ಜೈಲು ವಾರ್ಡನ್‌ಗೆ ಮೂವರು ಸಹೋದ್ಯೋಗಿಗಳಿಂದ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿತ : ದೃಶ್ಯ ಸಿಸಿಟಿಯಲ್ಲಿ ಸೆರೆ…ಕಾರಣ ಇಲ್ಲಿದೆ

ರಾಯಬರೇಲಿ: ಉತ್ತರ ಪ್ರದೇಶದ ಜೈಲು ವಾರ್ಡನ್‌ಗೆ ಆತನ ಸಹೋದ್ಯೋಗಿಗಳು ಅಮಾನುಷವಾಗಿ ಥಳಿಸಿದ್ದಾರೆ. ಈಗ
ಇವರೆಲ್ಲರನ್ನು ಉತ್ತರ ಪ್ರದೇಶದ ರಾಯ್ಬರೇಲಿಯ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ.
ಆಹಾರದ ಅವ್ಯವಸ್ಥೆ ಬಗ್ಗೆ ಉಂಟಾದ ವಾದ ವಿವಾದವು ಉತ್ತರ ಪ್ರದೇಶದ ಜೈಲು ವಾರ್ಡನ್‌ಗೆ ಅವರ ಸಹೋದ್ಯೋಗಿಗಳು ತೀವ್ರವಾಗಿ ಥಳಿಸಲು ಕಾರಣವಾಯಿತು. ಜೈಲ್‌ ವಾರ್ಡನ್‌ ಅವರು ತಮ್ಮ ಕ್ಯಾಂಟೀನ್ ವ್ಯವಹಾರಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಥಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇವರೆಲ್ಲರನ್ನೂ ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲಾ ಕಾರಾಗೃಹಕ್ಕೆ ನಿಯೋಜಿಸಲಾಗಿತ್ತು.
ಜೈಲಿನ ಮೆಸ್ ಉಸ್ತುವಾರಿ ಮುಖೇಶ ದುಬೆ ಅವರನ್ನು ಅವರ ಮೂವರು ಸಹೋದ್ಯೋಗಿಗಳು ಲಾಠಿಯಿಂದ ಥಳಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದ್ದು, ಇತರ ಇಬ್ಬರು ನಿಂತು ನೋಡುತ್ತಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಮೂವರು ವ್ಯಕ್ತಿಗಳು ಅವರನ್ನು ಸುತ್ತುವರೆದು ದೊಣ್ಣೆಗಳಿಂದ ಹೊಡೆದಾಗ, ದುಬೆ “ಔರ್ ಮಾರೋ” ಎಂದು ಹೇಳುವುದು ಕೇಳಿಸುತ್ತದೆ. ಅವರು ಒಂದು ಹಂತದಲ್ಲಿ ತನ್ನ ಸಹೋದ್ಯೋಗಿಯಿಂದ ಕೋಲನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ, ಆದರೆ ಮೂವರು ವ್ಯಕ್ತಿಗಳು ಅವರನ್ನು ಬಿಗಿಯಾಗಿ ಹಿಡಿದು ಹೊಡೆಯಲು ಪ್ರಾರಂಭಿಸುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾಯ್‌ಬರೇಲಿ ಪೊಲೀಸರು ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಐವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಇಲಾಖಾ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಲ್ಲಿ 2859 ಹುದ್ದೆಗಳಿಗೆ ಅರ್ಜಿ ಆಹ್ವಾನ : ಪದವಿ, ದ್ವಿತೀಯ ಪಿಯು ಪಾಸಾದವರು ಅರ್ಜಿ ಸಲ್ಲಿಸಬಹುದು

ತಮ್ಮ ಕ್ಯಾಂಟೀನ್ ವ್ಯವಹಾರಕ್ಕೆ ಧಕ್ಕೆಯಾಗುವುದರಿಂದ ಮೆಸ್‌ನ ಆಹಾರದ ಗುಣಮಟ್ಟವನ್ನು ಕಡಿಮೆ ಮಾಡಬೇಕೆಂಬ ಈ ಪೊಲೀಸ್‌ ಸಿಬ್ಬಂದಿ ಒತ್ತಡ ಹಾಕಿದ ನಂತರ ತಮ್ಮ ಮತ್ತು ಅವರ ಸಹೋದ್ಯೋಗಿಗಳ ನಡುವೆ ಜಗಳ ಸಂಭವಿಸಿದೆ ಎಂದು ಮುಖೇಶ್ ದುಬೆ ಹೇಳಿದರು. ಮುಖೇಶ ದುಬೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   19,000 ಉದ್ಯೋಗಿಗಳನ್ನು ವಜಾ ಮಾಡಲು ಮುಂದಾದ ಅಕ್ಸೆಂಚರ್

3.5 / 5. ಒಟ್ಟು ವೋಟುಗಳು 2

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement