ಸುವರ್ಣ ಸೌಧದಲ್ಲಿ ಸೋಮವಾರ ಸಾವರ್ಕರ್ ಫೋಟೋ ಅನಾವರಣಕ್ಕೆ ಬಿಜೆಪಿ ಸಿದ್ಧತೆ

posted in: ರಾಜ್ಯ | 0

ಬೆಳಗಾವಿ: ಸೋಮವಾರದಿಂದ (ನಾಳೆಯಿಂದ) ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ವೇಳೆ ಸಾವರ್ಕರ್‌ ಅವರ ಫೋಟೋ ಅನಾವರಣ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿಯಿದ್ದು, ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಮತ್ತೆ ಸಾವರ್ಕರ್ ಸಮಯ ಜೋರಾಗುವ ಸಾಧ್ಯತೆ ಇದೆ. ವಿಧಾನಸಭೆಯಲ್ಲಿ ಗಾಂಧೀಜಿ, ನೆಹರೂ, ಅಂಬೇಡ್ಕರ್, ಸ್ವಾಮಿ ವಿವೇಕಾನಂದರ ಜೊತೆಗೆ ಸಾವರ್ಕರ್ ಫೋಟೋ ಅನಾವರಣ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ.
ಸೋಮವಾರ ಬೆಳಗ್ಗೆ 10:30ಕ್ಕೆ ಸ್ಪೀಕರ್ ಕಾಗೇರಿ ನೇತೃತ್ವದಲ್ಲಿ ಅಧಿವೇಶನ ಆರಂಭಕ್ಕೂ ಮುನ್ನವೇ ಸಾವರ್ಕರ್ ಫೋಟೋ ಅನಾವರಣವಾಗಲಿದೆ ಎನ್ನಲಾಗಿದೆ. ಸದ್ಯಕ್ಕೆ ಸಚಿವಾಲಯದಿಂದ ಸಾವರ್ಕರ್‌ ಭಾವಚಿತ್ರ ಸೇರಿದಂತೆ 7 ಪ್ರಮುಖ ಗಣ್ಯರ ಫೋಟೋಗಳಿಗೆ ಕವರ್ ಹಾಕಿ ಮುಚ್ಚಿಡಲಾಗಿದೆ ಎಂದು ಹೇಳಲಾಗಿದೆ.
ಬಿಜೆಪಿ ಸಾವರ್ಕರ್ ಫೋಟೋ ಅಸ್ತ್ರಕ್ಕೆ ಕಾಂಗ್ರೆಸಿಗರು ಕಿಡಿಕಾರಿದ್ದಾರೆ. ಹೀಗಾಗಿ ಫೋಟೋ ಅನಾವರಣೆ ವೇಳೆ ಗಲಾಟೆಯಾಗುವ ಸಾಧ್ಯತೆಯಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಮಂಗಳೂರು ಲಾಡ್ಜ್ ನಲ್ಲಿ ನಾಲ್ವರು ಆತ್ಮಹತ್ಯೆ

5 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement