಲಿ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಮಂಡಿಸಿದ ಮಾಹಿತಿಯ ಪ್ರಕಾರ, ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ಸಿಕ್ಕಿಂ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಶೇ.10ಕ್ಕಿಂತ ಕಡಿಮೆ ಮಹಿಳಾ ಶಾಸಕರಿದ್ದಾರೆ
ಬಿಹಾರ (10.70), ಛತ್ತೀಸ್‌ಗಢ (14.44), ಹರಿಯಾಣ (10), ಜಾರ್ಖಂಡ್ (12.35), ಪಂಜಾಬ್ (11.11), ರಾಜಸ್ಥಾನ (12), ಉತ್ತರಾಖಂಡ (11.43), ಉತ್ತರ ಪ್ರದೇಶ (11.66), ಪಶ್ಚಿಮ ಬಂಗಾಳ (13.70) ಮತ್ತು ದೆಹಲಿ (11.43) ರಾಜ್ಯಗಳ ವಿಧಾನಸಭೆಗಳು 10% ಕ್ಕಿಂತ ಹೆಚ್ಚು ಮಹಿಳಾ ಶಾಸಕರನ್ನು ಹೊಂದಿವೆ.
ಇತ್ತೀಚೆಗೆ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ, ಚುನಾಯಿತ ಪ್ರತಿನಿಧಿಗಳಲ್ಲಿ 8.2 ಪ್ರತಿಶತ ಮಾತ್ರ ಮಹಿಳೆಯರು. ಹಿಮಾಚಲ ಪ್ರದೇಶದಲ್ಲಿ, ಈ ಬಾರಿ ಒಬ್ಬ ಮಹಿಳೆ ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಪ್ರಮುಖ ಸುದ್ದಿ :-   ತೆರಿಗೆ ದಾಳಿಯಲ್ಲಿ ದಾಖಲೆ ಪ್ರಮಾಣದ ನಗದು ಹಣ ವಶ : ತನ್ನ ಪಕ್ಷದ ಸಂಸದರಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್

ಅಂಕಿಅಂಶಗಳ ಪ್ರಕಾರ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳಾ ಸಂಸದರ ಪಾಲು ಕ್ರಮವಾಗಿ ಶೇ.14.94 ಮತ್ತು ಶೇ.14.05 ರಷ್ಟಿದೆ. ಅದೇ ಸಮಯದಲ್ಲಿ, ರಾಷ್ಟ್ರದಾದ್ಯಂತ ವಿಧಾನಸಭೆಗಳಲ್ಲಿ ಮಹಿಳಾ ಶಾಸಕರ ಸರಾಸರಿ ಸಂಖ್ಯೆ ಕೇವಲ ಎಂಟು ಶೇಕಡಾ.
ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳಾ ಸಂಸದರು ಮತ್ತು ಶಾಸಕರ ಪ್ರಾತಿನಿಧ್ಯದ ಬಗ್ಗೆ ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಪ್ರಶ್ನೆಗಳನ್ನು ಕೇಳಿದರು ಹಾಗೂ ಅವರು ಒಟ್ಟಾರೆ ಪ್ರಾತಿನಿಧ್ಯವನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಂದ್ರವನ್ನು ಕೇಳಿದರು. ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ತರಲು ಸರ್ಕಾರಕ್ಕೆ ಯಾವುದೇ ಯೋಜನೆ ಇದೆಯೇ ಎಂದು ಅವರು ಪ್ರಶ್ನಿಸಿದರು.
ಅದಕ್ಕೆ ರಿಜಿಜು, “ಲಿಂಗ ನ್ಯಾಯವು ಸರ್ಕಾರದ ಪ್ರಮುಖ ಬದ್ಧತೆಯಾಗಿದೆ. ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿಗೆ ತರುವ ಮೊದಲು ಎಲ್ಲಾ ರಾಜಕೀಯ ಪಕ್ಷಗಳು ಒಮ್ಮತದ ಆಧಾರದ ಮೇಲೆ ಈ ವಿಷಯವನ್ನು ಎಚ್ಚರಿಕೆಯಿಂದ ಚರ್ಚಿಸಬೇಕಾಗಿದೆ” ಎಂದು ಹೇಳಿದರು.

ಇತ್ತೀಚೆಗೆ, ಬಿಜು ಜನತಾ ದಳ (ಬಿಜೆಡಿ), ಶಿರೋಮಣಿ ಅಕಾಲಿದಳ (ಎಸ್‌ಎಡಿ), ಜನತಾ ದಳ ಯುನೈಟೆಡ್ ಜೆಡಿ (ಯು) ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಂತಹ ರಾಜಕೀಯ ಪಕ್ಷಗಳು ಸಂಸತ್ತಿನಲ್ಲಿ ಹೊಸದಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ ಅಂಗೀಕರಿಸುವಂತೆ ಸರ್ಕಾರವನ್ನು ಒತ್ತಾಯಿಸಿವೆ.
ಕೆಲವು ದಿನಗಳ ಹಿಂದೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕರೆದಿದ್ದ ವ್ಯವಹಾರ ಸಲಹಾ ಸಮಿತಿಯ ಸಭೆಯಲ್ಲಿ, ತೃಣಮೂಲ ಕಾಂಗ್ರೆಸ್‌ನ ಸುದೀಪ್ ಬಂಡೋಪಾಧ್ಯಾಯ ಅವರು ಈ ವಿಷಯದ ಬಗ್ಗೆ ಸರ್ವಪಕ್ಷ ಸಭೆಗೆ ಒತ್ತಾಯಿಸಿದರು, ಇದನ್ನು ಇತರ ಪಕ್ಷಗಳು ಬೆಂಬಲಿಸಿದವು.
ಎಸ್‌ಎಡಿ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವ ಸಮಯ ಬಂದಿದೆ ಎಂದು ಹೇಳಿದ್ದರು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮಸೂದೆಯನ್ನು ಮೊದಲು 1996 ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಯಿತು.ಇದನ್ನು 2010 ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು, ಆದರೆ 15 ನೇ ಲೋಕಸಭೆಯ ವಿಸರ್ಜನೆಯ ನಂತರ, ಮಸೂದೆಯು ಲ್ಯಾಪ್ ಆಗಿತ್ತು.

ಪ್ರಮುಖ ಸುದ್ದಿ :-   ವಿಶ್ವದ ದೊಡ್ಡ ಪ್ರಮಾಣದ ಸೌರಶಕ್ತಿ ಅಭಿವರ್ಧಕರ ಪಟ್ಟಿಯಲ್ಲಿ ಅದಾನಿ ಗ್ರೀನ್‌ ಗೆ 2ನೇ ಸ್ಥಾನ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement