12 ಹೆಂಡತಿಯರು, 102 ಮಕ್ಕಳು, 568 ಮೊಮ್ಮಕ್ಕಳು… ಇನ್ಮುಂದೆ ಮಕ್ಕಳು ಬೇಡ ಎಂದ ಈತ…!

12 ಮದುವೆಗಳು, 102 ಜನ ಮಕ್ಕಳು ಮತ್ತು 568 ಮೊಮ್ಮಕ್ಕಳನ್ನು ಹೊಂದಿರುವ ಉಗಾಂಡಾದ ರೈತ ಮೂಸಾ ಹಸಾಹ್ಯಾ ಇನ್ನು ಮುಂದೆ ಮಕ್ಕಳನ್ನು ಪಡೆಯುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇಷ್ಟು ದೊಡ್ಡ ಕುಟುಂಬವನ್ನು ಬೆಳೆಸಿದ ನಂತರ, 67 ವರ್ಷದ ಮೂಸಾ ಹಸಾಹ್ಯಾ ಎಂಬ ರೈತ ಜೀವನದ ವೆಚ್ಚ ಹೆಚ್ಚುತ್ತಿರುವ ಕಾರಣ ಇನ್ನು ಮುಂದೆ ಮಕ್ಕಳನ್ನು ಹೊಂದಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಪರಿಣಾಮವಾಗಿ, ಅವರು ಈಗ ಮಗುವನ್ನು ಹೆರುವ ವಯಸ್ಸಿನ ತಮ್ಮ ಹೆಂಡತಿಯರಿಗೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ದಿ ಸನ್ ವರದಿ ಮಾಡಿದೆ.
ಬಹುಪತ್ನಿತ್ವವನ್ನು ಅನುಮತಿಸಲಾಗಿರುವ ಉಗಾಂಡಾದ ಲುಸಾಕಾದ 67 ವರ್ಷದ ವ್ಯಕ್ತಿ ತಮ್ಮ ಸೀಮಿತ ಸಂಪನ್ಮೂಲಗಳ ಕಾರಣ ಇನ್ನು ಮುಂದೆ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮೂಸಾ ಒಬ್ಬ ರೈತ, ತನ್ನ ಆದಾಯ ಇನ್ನು ಮುಂದೆ ಹೆಚ್ಚುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕುಟುಂಬವು ಉಗಾಂಡಾದ ಲುಸಾಕಾದಲ್ಲಿ 12 ಬೆಡ್‌ರೂಮ್ ಮನೆಯೊಂದಿಗೆ ಒಂದೇ ಕಾಂಪೌಂಡ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದೆ, ಏಕೆಂದರೆ ತನ್ನ ಹೆಂಡತಿಯರನ್ನು ಮೇಲ್ವಿಚಾರಣೆ ಮಾಡುವುದು ಸುಲಭ ಮತ್ತು ಹಳ್ಳಿಯಲ್ಲಿ ಇತರ ಪುರುಷರೊಂದಿಗೆ ಅವರು ಓಡಿಹೋಗುವುದನ್ನು ತಡೆಯುತ್ತದೆ ಎಂದು ಮೂಸಾ ಹೇಳುತ್ತಾರೆ. ಮೂಸಾ ಅವರು ತಮ್ಮ 102 ಮಕ್ಕಳನ್ನು ಹೆಸರು ಹಿಡಿದು ಹೇಳುತ್ತಾರೆ. ಆದರೆ ಅವರ 568 ಮೊಮ್ಮಕ್ಕಳನ್ನು ಗುರುತಿಸಲು ಅವರು ಹೆಣಗಾಡುವುದಾಗಿ ಹೇಳಿದ್ದಾರೆ.

ಅವರು ಕೇವಲ 16 ವರ್ಷದವರಾಗಿದ್ದಾಗ 1971ರಲ್ಲಿ ಹನೀಫಾ ಅವರನ್ನು ಮೊದಲ ಬಾರಿಗೆ ವಿವಾಹವಾದರು. ಅವರ ಮದುವೆಯ ನಂತರ ಅವರು ಶಾಲೆಯನ್ನು ಬಿಟ್ಟರು ಮತ್ತು ಎರಡು ವರ್ಷಗಳಲ್ಲಿ ಅವರಿಗೆ ಮಗಳು ಜನಿಸಿದಳು. ಆ ಸಮಯದಲ್ಲಿ, ಮೂಸಾ ಉದ್ಯಮಿ ಮತ್ತು ಗ್ರಾಮದ ಅಧ್ಯಕ್ಷರಾಗಿ ಸಮುದಾಯದ ಗೌರವಾನ್ವಿತ ಸದಸ್ಯರಾಗಿದ್ದರು.
ಆಗ ಏನಾದರೊಂದು ಸಂಪಾದಿಸಲು ಸಾಧ್ಯವಿದ್ದ ಕಾರಣ ಹೆಚ್ಚಿನ ಮಹಿಳೆಯರನ್ನು ಮದುವೆಯಾಗಿ ಸಂಸಾರವನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ. ಕುಟುಂಬವನ್ನು ಬೆಂಬಲಿಸಲು ಭೂಮಿಯನ್ನು ಉಳುಮೆ ಮಾಡಲು ಮತ್ತು ಆಹಾರವನ್ನು ಉತ್ಪಾದಿಸಲು ಪ್ರತಿಯೊಬ್ಬರಿಗೂ ಜಮೀನಿನಲ್ಲಿ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.
ಕುಟುಂಬ ಬಹಳ ವಿಸ್ತಾರವಾದ ನಂತರ ಈಗ ಎಲ್ಲ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವಿಲ್ಲದೆ ಮೂಸಾ ಪರದಾಡುತ್ತಿದ್ದು, ಸರ್ಕಾರದ ನೆರವು ಪಡೆಯುತ್ತಿದ್ದಾರೆ. ಹೆಚ್ಚುತ್ತಿರುವ ಜೀವನ ವೆಚ್ಚದಿಂದಾಗಿ ತಮ್ಮ ಆದಾಯವು ಕಡಿಮೆಯಾಗಿದೆ ಮತ್ತು ಇದೇ ವೇಳೆ ಕುಟುಂಬವು ದೊಡ್ಡದಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

11 ಮಕ್ಕಳ ತಾಯಿಯಾಗಿರುವ ಅವರ ಕಿರಿಯ ಪತ್ನಿ ಜುಲೈಕಾ ಅವರು ಆರ್ಥಿಕ ಪರಿಸ್ಥಿತಿಯನ್ನು ನೋಡಿ ಈಗ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುತ್ತಿರುವುದಾಗಿ ಹೇಳಿದ್ದಾರೆ. ಮೂಸಾ ಅವರ ಕಿರಿಯ ಪತ್ರನಿಗೆ ಆರು ವರ್ಷ ಮತ್ತು ಹಿರಿಯಳಾದ ಪುತ್ರಿಗೆ 51 ವರ್ಷ ವಯಸ್ಸು, ಅಂದರೆ ಮೂಸಾ ಅವರ ಕಿರಿಯ ಪತ್ನಿ ಜುಲೈಕಾಗಿಂತ ಸುಮಾರು 20 ವರ್ಷ ಹಿರಿಯಳು..!. ಅನಾರೋಗ್ಯದ ಕಾರಣ ಮೂಸಾ ಅವರಿಗೆ ಈಗ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಅವರ ಇಬ್ಬರು ಹೆಂಡತಿಯರು ಆರ್ಥಿಕ ಸಮಸ್ಯೆಯಿಂದಾಗಿ ಅವರನ್ನು ತೊರೆದಿದ್ದಾರಂತೆ.
“ಸೀಮಿತ ಸಂಪನ್ಮೂಲಗಳ ಕಾರಣ ಮಕ್ಕಳನ್ನು ಹೆರುವುದನ್ನು ನಾನು ಇನ್ನು ಮುಂದೆ ಸಹಿಸಲಾರೆ. ಮತ್ತು ಕುಟುಂಬ ಯೋಜನೆಗೆ ಹೋಗಲು ನಾನು ನನ್ನ ಎಲ್ಲಾ ಹೆರಿಗೆ ಮಾಡುವ ವಯಸ್ಸಿನ ಹೆಂಡತಿಯರಿಗೆ ಸಲಹೆ ನೀಡಿದ್ದೇನೆ ಎಂದುಅವರನ್ನು ಉಲ್ಲೇಖಿಸಿ ಸನ್ ವರದಿ ಮಾಡಿದೆ. ತನ್ನ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡಲು ಕಷ್ಟಪಡುತ್ತಿರುವ ಮೂಸಾ ಈಗ ಸರ್ಕಾರದ ಸಹಾಯವನ್ನು ಕೇಳುತ್ತಿದ್ದಾರೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement