ಕಾಶ್ಮೀರದ: ರಾಜೌರಿಯ ಡ್ಯಾಂಗ್ರಿ ಗ್ರಾಮದಲ್ಲಿ ಗುಂಡಿನ ದಾಳಿ: ಮೂವರು ನಾಗರಿಕರು ಸಾವು, 7 ಜನರಿಗೆ ಗಾಯ

ಶ್ರೀನಗರ: ಭಾನುವಾರ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಡ್ಯಾಂಗ್ರಿ ಗ್ರಾಮದಲ್ಲಿ ಗುಂಡಿನ ದಾಳಿಯ ನಂತರ ಮೂವರು ನಾಗರಿಕರು ಸಾವಿಗೀಡಾಗಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡರು.
ಮೂಲಗಳ ಪ್ರಕಾರ, ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದ್ದು ಸಾವು ನೋವುಗಳಿಗೆ ಕಾರಣವಾಯಿತು. ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನೆ ಶೋಧ ಕಾರ್ಯಾಚರಣೆ ಆರಂಭಿಸಿದೆ.
ಮೃತರನ್ನು ದೀಪಕಕುಮಾರ (23), ಪ್ರೀತಮ್ ಲಾಲ್ (57) ಮತ್ತು ಸತೀಶಕುಮಾರ (45) ಎಂದು ಗುರುತಿಸಲಾಗಿದ್ದು, ತೀವ್ರವಾಗಿ ಗಾಯಗೊಂಡವರನ್ನು ವಿಶೇಷ ಚಿಕಿತ್ಸೆಗಾಗಿ ಜಮ್ಮುವಿಗೆ ವಿಮಾನದಲ್ಲಿ ರವಾನಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಎಕೆ ಸಿರೀಸ್ ರೈಫಲ್‌ಗಳನ್ನು ಬಳಸಿ ಅಲ್ಪಸಂಖ್ಯಾತ ಸಮುದಾಯದ ನಾಗರಿಕರ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಈ ಮನೆಗಳ ಹಿಂದೆ ಇರುವ ದಟ್ಟ ಅರಣ್ಯದಿಂದ ಭಯೋತ್ಪಾದಕರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ರಾಜೌರಿಯ ಡ್ಯಾಂಗ್ರಿ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವಿಗೀಡಾಗಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಮತ್ತು ಜಿಲ್ಲಾಡಳಿತವು ಸ್ಥಳಕ್ಕೆ ತಲುಪಿದೆ. ಗಾಯಗೊಂಡವರ ದೇಹದ ಮೇಲೆ ಬಹು ಬುಲೆಟ್ ಗಾಯಗಳು ಪತ್ತೆಯಾಗಿವೆ ಎಂದು ರಾಜೌರಿಯ ಅಸೋಸಿಯೇಟೆಡ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಮೆಹಮೂದ್ ಖಚಿತಪಡಿಸಿದ್ದಾರೆ.
ರಾಜೌರಿಯ ಮೇಲಿನ ಡ್ಯಾಂಗ್ರಿ ಗ್ರಾಮದಲ್ಲಿ ಸುಮಾರು 50 ಮೀಟರ್ ದೂರದಲ್ಲಿ ಮೂರು ಮನೆಗಳ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಎಡಿಜಿಪಿ ಜಮ್ಮು ಮುಖೇಶ್ ಸಿಂಗ್ ತಿಳಿಸಿದ್ದಾರೆ.
10 ನಿಮಿಷಗಳಲ್ಲಿ ಗುಂಡಿನ ದಾಳಿ ಕೊನೆಗೊಂಡಿತು. ಮೊದಲಿಗೆ, ಅವರು ಮೇಲಿನ ಡ್ಯಾಂಗ್ರಿಯಲ್ಲಿರುವ ಮನೆಯೊಂದರ ಮೇಲೆ ದಾಳಿ ಮಾಡಿದರು ಮತ್ತು ನಂತರ ಅವರು 25 ಮೀಟರ್ ದೂರಕ್ಕೆ ತೆರಳಿ ಅಲ್ಲಿ ಹಲವಾರು ವ್ಯಕ್ತಿಗಳತ್ತ ಗುಂಡು ಹಾರಿಸಿದರು. ಗ್ರಾಮದಿಂದ ಪಲಾಯನ ಮಾಡುವಾಗ ಎರಡನೇ ಮನೆಯಿಂದ 25 ಮೀಟರ್ ದೂರದಲ್ಲಿರುವ ಮತ್ತೊಂದು ಮನೆಯ ಮೇಲೂ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement