ವಿಶ್ವಕಪ್ ಗೆದ್ದ ಮೆಸ್ಸಿ : ಫೈನಲ್‌ನಲ್ಲಿ ಪೆನಾಲ್ಟಿಯಲ್ಲಿ 4-2 ರಿಂದ ಫ್ರಾನ್ಸ್ ಮಣಿಸಿ ಫಿಫಾ ವಿಶ್ವಕಪ್‌-2022 ಗೆದ್ದ ಅರ್ಜೆಂಟೀನಾ

ಲುಸೈಲ್ (ಕತಾರ್) : ಹೆಚ್ಚುವರಿ ಸಮಯದ ನಂತರ 3-3 ಡ್ರಾ ನಂತರ ಪೆನಾಲ್ಟಿಯಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ಅನ್ನು 4-2 ಗೋಲುಗಳಿಂದ ಸೋಲಿಸಿ ಅರ್ಜೆಂಟೀನಾ ಭಾನುವಾರ ಫಿಫಾ ವಿಶ್ವಕಪ್ ಗೆದ್ದುಕೊಂಡಿತು.
ಅರ್ಜೆಂಟೀನಾದ ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಅವರು ಕಿಂಗ್ಸ್ಲಿ ಕೋಮನ್ ಅವರ ಪೆನಾಲ್ಟಿಯನ್ನು ಉಳಿಸಿದರು ಮತ್ತು 1986 ರ ನಂತರ ಅರ್ಜೆಂಟೀನಾಗೆ ಮೊದಲ ವಿಶ್ವ ಪ್ರಶಸ್ತಿ ತಂದುಕೊಡವಲ್ಲಿ ನೆರವಾದರು. ಒಟ್ಟಾರೆಯಾಗಿ ಅರ್ಜೆಂಟೀನಾಕ್ಕೆ ಇದು ಮೂರನೇ ವಿಶ್ವ ಕಪ್‌ ಪ್ರಶಸ್ತಿಯಾಗಿದೆ.
80ನೇ ನಿಮಿಷದ ಪೆನಾಲ್ಟಿ ಸೇರಿದಂತೆ ಎರಡು ನಿಮಿಷಗಳಲ್ಲಿ ಕೈಲಿಯನ್ ಎಂಬಪ್ಪೆ ಎರಡು ಗೋಲು ಗಳಿಸುವುದರೊಂದಿಗೆ ಫ್ರಾನ್ಸ್ ಹಾಗೂ ಅರ್ಜೆಂಟೀನಾ 2-2 ಎರಡು ಗೋಲುಗಳಿಂದ 90 ನಿಮಿಷಗಳ ಕಾಲ ಸಮಬಲ ಸಾಧಿಸಿದವು.
ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ 109 ನೇ ನಿಮಿಷದಲ್ಲಿ ಗೋಲ್‌ ಗಳಿಸುವ ಮೂಲಕ ಅರ್ಜೇಂಟೀನಾ 3-2 ರಿಂದ ಮುನ್ನಡೆ ಸಾಧಿಸಿದ ನಂತರ ಫ್ರಾನ್ಸ್ ಸ್ಟ್ರೈಕರ್ ಮತ್ತೊಂದು ಸ್ಪಾಟ್-ಕಿಕ್‌ನೊಂದಿಗೆ 118 ನೇ ನಿಮಿಷದಲ್ಲಿ ಕೈಲಿಯನ್ ಎಂಬಪ್ಪೆ ಹ್ಯಾಟ್ರಿಕ್ ಪೂರ್ಣಗೊಳಿಸಿದರು.
ಅರ್ಜೆಂಟೀನಾ ಮೊದಲಾರ್ಧದಲ್ಲಿ ಮೆಸ್ಸಿಯೊಂದಿಗೆ 2-0 ಮುನ್ನಡೆ ಸಾಧಿಸಿತು, 23 ನೇ ನಿಮಿಷದ ಪೆನಾಲ್ಟಿಯನ್ನು ಪರಿವರ್ತಿಸುವ ಮೂಲಕ ದಾಖಲೆಯ 26ನೇ ವಿಶ್ವಕಪ್‌ ಪಂದ್ಯದಲ್ಲಿ ಮೆಸ್ಸಿ ಗೋಲು ಗಳಿಸಿದರು.

ಮೆಸ್ಸಿ ಆರಂಭದಿಂದಲೂ ಅದ್ಭುತ ಫಾರ್ಮ್‌ನಲ್ಲಿದ್ದರು, ಪೆನಾಲ್ಟಿ ಸ್ಪಾಟ್‌ನಿಂದ ಗೋಲು ಗಳಿಸುವ ಮೂಲಕ ಅರ್ಜೆಂಟೀನಾಕ್ಕೆ ಆರಂಭಿಕ ಮುನ್ನಡೆ ನೀಡಿದರು. ನಂತರ ಏಂಜೆಲ್ ಡಿ ಮಾರಿಯಾ ಅವರು ಗೋಲು ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು, ಅದು 36 ನಿಮಿಷಗಳ ನಂತರ ಅರ್ಜೆಂಟೀನಾಕ್ಕೆ 2-0 ಮುನ್ನಡೆ ನೀಡಿತು.
ಮತ್ತೊಂದೆಡೆ, ಕೈಲಿಯನ್ ಎಂಬಪ್ಪೆ ಅವರು 97-ಸೆಕೆಂಡ್ ಅವಧಿಯಲ್ಲಿ ಎರಡು ಗೋಲುಗಳನ್ನು ಗಳಿಸಿ ಫ್ರಾನ್ಸ್‌ ತಂಡ ಸಮಬಲ ಸಾಧಿಸುವಂತೆ ಮಾಡಿದರು ಒಂದು ಪೆನಾಲ್ಟಿ, ಇನ್ನೊಂದು ವಾಲಿ ಮೂಲಕ ಗೋಲು ಗಳಿಸಿದ ಎಂಬಪ್ಪೆ ಆಟವನ್ನು ಹೆಚ್ಚುವರಿ ಸಮಯಕ್ಕೆ ಕೊಂಡೊಯ್ದರು.
ಆದರೆ, 108ನೇ ನಿಮಿಷದಲ್ಲಿ ಮೆಸ್ಸಿ ತನ್ನ ಎರಡನೇ ಗೋಲನ್ನು ಹೊಡೆಯುವ ಮೂಲಕ ಅರ್ಜೆಂಟೀನಾವನ್ನು ಮತ್ತೊಮ್ಮೆ ಪ್ರಶಸ್ತಿಯ ಅಂಚಿನಲ್ಲಿ ನಿಲ್ಲಿಸಿದರು. ಆದರೆ ರೋಮಾಂಚಕ ಆಟವನ್ನು ಶೂಟೌಟ್‌ಗೆ ಕೊಂಡೊಯ್ಯಲು ಎಂಬಪ್ಪೆ ಮತ್ತೊಂದು ಗೋಲು ಹೊಡೆದು ಹೆಚ್ಚುವರು ಸಮಯದಲ್ಲಿಯೂ ಮತ್ತೆ ಫ್ರಾನ್ಸ್‌ ಸಮಬಲ ಸಾಧಿಸುವಂತೆ ಮಾಡಿದರು.

ಆದರೆ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ಗೋಲ್‌ಕೀಪರ್ ಎಮಿ ಮಾರ್ಟಿನೆಜ್ ಅವರು ಕಿಂಗ್ಸ್ಲಿ ಕೋಮನ್ ಅವರ ಪೆನಾಲ್ಟಿಯನ್ನು ಅದ್ಭುತವಾಗಿ ತಡೆಯುವ ಮೂಲಕ ಅರ್ಜೆಂಟೀನಾ ವಿಶ್ವಕಪ್‌ ಗೆಲ್ಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಈ ಮೂಲಕ ಸತತ ನಾಲ್ಕು ವಿಶ್ವಕಪ್ ಗೆದ್ದಿದ್ದ ಯುರೋಪಿನ ಓಟ ಕೊನೆಗೊಂಡಿತು. ಕೊನೆಯ ದಕ್ಷಿಣ ಅಮೆರಿಕಾದ ಚಾಂಪಿಯನ್ ಬ್ರೆಜಿಲ್ ಆಗಿತ್ತು. ಅದೂ ಸಹ ಷ್ಯಾದಲ್ಲಿ ನಡೆದ – 2002ರ ಜಪಾನ್ ಮತ್ತು ದಕ್ಷಿಣ ಕೊರಿಯಾದ ಆಯೋಜನೆಯಲ್ಲಿ ನಡೆದ ವಿಶ್ವ ಕಪ್‌ನಲ್ಲಿ.
ಅರ್ಜೆಂಟೀನಾ ತನ್ನ ಹಿಂದಿನ ವಿಶ್ವಕಪ್ ಪ್ರಶಸ್ತಿಗಳನ್ನು 1978 ಮತ್ತು 1986 ರಲ್ಲಿ ಗೆದ್ದುಕೊಂಡಿತು. ಕತಾರ್‌ನಲ್ಲಿನ ಈ ವಿಜಯವು 1993ರ ನಂತರ ಅದರ ಮೊದಲ ಪ್ರಮುಖ ಟ್ರೋಫಿಯಾಗಿದೆ.

ಇದು ಮೆಸ್ಸಿಯ ಅಂತಾರಾಷ್ಟ್ರೀಯ ವೃತ್ತಿಜೀವನದ ಪರಾಕಾಷ್ಠೆಯಾಗಿದೆ, ಅವರ 35 ನೇ ವಯಸ್ಸಿನಲ್ಲಿ ಇನ್ನೂ ಮುಗಿದಿಲ್ಲ ಎಂದು ಅನ್ನಿಸುತ್ತಿದೆ. ಏಕೆಂದರೆ ಅವರು ಎಂದಿನಂತೆ ಆಡುತ್ತಿದ್ದಾರೆ. ಅವರು ಏಳು ಗೋಲುಗಳೊಂದಿಗೆ ವಿಶ್ವ ಕಪ್ ಅನ್ನು ಪೂರ್ಣಗೊಳಿಸಿದರು, ಎಂಬಪ್ಪೆ ಅವರ ಪಂದ್ಯಾವಳಿಯಲ್ಲಿ ಎಂಟು ಗೋಲು ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ. ಆದರೆ ಮೆಸ್ಸಿ ಒಂದೇ ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲಿ ಮತ್ತು ಪ್ರತಿಯೊಂದು ನಾಕೌಟ್ ಸುತ್ತಿನಲ್ಲಿ ಸ್ಕೋರ್ ಮಾಡಿದ ಮೊದಲ ಆಟಗಾರರಾದರು.
ತಮ್ಮ ಆರಂಭಿಕ ಗುಂಪಿನ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಅರ್ಜೆಂಟೀನಾ ಯೋಚಿಸಲಾಗದ 2-1 ಸೋತಾಗಿನಿಂದ, ಮೆಸ್ಸಿ ತನ್ನ ಅಂತಿಮ ವಿಶ್ವಕಪ್‌ನಲ್ಲಿ ತನ್ನ ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಅಪರೂಪವಾಗಿ ಕಂಡುಬರುವ ಆಕ್ರಮಣಶೀಲತೆ ಹಾಗೂ ಕೌಶಲ್ಯಗಳೊಂದಿಗೆ ಮುಂದುವರಿದರು. ಅಂತಿಮವಾಗಿ ಅದು ಅವರಿಗೆ ವಿಶ್ವ ಕಪ್‌ ಗೆದ್ದುಕೊಟ್ಟಿತು.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

 

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement