ಮೈಸೂರಿನಲ್ಲಿ ದಂಪತಿಯ ಗೂಂಡಾಗಿರಿ: ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಮಚ್ಚು ತೋರಿಸಿ ಆವಾಜ್‌

ಮೈಸೂರು: ಬಿಲ್ಡಿಂಗ್ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಎಸ್​ಆರ್​ಟಿಸಿ ಅಧಿಕಾರಿಗಳ ಮೇಲೆ ದಂಪತಿ ಗೂಂಡಾಗಿರಿ ಮಾಡಿರುವ ಘಟನೆ ಮೈಸೂರಿನ ಸಾತಗಳ್ಳಿ ಬಸ್ ಡಿಪೋ ಆವರಣದಲ್ಲಿ ನಡೆದಿದೆ.
ಮೈಸೂರು ಸಾತಗಳ್ಳಿ ಡಿಪೋ ಬಳಿ ಅಧಿಕಾರಿ ವಿರುದ್ಧ ಕಾಂಗ್ರೆಸ್‌ ಮುಖಂಡ ಶಫಿ ಮತ್ತವರ ಪತ್ನಿಯ ಮಚ್ಚು ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಶಾಸಕ ತನ್ವಿರ್ ಸೇಠ್ ಆಪ್ತ ಅಂತ ಹೇಳಲಾಗುತ್ತಿರುವ ಶಫಿ ಹಾಗೂ ಆತನ ಪತ್ನಿ ಮೆಹಬೂಬ ಉನ್ನಿಸಾ ಎಂಬವರು ಮಚ್ಚು ಹಿಡಿದು ಕೆಎಸ್‌ಆರ್‌ಟಿಸಿ ಸಿಬ್ಬಂದಿಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾತಗಳ್ಳಿ ಕೆಎಸ್‌ಆರ್‌ಟಿಸಿ ( KSRTC ) ಡಿಪೋ ಬಳಿ ಸಂಸ್ಥೆಗೆ ಸೇರಿದ್ದ ಹಲವು ಮಳಿಗೆಗಳನ್ನ ಶಫಿ ಬಾಡಿಗೆಗೆ ಪಡೆದಿದ್ದರು. ಅದನ್ನ ಕೆಲವು ಶಿಕ್ಷಣ ಸಂಸ್ಥೆ ಸೇರಿದಂತೆ ಬೇರೆ ಖಾಸಗಿ ವ್ಯಕ್ತಿಗಳಿಗೆ ಸಬ್ ಲೀಸ್‌ಗೆ ನೀಡಿದ್ದರು. ಎಲ್ಲಾ ಮಳಿಗೆಗಳಿಗೆ ಬಾಡಿಗೆ ಮೊತ್ತ ನಿಗದಿಪಡಿಸಲಾಗಿತ್ತು. ಎಲ್ಲಾ ಬಾಡಿಗೆಯನ್ನು ಶಫಿ ಪಡೆದಿದ್ದು, ಅದನ್ನು ಕೆಎಸ್‌ಆರ್‌ಟಿಸಿಗೆ ಬಾಡಿಗೆ ಪಾವತಿಸಿಲ್ಲ ಎಂಬುದು ಆರೋಪ.

ಬಾಡಿಗೆ ಕಟ್ಟದ ಕಾರಣ ಡಿಪೋ ಅಧಿಕಾರಿಯೊಬ್ಬರು ಅವರಿಗೆ ನೋಟಿಸ್ ನೀಡಿದ್ದಾರೆ. ಇದರಿಂದ ಅಧಿಕಾರಿ ಮೇಲೆ ರೊಚ್ಚಿಗೆದ್ದ ಶಫಿ ಪತ್ನಿ ಗಂಡನ ಜೊತೆ ಡಿಪೋಗೆ ಬಂದು ಕೈಯಲ್ಲಿ ಮಚ್ಚು ಹಿಡಿದು ಆವಾಜ್ ಹಾಕಿದ್ದಾರೆ. ಆರೋಪಿ ಕಾಂಗ್ರೆಸ್ ಮುಖಂಡ ಶಫಿ ಪತ್ನಿ ಪೊಲೀಸರ‌ ಎದುರಿನಲ್ಲೇ ಅಧಿಕಾರಿಗಳಿಗೆ ಮಚ್ಚು ತೋರಿಸಿ ಧಮ್ಕಿ ಹಾಕಿದ್ದಾರೆ. ಶಫಿ ಮತ್ತು ಅವರ ಪತ್ನಿಯ ಗೂಂಡಾಗಿರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಂಪತಿ ಎಸ್ಕೇಪ್..!
ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಶಫಿ ತನ್ನ ಪತ್ನಿಯೊಂದಿಗೆ ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಆರೋಪಿಗಳ ಪತ್ತೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement