ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ)ಯ ಗಗನಯಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸುವ ಮುಂದಿನ ತಲೆಮಾರಿನ ವ್ಯೋಮನೌಕೆ ತನ್ನ 26 ದಿನಗಳ ಕಾಲ ಚಂದ್ರನ ಕಕ್ಷೆಯಲ್ಲಿ ಕಾರ್ಯನಿರ್ವಹಿಸಿ ಮರಳಿ ಭೂಮಿಗೆ ಬಂದಿಳಿದಿದೆ.
ಬಾಹ್ಯಾಕಾಶದ ಮೂಲಕ 14 ಲಕ್ಷ ಮೈಲುಗಳಷ್ಟು ಪ್ರಯಾಣಿಸಿದ ನಂತರ, ನಾಸಾದ ಓರಿಯನ್ ಬಾಹ್ಯಾಕಾಶ ನೌಕೆಯು ಆರ್ಟೆಮಿಸ್ I ಮಿಷನ್‌ನ ಅಂತಿಮ ಪ್ರಮುಖ ಮೈಲಿಗಲ್ಲು ಭೂಮಿಯ ಮೇಲೆ ಇಳಿದಿದೆ.
ಓರಿಯನ್ ಬಾಹ್ಯಾಕಾಶ ನೌಕೆಯು ಪೆಸಿಫಿಕ್ ಮಹಾಸಾಗರದಲ್ಲಿ ಧುಮುಕುಕೊಡೆಯ ನೆರವಿನ ಸ್ಪ್ಲಾಶ್‌ಡೌನ್ ಅನ್ನು ಪೂರ್ಣಗೊಳಿಸಿದೆ ಎಂದು ಬಾಹ್ಯಾಕಾಶ ಸಂಸ್ಥೆ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.
ಈ ರೀತಿ ಅಂತರಿಕ್ಷಕ್ಕೆ ಕಳುಹಿಸಿದ ವ್ಯೋಮ ನೌಕೆಯನ್ನು ಮತ್ತೆ ಭೂಮಿಗೆ ಕರೆಸಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ಓರಿಯನ್ ವ್ಯೋಮನೌಕೆಯ ಓರಿಯನ್ ಕ್ಸಾಪ್ಯೂಲ್ ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ಪ್ರವೇಶಿಸಿ, ನಂತರ ಭೂಮಿಯ ವಾತಾವರಣ ಪ್ರವೇಶಿಸಿದೆ. ಬಳಿಕ ಪ್ಯಾರೂಚೂಟ್ ತೆರೆದುಕೊಂಡಿದೆ. ನಿಗದಿಯಂತೆ ಈ ಕ್ಯಾಪ್ಸೂಲ್ ಪೆಸಿಫಿಕ್ ಸಮುದ್ರಕ್ಕೆ ಬಿದ್ದಿದೆ. ಅಲ್ಲಿದ್ದ ನಾಸಾ ತಂಡವು ಈ ಗಗನನೌಕೆಯ ಕ್ಸಾಪ್ಯೂಲ್ ಅನ್ನು ಸ್ವಾಧೀನಕ್ಕೆ ತೆಗೆದುಕೊಂಡಿದೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಮಾನವಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆ ಎಂದು ಹೇಳಲಾಗಿದೆ. ನಾಸಾವು ಓರಿಯನ್ ವ್ಯೋಮನೌಕೆಯನ್ನು ಪರೀಕ್ಷಾರ್ಥವಾಗಿ ಕಳುಹಿಸಿತ್ತು. ಅದರೊಳಗೆ ಯಾವುದೇ ಗಗನಯಾನಿಗಳು ಇರಲಿಲ್ಲ.
ಓರಿಯನ್ ವ್ಯೋಮನೌಕೆಯ ಇನ್ನಷ್ಟು ಸಂಕೀರ್ಣ ಮಿಷನ್‌ಗಳನ್ನು ನಡೆಸಲು ನಾಸಾ ನಿರ್ಧರಿಸಿದೆ. 2024ರ ಬಳಿಕ ಇಂತಹ ಕಾರ್ಯಾಚರಣೆ ಕೈಗೊಳ್ಳಲು ಯೋಜಿಸಿದೆ. 2025 ಅಥವ 2026ರಲ್ಲಿ ಮಾನವಸಹಿತ ಯಾನ ಕೈಗೊಳ್ಳಲು ಉದ್ದೇಶೀಸಿರುವ ನಾಸಾ ವ್ಯೋಮನೌಕೆಯಲ್ಲಿ ಗಗನಯಾನಿಗಳನ್ನು ಕಳುಹಿಸಿ ಚಂದ್ರದ ಮೇಲ್ಮೈಗೆ ಇಳಿಸಿ, ಬಳಿಕ ವಾಪಸ್ ಭೂಮಿಗೆ ಮರಳುವ ಯೋಜನೆ ರೂಪಿಸಿದೆ. ಅಲ್ಲದೆ, ಮಂಗಳ ಗ್ರಹಕ್ಕೆ ಮಾನವ ಸಹಿತ ವ್ಯೋಮ ನೌಕೆಯ ಕಾರ್ಯಾಚರಣೆಗಳಿಗೆ ತಯಾರಿ ಮಾಡುತ್ತದೆ” ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.
ಐವತ್ತು ವರ್ಷಗಳ ಹಿಂದೆ ಅಪೊಲೊ 17 ಗಗನನೌಕೆಯ ಮೂಲಕ ಮೊದಲ ಬಾರಿಗೆ ಚಂದ್ರನ ಮೇಲೆ ಮಾನವ ಕಾಲಿಟ್ಟಿದ್ದ. ಇದೀಗ ನಾಸಾವು ಕೈಗೊಳ್ಳುವ ಯೋಜನೆಗೆ ಆರ್ಟಿಮಿಸ್ ಎಂದು ಹೆಸರಿಡಲಾಗಿದೆ. ಗ್ರೀಕ್ ಪುರಾಣದ ಅಪೊಲೊನ ತಂಗಿ ಆರ್ಟಿಮಿಸ್.
ಅಪೊಲೊದ ಮೂಲಕ ಅಂದು ಐತಿಹಾಸಿಕ ಸಾಧನೆ ಮಾಡಲಾಗಿತ್ತು. ಆದರೆ, ಈಗಿನ ಉದ್ದೇಶ ಬೇರೆ ರೀತಿಯದ್ದು. ಚಂದ್ರನಲ್ಲಿ ನೆಲೆಸುವ ಸಾಧ್ಯತೆ ಕುರಿತು ಪರಿಶೀಲಿಸುವುದು ಮುಂದಿನ ಚಂದ್ರಯಾನದ ಪ್ರಮುಖ ಉದ್ದೇಶ ಎಂದು ನಾಸಾ ತಿಳಿಸಿದೆ.
ಈ ವ್ಯೋಮನೌಕೆಯು ಚಂದ್ರನ ಕಕ್ಷೆಯಿಂದ ಭೂಮಿಗೆ ಗಂಟೆಗೆ 40 ಸಾವಿರ ಕಿ.ಮೀ. ವೇಗದಲ್ಲಿ ವಾಪಸ್ ಬಂದಿದೆ. ಭೂಮಿಯ ವಾತಾವರಣ ಪ್ರವೇಶಿಸಿದಾಗ ಈ ಕ್ಯಾಪ್ಸೂಲ್‌ನ ನಿರ್ದಿಷ್ಟ ಯಂತ್ರಗಳು ಚಾಲು ಆಗಿವೆ. ಗಾಳಿ ಮತ್ತು ಉಷ್ಣತೆಯಿಂದಾಗಿ ಈ ನೌಕೆಯು 3000 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಯಾಗುತ್ತದೆ. ಇಂತಹ ಬಿಸಿಯನ್ನು ತಡೆದೊಕೊಳ್ಳಲು ನೌಕೆಯೊಳಗೆ ರಕ್ಷಣಾತ್ಮಕ ಪದರ ಇರುತ್ತದೆ. ಇದು ಮಾನವ ಸಹಿತ ಗಗನಯಾನದ ಸಂದರ್ಭದಲ್ಲಿ ಬೇಕೇಬೇಕು.
ನಿಮ್ಮ ಕಾಮೆಂಟ್ ಬರೆಯಿರಿ