ಜನವರಿ 16, 17ರಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ; ನಡ್ಡಾ ಅಧಿಕಾರಾವಧಿ ವಿಸ್ತರಣೆ..?

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ದೆಹಲಿಯಲ್ಲಿ ಜನವರಿ 16 ಮತ್ತು 17 ರಂದು ನಡೆಯಲಿದೆ ಎಂದು ಮಂಗಳವಾರ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಮುಂಬರುವ ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭೆ ಚುನಾವಣೆಗಳ ಬಗ್ಗೆ ಪಕ್ಷವು ಚರ್ಚಿಸುವ ನಿರೀಕ್ಷೆಯಿದೆ.
ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧಿಕಾರಾವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಪಕ್ಷದ ಅಧ್ಯಕ್ಷರಾಗಿ ನಡ್ಡಾ ಅವರ ಮೂರು ವರ್ಷಗಳ ಅವಧಿಯು ಈ ತಿಂಗಳ ಕೊನೆಯಲ್ಲಿ ಮುಕ್ತಾಯವಾಗಲಿದೆ.
ಈ ವೇಳೆ ಹಲವು ಸಾಂಸ್ಥಿಕ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯೂ ಇದೆ. ಬಿಜೆಪಿಯು 2024 ರಲ್ಲಿ ಗೆಲ್ಲಲು ಕಷ್ಟವೆಂದು ಪರಿಗಣಿಸಿದ ಲೋಕಸಭಾ ಸ್ಥಾನಗಳನ್ನು ಈಗ 144 ರಿಂದ 160ಕ್ಕೆ ಹೆಚ್ಚಾಗಿದೆ.
ಇದರಲ್ಲಿ ಬಹುಪಾಲು ಕ್ಷೇತ್ರಗಳು ಬಿಹಾರಕ್ಕೆ ಸೇರಿದ್ದು, ಜನತಾದಳ (ಯುನೈಟೆಡ್) ಜೊತೆಗಿನ ಮೈತ್ರಿ ಮುರಿದುಕೊಂಡು ಬಹುತೇಕ ಕ್ಷೇತ್ರಗಳಲ್ಲಿ ಸ್ವಂತವಾಗಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ.

ಬಿಜೆಪಿ ಹಲವಾರು ಕೇಂದ್ರ ಸಚಿವರನ್ನು ಒಳಗೊಂಡಿರುವ ಈ 160 ಸ್ಥಾನಗಳಲ್ಲಿ ತನ್ನ ಸಂಘಟನಾ ಜಾಲವನ್ನು ವಿಸ್ತರಿಸಲು ಮತ್ತು ತನ್ನ ಮತದಾರರನ್ನು ತಲುಪಲು ಕೆಲಸ ಮಾಡಲು ಸೂಚಿಸಿದೆ. ಮೂಲಗಳ ಪ್ರಕಾರ, ಪಕ್ಷದ ಉನ್ನತ ನಾಯಕರು ಈ ಸ್ಥಾನಗಳಲ್ಲಿ ಪಕ್ಷದ ಚಟುವಟಿಕೆಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಾರೆ.
2019ರ ಚುನಾವಣೆಯಲ್ಲಿ ಬಿಜೆಪಿ ಇದೇ ರೀತಿಯ ಗೆಲ್ಲಲು ಕಠಿಣ ಇರುವ ಸ್ಥಾನಗಳ ಪಟ್ಟಿಯನ್ನು ಸಿದ್ಧಪಡಿಸಿತ್ತು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿತ್ತು. 543 ಸದಸ್ಯರ ಲೋಕಸಭೆಯಲ್ಲಿ 2014 ರಲ್ಲಿ ಗೆದ್ದಿದ್ದ 282 ಸ್ಥಾನಗಳಿಗೆ ಹೋಲಿಸಿದರೆ 2019 ರಲ್ಲಿ ಪಕ್ಷವು 303 ಸ್ಥಾನಗಳನ್ನು ಗೆದ್ದಿದೆ.
ಹಲವು ರಾಜ್ಯಗಳಲ್ಲಿ ಪ್ರಸ್ತಾವಿತ ವಿಧಾನಸಭೆ ಚುನಾವಣೆಗಳನ್ನು 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ‘ಸೆಮಿಫೈನಲ್’ ಎಂದು ಪರಿಗಣಿಸಲಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲದೆ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣ ಕೂಡ ಈ ವರ್ಷ ವಿಧಾನಸಭಾ ಚುನಾವಣೆಗಳನ್ನು ನಡೆಸಲಿದೆ. ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ತ್ರಿಪುರಾ ಮತ್ತು ಮೇಘಾಲಯದಲ್ಲಿ ಮೊದಲು ವಿಧಾನಸಭೆ ಚುನಾವಣೆ ನಡೆಯಲಿದೆ. ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಈ ರಾಜ್ಯಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಪ್ರಮುಖ ಸುದ್ದಿ :-   ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ನಾಲ್ವರು ಶಂಕಿತ ಐಸಿಸ್ ಭಯೋತ್ಪಾದಕರ ಬಂಧನ

ಅವರ ವಿಧಾನಸಭೆಗಳ ಅವಧಿಯು ಮಾರ್ಚ್‌ನಲ್ಲಿ ವಿವಿಧ ದಿನಾಂಕಗಳಲ್ಲಿ ಕೊನೆಗೊಳ್ಳುತ್ತಿದೆ. ತ್ರಿಪುರಾದಲ್ಲಿ ಬಿಜೆಪಿ ಆಡಳಿತದಲ್ಲಿದ್ದರೆ, ನಾಗಾಲ್ಯಾಂಡ್‌ನಲ್ಲಿ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ಅಧಿಕಾರದಲ್ಲಿದೆ. ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಆಡಳಿತ ನಡೆಸುತ್ತಿದೆ, ಈಶಾನ್ಯದಲ್ಲಿ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಹೊಂದಿರುವ ಏಕೈಕ ಪಕ್ಷವಾಗಿದೆ.
ಮೂರು ರಾಜ್ಯಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಬಳಿಕ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕದ 224 ಸದಸ್ಯರ ವಿಧಾನಸಭೆಯ ಅವಧಿಯು ಮೇ 24 ರಂದು ಕೊನೆಗೊಳ್ಳುತ್ತದೆ. ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಚುನಾವಣೆಗಳು ಏಪ್ರಿಲ್ ಅಂತ್ಯದಲ್ಲಿ ಅಥವಾ ಮೇ ಆರಂಭದಲ್ಲಿ ನಡೆಯಬಹುದು.

ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದ ವಿಧಾನಸಭೆ ಅವಧಿಯು ಈ ವರ್ಷದ ಡಿಸೆಂಬರ್ ಮತ್ತು ಜನವರಿ 2024 ರಲ್ಲಿ ವಿವಿಧ ದಿನಾಂಕಗಳಲ್ಲಿ ಕೊನೆಗೊಳ್ಳಲಿದೆ.
40 ಸದಸ್ಯರ ಮಿಜೋರಾಂ ವಿಧಾನಸಭೆಯ ಅವಧಿಯು ಡಿಸೆಂಬರ್ 17 ರಂದು ಕೊನೆಗೊಳ್ಳುತ್ತದೆ, ಆದರೆ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ವಿಧಾನಸಭೆಗಳ ಅವಧಿಯು 2024ರ ಜನವರಿ 3 ಮತ್ತು ಜನವರಿ 6ರಂದು ಕೊನೆಗೊಳ್ಳುತ್ತದೆ. ಅದರ ನಂತರ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆಯ ಅವಧಿಯು 2024ರ ಜನವರಿ 14 ಮತ್ತು ಜನವರಿ 16 ರಂದು ಮುಕ್ತಾಯಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಐದು ರಾಜ್ಯಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯ ಹೊರತಾಗಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಪ್ರಮುಖ ಸುದ್ದಿ :-   "ನೀವು ಮತವನ್ನೂ ಹಾಕಿಲ್ಲ...": ತಮ್ಮದೇ ಪಕ್ಷದ ಸಂಸದನಿಗೆ ಶೋಕಾಸ್ ನೋಟಿಸ್ ನೀಡಿದ ಬಿಜೆಪಿ..

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement