ಚಂದ್ರಬಾಬು ನಾಯ್ಡು ಸಮಾವೇಶದಲ್ಲಿ ಮತ್ತೊಂದು ದುರಂತ, ಸೀರೆ ಪಡೆಯಲು ನೂಕುನುಗ್ಗಲು ಉಂಟಾಗಿ 3 ಮಹಿಳೆಯರು ಸಾವು

ಗುಂಟೂರು: ಕೆಲವೇ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ ಎಂಟು ಮಂದಿ ಮೃತಪಟ್ಟ ಬೆನ್ನಲ್ಲೇ ಬೆನ್ನಲ್ಲೇ ಭಾನುವಾರ (ಜನವರಿ 1) ಸಂಕ್ರಾಂತಿ ಹಬ್ಬದ ಅಂಗವಾಗಿ ಚಂದ್ರಬಾಬುನಾಯ್ಡು ಅವರು ಸೀರೆ ಹಂಚುತ್ತಿದ್ದ ಕಾರ್ಯಕ್ರಮದಲ್ಲಿ ಮತ್ತೆ 3 ಮಹಿಳೆಯರು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ಆಂಧ್ರದ ಗುಂಟೂರಿನ ವಿಕಾಸನಗರದಲ್ಲಿ ಈ ದುರಂತ ಸಂಭವಿಸಿದೆ.
ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬುನಾಯ್ಡು ಅವರು ಭಾನುವಾರ ಆಂಧ್ರದ ಗುಂಟೂರಿನ ವಿಕಾಸನಗರದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಸೀರೆ ಹಂಚುತ್ತಿದ್ದ ವೇಳೆ ನೂಕುನುಗ್ಗಲು ಉಂಟಾಗಿ 3 ಮಹಿಳೆಯರು ಮೃತಪಟ್ಟಿದ್ದಾರೆ. ಸ್ಥಳದಲ್ಲೇ ಓರ್ವ ಮಹಿಳೆ ಸಾಔಿಗೀಡಾದರೆ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಗುಂಟೂರು ವಿಕಾಸನಗರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಸಂಕ್ರಾಂತಿ ಉಡುಗೊರೆ ವಿತರಣೆಯಲ್ಲಿ ಅವ್ಯವಸ್ಥೆ ಉಂಟಾಗಿ ದುರಂತ ಸಂಭವಿಸಿದೆ.

ಚಂದ್ರಬಾಬು ನಾಯ್ಡು ಅವರ ಭಾಷಣದ ನಂತರ ಪಕ್ಷದ ಮುಖಂಡರು ಚಂದ್ರಣ್ಣ ಅವರಿಂದ ಉಡುಗೊರೆ ಕಳುಹಿಸುವ ಕಾರ್ಯಕ್ರಮ ನಡೆಯಿತು. ಈ ವೇಳೆ ಮಹಿಳೆಯರು ಉಡುಗೊರೆ ತೆಗೆದುಕೊಳ್ಳಲು ಮುಂದಾದಾಗ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗಿದೆ. ಕಾರ್ಯಕ್ರಮದ ಅವ್ಯವಸ್ಥೆಯೇ ಅವ್ಯವಸ್ಥೆಗೆ ಈ ಘಟನೆಗೆ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ.
ಡಿಸೆಂಬರ್ 28ರಂದು ಆಂಧ್ರದಲ್ಲಿ ಟಿಡಿಪಿ ರ್‍ಯಾಲಿ ವೇಳೆ ಕಾಲ್ತುಳಿತ ಉಂಟಾಗಿ 8 ಜನರು ಮೃತಪಟ್ಟ ಘಟನೆ ನೆಲ್ಲೂರು ಕ್ಷೇತ್ರದ ವ್ಯಾಪ್ತಿಯ ಕಂದುಕೂರಿನಲ್ಲಿ ನಡೆದಿತ್ತು. ಚಂದ್ರಬಾಬು ನಾಯ್ಡು ಟಿಡಿಪಿ ಬಹಿರಂಗ ಸಭೆ ಆಯೋಜಿಸಿದ್ದರು. ಈ ವೇಳೆ ವೇದಿಕೆ ಬಳಿ ನೂಕುನುಗ್ಗಲು ಉಂಟಾಗಿದ್ದು, 8 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

3.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement