ಕಾರವಾರ: ಕಾರಿನಲ್ಲಿ ಬರುತ್ತಿದ್ದಾಗ ಬಾನೆಟ್‌ ಒಳಗೆ ನುಗ್ಗಿದ ಕಾಳಿಂಗ ಸರ್ಪ, 4 ತಾಸು ಕಾರ್ಯಾಚರಣೆ ನಂತರ ಕೊನೆಗೂ ಸೆರೆ | ವೀಕ್ಷಿಸಿ

ಕಾರವಾರ: ಕೈಗಾದಿಂದ ಬರುತ್ತಿದ್ದಾಗ ಕಾರಿನ ಬಾನೆಟ್‌ ಒಳಗೆ ಅಚಾನಕ್‌ ನುಗ್ಗಿ ಆತಂಕ ಸೃಷ್ಟಿಸಿದ್ದ ಕಾಳಿಂಗ ಸರ್ಪವನ್ನು ಅರಣಯ ಇಲಾಖೆ ಸಿಬ್ಬಂದಿ ನಾಲ್ಕು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಅದನ್ನು ಕಾಡಿಗೆ ಬಿಟ್ಟ ವಿದ್ಯಮಾನ ವರದಿಯಾಗಿದೆ.
ಕೈಗಾದಿಂದ ಕಾರವಾರದ ಮಲ್ಲಾಪುರಕ್ಕೆ ಜೈ ಸಿಂಗ್‌ ಎಂಬವರು ಕಾರಿನಲ್ಲಿ ಬರುತ್ತಿದ್ದರು. ಅವರು ಕುಚೇಗಾರ್‌ ಸಮೀಪ ಬರುತ್ತಿರುವಾಗ ಅಚಾನಕ್‌ ಆಗಿ 10 ಅಡಿಗಳಷ್ಟು ಉದ್ದದ ಕಾಳಿಂಗ ಸರ್ಪ ಕಾರಿನ ಬಾನೆಟ್‌ ಒಳಗೆ ನುಗ್ಗಿದೆ. ಗೊತ್ತಾದ ತಕ್ಷಣವೇ ಅವರು ಅರಣ್ಯ ಇಲಾಖೆ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಸಿಕ್ಕ ತಕ್ಷಣವೇ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸದಾನಂದ ಗುನಗಿ ಹಾಗೂ ಬಿಲಾವಲ್‌ ಶೇಖ್‌ ಅವರು ಕಾರ್ಯಾಚರಣೆಗೆ ಇಳಿದರು. ಕಾರಿನ ಬಾನೆಟ್‌ ಒಳಗಿಂದ ಕಾಳಿಂಗ ಸರ್ಪಕ್ಕೆ ಪೆಟ್ಟಾಗದ ರೀತಿಯಲ್ಲಿ ಸುರಕ್ಷಿತವಾಗಿ ಸೆರೆ ಹಿಡಿಯುವುದು ಸವಾಲಿನ ಕೆಲಸವಾಗಿತ್ತು. ಸತತ ನಾಲ್ಕು ತಾಸು ಕಾರ್ಯಾಚರಣೆ ನಡೆಸಿಕಾಳಿಂಗ ಸರ್ಪಕ್ಕೆ ಯಾವುದೇ ತೊಂದರೆಯಾಗದಂತೆ ಕಾರಿನ ಬಾನೆಟ್‌ ಒಳಗಿಂದ ಹೊರ ತೆಗೆದು ಸೆರೆ ಹಿಡಿಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

ನಂತರ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.ಕಾಳಿಂಗ ಸರ್ಪ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಸಿಬ್ಬಂದಿ ರಜತ್‌ ಗೋವೆಕರ, ಮಧುಕುಮಾರ, ಪರಶುರಾಮ, ರಾಘವೇಂದ್ರ, ನಾಗರಾಜ, ಸಂದೀಪ ಮೊದಲಾದವರಿದ್ದರು.

3.8 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement