ದೆಹಲಿ ಶಾಕರ್: ಡಿಕ್ಕಿ ಹೊಡೆದ ನಂತರ 12 ಕಿಮೀ ಎಳೆದೊಯ್ದ ಕಾರು, ಯುವತಿ ಸಾವು

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ, ಯುವತಿಯೊಬ್ಬಳ ಸ್ಕೂಟರ್ (Scooter) ಅಪಘಾತಕ್ಕೀಡಾಗಿದ್ದು, ಆಕೆಯನ್ನು ಕಾರು ಸುಮಾರು 12 ಕಿಮೀ ವರೆಗೂ ಎಳೆದೊಯ್ದಿದ್ದು, ತೀವ್ರವಾಗಿ ಗಾಯಗೊಂಡ ಯುವತಿ ಸಾವಿಗೀಡಾದ ಘಟನೆ ದೆಹಲಿಯಲ್ಲಿ ನಡೆದಿದೆ.
ಶನಿವಾರ ಮಧ್ಯ ರಾತ್ರಿ ದೆಹಲಿಯ ಹೊರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಂಜಲಿ ಚಲಿಸುತ್ತಿದ್ದ ಸ್ಕೂಟಿಯು ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಚಕ್ರಕ್ಕೆ ಆಕೆ ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೂ ಕಾರು 10-12 ಕಿ.ಮೀ ದೂರ ಕ್ರಮಿಸಿದೆ. ಸ್ಕೂಟಿ ಅಪಘಾತಕ್ಕೀಡಾದ ನಂತರ ಕಾರಿನ ಚಕ್ರಕ್ಕೆ ಯುವತಿಯ ಬಟ್ಟೆ ಸಿಕ್ಕಿಹಾಕಿಕೊಂಡ ನಂತರ ಕಾರು ಅವಳನ್ನು 12 ಕಿಮೀ ವರೆಗೆ ಎಳೆದೊಯ್ದಿದೆ. ಘಟನೆಯಲ್ಲಿ ಯುವತಿಯ ಬಟ್ಟೆ ಹರಿದಿದ್ದು, ಪೊಲೀಸರಿಗೆ ಆಕೆಯ ಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ
ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಿ ನಂತರ ಕಾರು ಎಳೆದೊಯ್ಯುವ ಮುನ್ನ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿತ್ತು, ಆದರೆ ಇದೀಗ ಆಕೆಯ ದೇಹವು ಕಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದು ಅಪಘಾತದಿಂದ ಯುವತಿ ಸಾವಿಗೀಡಾಗಿದ್ದಾಳೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ವಿಚಾರವಾಗಿ ಬೆಳಗಿನ ಜಾವ 3.24ರ ಸುಮಾರಿಗೆ ತಮಗೆ ಕರೆ ಬಂದಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಸೊಳ್ಳೆ ಬತ್ತಿಯಿಂದ ಹೊತ್ತಿಕೊಂಡ ಬೆಂಕಿ: ಒಂದೇ ಕುಟುಂಬದ ಆರು ಮಂದಿ ಸಾವು

ಯವತಿಯ ಶವವನ್ನು ಬಲೆನೋ ಕಾರು ಎಳೆದುಕೊಂಡು ಹೋಗುತ್ತಿದೆ ಎಂದು ಕರೆ ಮಾಡಿದವರು ಹೇಳಿದರು. ಕರೆ ಮಾಡಿದವರ ಮೊಬೈಲ್ ಸಂಖ್ಯೆಗೆ ಕಾಂಜಾವಾಲಾ ಪೊಲೀಸ್ ಠಾಣೆಯ ತಂಡ ನಿರಂತರವಾಗಿ ಸಂಪರ್ಕಿಸಿದೆ. ನಂತರ ಕರೆ ಮಾಡಿದವರು ವಾಹನವನ್ನು ಬೂದು ಬಣ್ಣದ ಬೊಲೆನೊ ಕಾರು ಎಂದು ಗುರುತಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ನನ್ನ ಮಗಳೇ ನನ್ನ ಸರ್ವಸ್ವ. ಅವಳು ನಿನ್ನೆ ಪಂಜಾಬಿ ಬಾಗ್‌ಗೆ ಕೆಲಸಕ್ಕೆ ಹೋಗಿದ್ದಳು. ನನ್ನ ಮಗಳು ಸಂಜೆ 5:30 ರ ಸುಮಾರಿಗೆ ಮನೆಯಿಂದ ಹೊರಟು ರಾತ್ರಿ 10 ಗಂಟೆಗೆ ಹಿಂತಿರುಗುವುದಾಗಿ ಹೇಳಿದ್ದಳು. ಅವಳ ಅಪಘಾತದ ಬಗ್ಗೆ ಬೆಳಿಗ್ಗೆ ನನಗೆ ತಿಳಿಸಲಾಯಿತು ಎಂದು ತಾಯಿ ಹೇಳಿದ್ದಾರೆ.
ಪಿಸಿಆರ್ ಕರೆ ಸ್ವೀಕರಿಸಿದ ನಂತರ, ತಕ್ಷಣ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು ಮತ್ತು ಪಿಕೆಟ್‌ಗಳಲ್ಲಿ ನಿಯೋಜಿಸಲಾದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ವಾಹನವನ್ನು ಹುಡುಕುವಂತೆ ಸಂದೇಶವೂ ಹರಿದಾಡಿತು. ನಂತರ, ಕಂಜ್ವಾಲಾ ಪ್ರದೇಶದಲ್ಲಿ ಬಿದ್ದಿರುವ ಮೃತದೇಹದ ಬಗ್ಗೆ ಪೊಲೀಸರಿಗೆ 4.11 ರ ಸುಮಾರಿಗೆ ಎರಡನೇ ಪಿಸಿಆರ್ ಕರೆ ಬಂದಿತು.

ಇಂದಿನ ಪ್ರಮುಖ ಸುದ್ದಿ :-   ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ಸ್ಥಳಕ್ಕೆ ಆಗಮಿಸಿದ ಕ್ರೈಂ ತಂಡ ಸ್ಥಳವನ್ನು ಪರಿಶೀಲಿಸಿತು. ನಂತರ, ಮೃತರ ದೇಹವನ್ನು ಮಂಗೋಲ್ಪುರಿಯ ಎಸ್‌ಜಿಎಂ ಆಸ್ಪತ್ರೆಗೆ ಕಳುಹಿಸಲಾಯಿತು, ಅಲ್ಲಿ ವೈದ್ಯರು ರೋಗಿಯು ಸಾವಿಗೀಡಾಗಿರುವುದನ್ನು ದೃಢಪಡಿಸಿದರು. ಕಾರನ್ನು ಪತ್ತೆಹಚ್ಚಲಾಗಿದೆ ಮತ್ತು ವಿಚಾರಣೆಯ ಸಮಯದಲ್ಲಿ, ವಾಹನದಲ್ಲಿದ್ದವರನ್ನು ಪತ್ತೆಹಚ್ಚಲಾಗಿದೆ ಮತ್ತು ಪಿಎಸ್ ಸುಲ್ತಾನಪುರಿ ಪ್ರದೇಶದಲ್ಲಿ ಕಾರು ಅಪಘಾತಕ್ಕೀಡಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಪಘಾತದ ನಂತರ ಯುವತಿ ಕಾರಿನ ಚಕ್ರಗಳಿಗೆ ಸಿಕ್ಕಿಹಾಕಿಕೊಂಡು ಸ್ವಲ್ಪ ದೂರ ಎಳೆದೊಯ್ದಿರುವುದು ಸ್ಥಳ ಪರಿಶೀಲನೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ದೀಪಕ್ ಖನ್ನಾ, ಅಮಿತ್ ಖನ್ನಾ, ಕಿಶನ್, ಮಿತ್ತು ಮತ್ತು ಮನೋಜ್ ಮಿತ್ತಲ್ ಎಂದು ಗುರುತಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement