ಶಿರಸಿ: ಸಾರಿಗೆ ಸಂಸ್ಥೆ ಬಸ್‌ನಲ್ಲಿ ಬಿಟ್ಟು ಹೋಗಿದ್ದ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮರಳಿ ಪ್ರಯಾಣಿಕರಿಗೆ ನೀಡಿ ಚಾಲಕ ಮತ್ತು ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ಹಾನಗಲ್ ಶಿರಸಿ ಮಾರ್ಗವಾಗಿ ಸಂಚರಿಸುವ ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿ ಇಸಳೂರಿನಿಂದ ಕವಿತಾ ಹಾಗೂ ಅವರ ಪುತ್ರ ಬಸ್ ಹತ್ತಿ ಶಿರಸಿಗೆ ಬಂದಿದ್ದರು. ಆದರೆ, ಅವರು ಬಸ್ ಇಳಿಯುವ ಗಡಿಬಿಡಿಯಲ್ಲಿ ಬಸ್‌ನಲ್ಲಿಯೇ ಬ್ಯಾಗ್ ಬಿಟ್ಟು ಇಳಿದು ಹೋಗಿದ್ದರು. ಅಷ್ಟೇ ಅಲ್ಲದೆ, ಶಿರಸಿಯಿಂದ ಮತ್ತೊಂದು ಬಸ್ ಹತ್ತಿ ಬೆಳಗಾವಿಗೆ ತೆರಳಿದ್ದಾರೆ. ಅವರಿಗೆ ಬೆಳಗಾವಿಗೆ ಹೋದ ತಕ್ಷಣ ತಮ್ಮ ಬ್ಯಾಗ್ ಇಲ್ಲದಿರುವುದು ಗಮನಕ್ಕೆ ಬಂದಿದೆ. ಗಾಬರಿಯಾದ ಅವರು ತಕ್ಷಣ ಶಿರಸಿ ಡಿಪೋಗೆ ಕರೆಮಾಡಿ ಈ ಬಗ್ಗೆ ವಿಚಾರಿಸಿದ್ದಾರೆ.
ಆದರೆ ಅಷ್ಟರಲ್ಲಿ ಹಾನಗಲ್ ಶಿರಸಿ ಬಸ್ ಚಾಲಕ ವಿನೋದ್ ನಾಯ್ಕ ಹಾಗೂ ನಿರ್ವಾಹಕ (ಕಂಡಕ್ಟರ್) ಸೇವಾ ನಾಯ್ಕ ರಾಥೋಡ್ ಅವರು ತಮ್ಮ ಟ್ರಪ್ ಮುಗಿಸಿ ಬಸ್ ಅನ್ನು ಡಿಪೋಗೆ ತಂದಾಗ ಅಲ್ಲಿ ಬ್ಯಾಗ್ ಕಂಡಿದ್ದಾರೆ. ಪ್ರಯಾಣಿಕರು ಬಿಟ್ಟು ಹೋದ ಬ್ಯಾಗನ್ನು ಹಾಗೆಯೇ ಅಧಿಕಾರಿಗಳಿಗೆ ನೀಡಿದ್ದಾರೆ.
ಚಿನ್ನಾಭರಣ ಕಳೆದುಕೊಂಡಿದ್ದ ಕವಿತಾ ಅವರನ್ನು ಸಂಪರ್ಕಿಸಿದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕವಿತಾ ಅವರು ಬಂದು ಚಿನ್ನಾಭರಣದ ಬ್ಯಾಗ್ ಅನ್ನು ಮರಳಿ ಪಡೆದಿದ್ದಾರೆ. ಚಾಲಕ ಹಾಗೂ ನಿರ್ವಾಹಕರ ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಶಿರಸಿ ವಿಭಾಗದ ಡಿಸಿ ಹಾಗೂ ಸಾರಿಗೆ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ