ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಮಾಜಿ ಸಿಎಂ ಎಸ್‌.ಎಂ.ಕೃಷ್ಣ

ಬೆಂಗಳೂರು ; ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್. ಎಂ. ಕೃಷ್ಣ ರಾಜಕೀಯ ನಿವೃತ್ತಿಯಾಗುವುದಾಗಿ ಹೇಳಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಅವರು ರಾಜಕೀಯ ನಿವೃತ್ತಿಯಾಗುವ ಮಾತನ್ನಾಡಿದ್ದಾರೆ. ಬುಧವಾರ ಎಸ್. ಎಂ. ಕೃಷ್ಣ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಅದರ ಜೊತೆಗೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವ ಇಂಗಿತವವನ್ನೂ ವ್ಯಕ್ತಪಡಿಸಿದ್ದಾರೆ.
ನಮ್ಮ ವಯಸ್ಸಿನ ಬಗ್ಗೆ ಅರಿವು ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ನಾನು ಸಕ್ರಿಯ ರಾಜಕಾರಣದಿಂದ ದೂರ ಸರಿಯುತ್ತಿದ್ದೇನೆ. 90ರ ವಯಸ್ಸಿನಲ್ಲಿ ನನಗೆ 50 ವರ್ಷದವರ ಹಾಗೆ ನಟನೆ ಮಾಡಲು ಬರುವುದಿಲ್ಲ ಎಂದು ನಿವೃತ್ತಿಯ ಬಗ್ಗೆ ಭಾರವಾದ ನುಡಿಗಳನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನುಡಿದಿದ್ದಾರೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಿದ  ವೇಳೆ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಕ್ರಿಯ ರಾಜಕಾರಣದಿಂದ ನಾನು ದೂರ ಸರಿಯುತ್ತಿದ್ದೇನೆ. ನಮ್ಮ ವಯಸ್ಸಿನ ಬಗ್ಗೆ ಅರಿವಿರಬೇಕು. 90ರಲ್ಲಿ 50ರ ತರಹ ನಟನೆ ಮಾಡಲು ಆಗಲ್ಲ. ಸಾರ್ವಜನಿಕ ಜೀವನದಿಂದ ದೂರ ಇರಬೇಕು ಅಂತ ತಿರ್ಮಾನ ಮಾಡಿದ್ದೇನೆ. ಹಾಗಾಗಿಯೇ ನಾನು ಎಲ್ಲೂ ಈಗ ಸಾರ್ವಜನಿಕ ವಾಗಿ ಕಾಣಿಸ್ಕೊಳ್ಳುತ್ತಿಲ್ಲ. ವಯಸ್ಸಿಗೆ ಬೆಲೆ ಕೊಟ್ಟು ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ರಾಜಕೀಯ ನಿವೃತ್ತಿಯ ಬಗ್ಗೆ ಹೇಳಿದರು.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಪಕ್ಷದಿಂದ ಕಡೆಗಣಿಸಲಾಗುತ್ತದೆ ಎಂಬ ಬಗ್ಗೆ ನೋವಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನೇ ಸಾರ್ವಜನಿಕ ಜೀವನದಿಂದ ರಿಟೈರ್ ಆಗುವಾಗ ಪಕ್ಷ ನನ್ನ ಕಡೆಗಣಿಸಿದೆ ಎಂಬ ಪ್ರಶ್ನೆಯೇ ಬರುವುದಿಲ್ಲ. ರಾಜಕೀಯವಾಗಿ ನಿವೃತ್ತಿ ಬಗ್ಗೆ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿಲ್ಲ. ಅವರ ಗಮನಕ್ಕೆ ತಂದರೆ ನನಗೇನು ಅವರು ಫೆನ್ಶನ್ ಕೊಡುವುದಿಲ್ಲ. ಹೀಗಾಗಿ ಅವರ ಗಮನಕ್ಕೆ ತಂದಿಲ್ಲ. ತೊಂಬತ್ತರ ಸನಿಹದಲ್ಲಿರುವಾಗ ನಾನು ಐವತ್ತು ವರ್ಷದವರಂತೆ ಕೆಲಸ ಮಾಡಲು ಸಾಧ್ಯವೇ..? ನನ್ನ ವಯಸ್ಸನ್ನು ಪರಿಗಣಿಸಿ ನಾನೇ ಸ್ವಯಂ ಪ್ರೇರಿತರಾಗಿ ರಿಟೈರ್ (ನಿವೃತ್ತಿ) ಆಗುತ್ತಿರುವಾಗ ಇದರ ಬಗ್ಗೆ ಹೇಳಬೇಕಿಲ್ಲ ಎಂದು ಹೇಳಿದರು.

ಮೈಸೂರು ರಸ್ತೆಗೆ ನಾಲ್ವಡಿ ಹೆಸರು ಸೂಕ್ತ
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ದೇಶ ಕಂಡ ಮಹಾನ್ ವ್ಯಕ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವುದು ಸೂಕ್ತವಾಗಿದೆ. ಅವರು ಅಭಿವೃದ್ಧಿ ವಿಚಾರವಾಗಿ ಅಪಾರ ಕೆಲಸ ಮಾಡಿದ್ದಾರೆ. ಹೀಗಾಗಿ, ನಾನೂ ಕೂಡ ದಶಪಥ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನ ನಾಮಕರಣ ಮಾಡಲು ಕೇಂದ್ರ ಸಾರಿಗೆ ನಿತಿನ್ ಗಡ್ಕರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಸಂಘಟನೆ ಬಗ್ಗೆ ಮೇಲೆ ಬಿದ್ದು ಸಲಹೆ ಕೊಡಲಾಗಲ್ಲ: ಈಗಾಗಲೇ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯಿಂದ ಸಂಘಟನೆಯ ಪ್ರಯತ್ನ ನಡೆಯುತ್ತಿದೆ. ಆದರೆ, ಯಾವ ವಿಚಾರ ಸಂಘಟನೆಗೆ ಪೂರಕಎನ್ನುವುದರ ಬಗ್ಗೆ ಆ ಬಗ್ಗೆ ಹೊಣೆ ಇರುವವರು ಇರುವವರು ಯೋಚನೆ ಮಾಡಬೇಕು. ಸಂಘಟನೆ ಕುರಿತು ನಾನು ಮೇಲೆ ಬಿದ್ದು ಸಲಹೆ ಕೊಡಲು ಹೋಗಲ್ಲ. ಅವರಾಗಿಯೇ ಕೇಳಿದರೆ ಸಲಹೆ ಕೊಡುತ್ತೇನೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement