ಯಾರೊಬ್ಬರ ಜಾತಿ, ಧರ್ಮವನ್ನು ಎಂದಿಗೂ ಉಲ್ಲೇಖಿಸಬೇಡಿ: ಲೋಕಸಭೆಯಲ್ಲಿ ಸದಸ್ಯರಿಗೆ ಎಚ್ಚರಿಕೆ ನೀಡಿದ ಸ್ಪೀಕರ್ ಓಂ ಬಿರ್ಲಾ

ನವದೆಹಲಿ: ಸದನದಲ್ಲಿ ಯಾರೊಬ್ಬರ ಜಾತಿ ಅಥವಾ ಧರ್ಮವನ್ನು ಉಲ್ಲೇಖಿಸಬೇಡಿ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೋಮವಾರ ಸದಸ್ಯರಿಗೆ ಎಚ್ಚರಿಕೆ ನೀಡಿದರು.
ನಾನು ಕೆಳಜಾತಿಗೆ ಸೇರಿದವರಾಗಿರುವುದರಿಂದ ಹಿಂದಿಯಲ್ಲಿ ನನ್ನ ಪ್ರಾವೀಣ್ಯತೆಯ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲವು ಟೀಕೆಗಳನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಎ. ಆರ್. ರೆಡ್ಡಿ ಆರೋಪಿಸಿದ ನಂತರ ಅವರ ಎಚ್ಚರಿಕೆ ಬಂದಿದೆ.
ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ತಮ್ಮದೇ ಸಾಮಾಜಿಕ ವರ್ಗ ಉಲ್ಲೇಖಿಸಲು ರೆಡ್ಡಿ ಬಳಸಿದ ಪದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಸ್ಪೀಕರ್‌, ಜನರು ತಮ್ಮ ಜಾತಿ ಮತ್ತು ಧರ್ಮಕ್ಕಾಗಿ ಸಂಸದರನ್ನು ಲೋಕಸಭೆಗೆ ಆಯ್ಕೆ ಮಾಡಿಲ್ಲ ಎಂದು ಹೇಳಿದರು. ಇಲ್ಲಿರುವವರು ಸದನದಲ್ಲಿ ಇಂತಹ ಪದಗಳನ್ನು ಎಂದಿಗೂ ಬಳಸಬಾರದು. ಇಲ್ಲದಿದ್ದರೆ ಅಂತಹ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೆಡ್ಡಿ ನಂತರ ಕಾಂಗ್ರೆಸ್ ಸದಸ್ಯರಿಗೆ ಸ್ಪೀಕರ್‌ ಬಗ್ಗೆ ಟೀಕೆಗಳನ್ನು ಮಾಡಬೇಡಿ ಎಂದು ಸೂಚಿಸಿದರು. ಅವರ ಪ್ರಶ್ನೆಯನ್ನು ಕೇಳುವಾಗ, ಅವರನ್ನು “ಅಡ್ಡಿಪಡಿಸಬೇಡಿ” ಎಂದು ಬಿರ್ಲಾ ಸೂಚಿಸಿದರಲ್ಲದೆ ನಂತರ ಸದನದಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ತಮ್ಮ ಪಕ್ಷದ ಸದಸ್ಯರೊಂದಿಗೆ ಮಾತನಾಡಲು ಮತ್ತು ಸ್ಪೀಕರ್ ಬಗ್ಗೆ ಅಂತಹ ಟೀಕೆಗಳನ್ನು ಎಂದಿಗೂ ಮಾಡದಂತೆ ಹೇಳಿ ಎಂದು ಸೂಚಿಸಿದರು.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರುಪಾಯಿ ಐಸಿಯು (ತೀವ್ರ ನಿಗಾ ಘಟಕ) ದಲ್ಲಿತ್ತು ಎಂದು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಬಗ್ಗೆ ರೆಡ್ಡಿ ಅವರು ಪ್ರಶ್ನೆಯನ್ನು ಮುಂದಿಟ್ಟಾಗ ಸಮಸ್ಯೆ ಪ್ರಾರಂಭವಾಯಿತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾಧ್ಯಕ್ಷರು ನಿಮ್ಮೆ ಪ್ರಶ್ನೆಯನ್ನು ಕೇಳಿ ಎಂದು ಸೂಚಿಸಿದಾಗ, ರೆಡ್ಡಿ ಅವರು, “ಸರ್, ನೀವು ಅಡ್ಡಿಪಡಿಸಲು ಸಾಧ್ಯವಿಲ್ಲ” ಎಂದು ಮರುಪ್ರಶ್ನಿಸಿದರು. ಸ್ಪೀಕರ್ ವಿರುದ್ಧ ಇಂತಹ ಟೀಕೆಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ ನಂತರ ಬಿರ್ಲಾ ಅವರು ರೆಡ್ಡಿ ಅವರಿಗೆ ಪ್ರಶ್ನೆಯನ್ನು ಮುಂದುವರಿಸಲು ಅವಕಾಶ ನೀಡಿದರು.
ರೆಡ್ಡಿ ಅವರ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸದಸ್ಯರು “ದುರ್ಬಲ ಹಿಂದಿ” ಯಲ್ಲಿ ಕೇಳಿದ ಪ್ರಶ್ನೆಗೆ “ದುರ್ಬಲ ಹಿಂದಿಯಲ್ಲಿ ಉತ್ತರಿಸುತ್ತೇನೆ ಎಂದು ಹೇಳಿದರು.
ಈ ಹಿಂದೆ ಡಾಲರ್ ಎದುರು ರೂಪಾಯಿ ಮೌಲ್ಯದ ಬಗ್ಗೆ ಮೋದಿಯವರ ಟೀಕೆಗಳನ್ನು ಉಲ್ಲೇಖಿಸಿದ ಕಾಂಗ್ರೆಸ್ ಸದಸ್ಯರು ಆ ಕಾಲದ ಆರ್ಥಿಕ ಸೂಚಕಗಳನ್ನೂ ಉಲ್ಲೇಖಿಸಬೇಕಿತ್ತು ಎಂದು ಅವರು ಹೇಳಿದರು. “ಆಗ ಆರ್ಥಿಕತೆಯು ಖಂಡಿತವಾಗಿಯೂ ಐಸಿಯುನಲ್ಲಿತ್ತು. ಭಾರತವನ್ನು ದುರ್ಬಲ ಐದರಲ್ಲಿ ಇರಿಸಲಾಗಿತ್ತು ಎಂದು ಅವರು ಹೇಳಿದರು.
ಇಂದು, ಕೋವಿಡ್ ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಹೊರತಾಗಿಯೂ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಇದು ಹೆಮ್ಮೆಯ ವಿಷಯವಾಗಿದೆ. ಆದರೆ ಅವರು ಅದನ್ನು ಗೇಲಿ ಮಾಡುತ್ತಿದ್ದಾರೆ, ನಮ್ಮ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ಅವರು ಅಸೂಯೆಯಿಂದ ಇಂತಹ ವಿಷಯಗಳನ್ನು ಮಾತನಾಡುವುದು ದುಃಖಕರವಾಗಿದೆ” ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement