ಪಿರಿಯಾಪಟ್ಟಣ : ಕಿಡಿಗೇಡಿಗಳಿಂದ ಚರ್ಚಿನ ಬಾಲ ಏಸುವಿನ ಪ್ರತಿಮೆ ಭಗ್ನ ; ಹಣ, ಕಾಣಿಕೆ ಡಬ್ಬಿ ಕಳ್ಳತನ

posted in: ರಾಜ್ಯ | 0

ಮೈಸೂರು: ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯ ಸೇಂಟ್‌ ಮೇರಿಸ್‌ ಚರ್ಚ್‌ನಲ್ಲಿ ಕಿಡಿಗೇಡಿಗಳು ಹಲವು ವಸ್ತುಗಳಿಗೆ ಹಾನಿಯುಂಟು ಮಾಡಿದ್ದು, ಹಣವನ್ನು ದೋಚಿದ್ದಾರೆ.
ಪೊಲೀಸರ ಪ್ರಕಾರ, ಮಂಗಳವಾರ ಅಪರಿಚಿತ ವ್ಯಕ್ತಿಗಳು ಚರ್ಚಿಗೆ ಹಾನಿ ಮಾಡಿದ್ದಾರೆ. ಚರ್ಚ್‌ನ ಬಾಲ ಏಸುವಿನ ಪ್ರತಿಮೆಗೆ ಹಾನಿ ಮಾಡಿ ದೇಣಿಗೆ ಪೆಟ್ಟಿಗೆಯಲ್ಲಿದ್ದ ಹಣವನ್ನು ದೋಚಿದ್ದಾರೆ.
ಸೇಂಟ್‌ ಮೇರಿಸ್‌ ಚರ್ಚ್ ಅನ್ನು ಕ್ರಿಸ್‌ಮಸ್‌ ಅಂಗವಾಗಿ ಲೈಟಿಂಗ್‌ನಿಂದ ಸಿಂಗರಿಸಿ ಚರ್ಚ್‌ ಹೊರಗೆ ಬಾಲ ಏಸುವಿನ ಮೂರ್ತಿಗೆ ಸಿಂಗರಿಸಲಾಗಿತ್ತು. ಮಂಗಳವಾರ ಬೆಳಗಿನ ಪೂಜೆಯ ನಂತರ ಚರ್ಚ್‌ನ ಫಾದರ್‌ ಜಾನ್‌ ಪೌಲ್‌ ಮೈಸೂರಿಗೆ ತೆರಳಿದ್ದರು. ಚರ್ಚ್‌ನಲ್ಲಿ ಕೆಲಸಕ್ಕೆ ಇದ್ದ ಮಹಿಳೆಯು ಸಹ ಮನೆಗೆ ತೆರಳಿದ್ದರು. ಸಂಜೆ 6 ಸಮಯದಲ್ಲಿ ಚರ್ಚ್‌ನ ನೌಕರ ರಾಜಣ್ಣ ಎಂಬವರು ಚರ್ಚ್‌ಗೆ ಲೈಟ್‌ ಹಾಕಲು ಬಂದಾಗ ಹಿಂಬಾಗಿಲು ಒಡೆದು ಬಾಗಿಲು ತೆರೆದಿರುವುದು ಹಾಗೂ ಹೂ ಕುಂಡಗಳನ್ನು ಒಡೆದಿರುವುದು ಹಾಗೂ ಕ್ರಿಸ್ಮಸ್‌ ಹಬ್ಬದ ಸಂದರ್ಭದಲ್ಲಿ ಒಳಭಾಗದಲ್ಲಿ ವಿಶೇಷವಾಗಿ ನಿರ್ಮಿಸಿದ್ದ ಬಾಲ ಯೇಸುವಿನ ತೊಟ್ಟಿಲು ಮತ್ತು ವಿಗ್ರಹಕ್ಕೆ ಹಾನಿಯಾಗಿರುವುದು ಕಂಡುಬಂದಿದೆ.
ಅವರು ತಕ್ಷಣವೇ ಪಾದ್ರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ದಾಳಿಕೋರರು ಒಳಗೆ ಹೋಗಲು ಚರ್ಚ್‌ನ ಹಿಂದಿನ ಬಾಗಿಲನ್ನು ಒಡೆದು ಹಾಕಿದ್ದಾರೆ. ಕಿಡಿಗೇಡಿಗಳು ಚರ್ಚ್‌ನಲ್ಲಿದ್ದ ಹಣದ ಜೊತೆಗೆ ಹುಂಡಿಯ ಹಣವನ್ನೂ ದೋಚಿದ್ದಾರೆ. ಪಿರಿಯಾಪಟ್ಟಣದ ಪೊಲೀಸರು ತನಿಖೆ ಕೈಗೊಂಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ದುಷ್ಕೃತ್ಯ ಎಸೆಗಿರುವವರ ಪತ್ತೆಗಾಗಿ ತಂಡ ರಚಿಸಲಾಗಿದೆ, ಚರ್ಚ್‌ ಸಮೀಪದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನೂ ಪರಿಶೀಲಿಸಲಾಗುತ್ತಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಚೆನ್ನೈ ಬಂದರಿನಲ್ಲಿ ದೇಶಕ್ಕೆ ಅಕ್ರಮವಾಗಿ ತರುತ್ತಿದ್ದ 114 ಮೆಟ್ರಿಕ್ ಟನ್ ಅಡಿಕೆ ವಶಪಡಿಸಿಕೊಂಡ ಡಿಆರ್‌ಐ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3.5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement