ಕಳಸಾ ಬಂಡೂರಿ ಯೋಜನೆಗೆ ಅಡ್ಡಗಾಲಾಗಿದ್ದು ಬಿಜೆಪಿ ಸರ್ಕಾರವಲ್ಲವೇ: ಸಿಎಂ ಬೊಮ್ಮಾಯಿಗೆ ವಸಂತ ಲದವಾ ಪ್ರಶ್ನೆ

ಹುಬ್ಬಳ್ಳಿ: ಕಳೆದ ನಾಲ್ಕು ದಶಕಗಳಿಂದ ಉತ್ತರ ಕರ್ನಾಟಕದ ರೈತರು, ಜನಸಾಮಾನ್ಯರು ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿಭಟಿಸುತ್ತಿದ್ದರೆ ಬಿಜೆಪಿ ನಾಯಕರು ರಾಜಕಾರಣ ಮಾಡುತ್ತಿದ್ದಾರೆ. ಯಾರನ್ನೋ ಖುಷಿಪಡಿಸಲು, ನೈಜ ಪರಿಸ್ಥಿತಿ ಮರೆಮಾಚಿ ಮುಖ್ಯಮಂತ್ರಿಗಳು ಮಹದಾಯಿ ವಿಷಯ ತಿರುಚಿ ಅದರಲ್ಲಿಯೂ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ವಸಂತ ಲದವಾ ಟೀಕಿಸಿದ್ದಾರೆ.
ಮಹದಾಯಿ ಕುರಿತು ಮಾತನಾಡಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ೧೯೮೦ರಲ್ಲಿ ಉತ್ತರ ಕರ್ನಾಟಕ ಭಾಗದ ನೀರಿನ ಸಮಸ್ಯೆಯ ಪರಿಹಾರಕ್ಕೆ ಸಮಿತಿ ರಚಿಸಿದ್ದು ಕಾಂಗ್ರೆಸ್, ಬಿಜೆಪಿ ಅಲ್ಲ. ೧೯೭೪ರಲ್ಲಿ ಕುಡಿಯುವ ನೀರಿಗಾಗಿ ಮಲಪ್ರಭಾ ನದಿಗೆ ನವಿಲು ತೀರ್ಥದಲ್ಲಿ ಜಲಾಶಯ ನಿರ್ಮಿಸಿದ್ದು ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿ ಅಲ್ಲ ಎಂದು ಹೇಳಿದ್ದಾರೆ

ಕಳಸಾ-ಬಂಡೂರಿ ಯೋಜನೆ ಪ್ರಾರಂಭಿಸಿದ್ದು ಕಾಂಗ್ರೆಸ್ – ಬಿಜೆಪಿ ಅಲ್ಲ
ಧಾರವಾಡ, ಗದಗ, ಬೆಳಗಾವಿ ಜಿಲ್ಲೆಗಳಿಗೆ ಕುಡಿಯುವ ನೀರಿನ ಗಂಭೀರ ಪರಿಸ್ಥತಿಗೆ ಪರಿಹರಿಸಲು ೭.೫೬ ಟಿಎಂಸಿ ನೀರು ಕಳಸಾ ಬಂಡೂರಿ ತಿರುವು ಯೋಜನೆ ೨೦೦೧ರಲ್ಲಿ ಪ್ರಾರಂಭಿಸಿದ್ದು ಕಾಂಗ್ರೆಸ್ ಸರ್ಕಾರ, ಬಿಜೆಪಿ ಸರ್ಕಾರ ಅಲ್ಲ. ಈ ಯೋಜನೆಗೆ ಪ್ರಾಥಮಿಕ ಹಂತದಿಂದ ಇಲ್ಲಿಯವರೆಗೆ ಅಡ್ಡಗಾಲಾಗಿದ್ದು ಬಿಜೆಪಿ ಎಂಬುದನ್ನು ಮುಖ್ಯ ಮಂತ್ರಿಗಳು ಮೆರೆತರೇ ಅಥವಾ ನಿಜ ಸಂಗತಿ ಮರೆಮಾಚಲು ಪ್ರಯತ್ನಿಸುತ್ತಿದಾರೆಯೇ ಎಂದು ವಸಂತ ಲದವಾ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಪ್ರಯತ್ನದಿಂದ ಅತ್ಯಅವಶ್ಯವಾಗಿದ್ದ ಈ ಯೋಜನೆಗೆ ಕೇಂದ್ರದ ಅನುಮತಿ ದೊರೆಕಿತ್ತು. ಅಂದಿನ ಗೋವಾ ಕಾಂಗ್ರೆಸ್ ಸರ್ಕಾರ ಕೂಡ ಸಹ ಅನುಮತಿಸಿತ್ತು. ಆದರೆ ನಂತರ ಬಂದ ಗೋವಾ ಬಿಜೆಪಿ ಸರ್ಕಾರ ಆಕ್ಷೇಪಣೆ ಸಲ್ಲಿಸಿತ್ತು. ಕೇಂದ್ರದ ಬಿಜೆಪಿ ಸರ್ಕಾರ ಜುಲೈ ೨೦೦೨ರಲ್ಲಿ ಈ ಯೋಜನೆಗೆ ಸ್ಥಗಿತಗೊಳಿಸಿತ್ತಲ್ಲವೇ? ಎಂಬ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಲಿ, ಈ ಯೋಜನೆಗೆ ಬಿಜೆಪಿ ಸರ್ಕಾರ ವಿರೋಧಿಸಿ ನ್ಯಾಯಾಧಿಕರಣಕ್ಕೆ ಮನವಿ ಸಲ್ಲಿಸಿರಲಿಲ್ಲವೇ? ಉತ್ತರಿಸಲಿ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ೮ ರಿಂದ ೧೦ ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ ಬಿಜೆಪಿ ಸರ್ಕಾರ ಇಂದಿಗೂ ಕಳಸಾ ಬಂಡೂರಿ ಯೋಜನೆಯನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ಮತ್ತು ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಾಯಿಸುತ್ತಿಲ್ಲ, ಬದಲಾಗಿ ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ವಸಂತ ಲದವಾ ಹೇಳಿದ್ದಾರೆ.

4 / 5. 2

ಶೇರ್ ಮಾಡಿ :

2 Responses

ನಿಮ್ಮ ಕಾಮೆಂಟ್ ಬರೆಯಿರಿ

advertisement