ಸಿಸಿಐ ವಿಧಿಸಿದ್ದ ₹1,337 ಕೋಟಿ ದಂಡದಲ್ಲಿ ಶೇ.10ರಷ್ಟು ಠೇವಣಿ ಇರಿಸಲು ಗೂಗಲ್‌ಗೆ ಸೂಚಿಸಿದ ಎನ್‌ಸಿಎಲ್‌ಎಟಿ

ನವದೆಹಲಿ: ಭಾರತೀಯ ಸ್ಪರ್ಧಾ ಆಯೋಗವು ತನ್ನ ಮೇಲೆ ವಿಧಿಸಿದ್ದ ₹ 1,337 ಕೋಟಿ ದಂಡದ ಆದೇಶದ ವಿರುದ್ಧ ಗೂಗಲ್‌ ಸಲ್ಲಿಸಿರುವ ಮನವಿ ಆಲಿಸುವ ಮುನ್ನ ದಂಡದ ಮೊತ್ತದ ಶೇ.10ರಷ್ಟು ಹಣ ಠೇವಣಿ ಇರಿಸುವಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ಗೂಗಲ್‌ಗೆ ಬುಧವಾರ ಆದೇಶಿಸಿದೆ.
ಆಂಡ್ರಾಯ್ಡ್‌ ಮೊಬೈಲ್‌ ಮಾರುಕಟ್ಟೆಯಲ್ಲಿ ತನ್ನ ಪ್ರಭಾವಿ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಗೂಗಲ್‌ಗೆ ಭಾರತೀಯ ಸ್ಪರ್ಧಾ ಅಯೋಗವು (ಸಿಸಿಐ) ಅಕ್ಟೋಬರ್ 2022ರಲ್ಲಿ ₹ 1,337 ಕೋಟಿ ದಂಡ ವಿಧಿಸಿತ್ತು. ಆದೇಶವನ್ನು ಗೂಗಲ್‌ ರಾಷ್ಟ್ರೀಯ ಕಂಪನಿಯು ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ (ಎನ್‌ಸಿಎಲ್‌ಎಟಿ) ಪ್ರಶ್ನಿಸಿದೆ.
ಎನ್‌ಸಿಎಲ್‌ಎಟಿಯ ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ರಾಕೇಶ್ ಕುಮಾರ್, ಮತ್ತು ತಾಂತ್ರಿಕ ಸದಸ್ಯ ಡಾ ಅಲೋಕ್ ಶ್ರೀವಾಸ್ತವ ಅವರು ಯಾವುದೇ ಮಧ್ಯಂತರ ಆದೇಶ ನೀಡಲು ಬುಧವಾರ ನಿರಾಕರಿಸಿದ್ದು, ಸಿಸಿಐ ಆದೇಶಕ್ಕೆ ತಡೆ ನೀಡಬೇಕು ಮತ್ತು ಮಧ್ಯಂತರ ಪರಿಹಾರ ಒದಗಿಸಬೇಕೆಂದು ಕೋರಿರುವ ಅರ್ಜಿಯನ್ನು ಫೆಬ್ರವರಿ 13ರಂದು ಆಲಿಸುವುದಾಗಿ ತಿಳಿಸಿತು.

ಗೂಗಲ್ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ, ಯೂರೋಪಿಯನ್‌ ಕಮಿಷನ್‌ 2018ರಲ್ಲಿ ಆಂಡ್ರಾಯ್ಡ್‌ ಮೊಬೈಲ್‌ ಸಾಧನ ತಯಾರಕರ ಮೇಲೆ ಅಕ್ರಮ ನಿರ್ಬಂಧ ಹೇರಿದ ಆರೋಪಕ್ಕಾಗಿ ಗೂಗಲ್‌ಗೆ 4.1 ಶತಕೋಟಿ ಯುರೋಗಳಷ್ಟು ದಂಡ ವಿಧಿಸಿತ್ತು. ಸಿಸಿಐ ನೀಡಿರುವ ಆದೇಶ, ಯುರೋಪಿಯನ್ ಕಮಿಷನ್ ನೀಡಿದ್ದ ಆದೇಶದ ಯಥಾವತ್‌ ನಕಲಾಗಿದೆ ಎಂದು ವಾದಿಸಿದರು.
ಅವರು (ಸಿಸಿಐ) ಯುರೋಪಿಯನ್ ಕಮಿಷನ್ ಆದೇಶವನ್ನು ಕಾಪಿ ಪೇಸ್ಟ್ ಮಾಡಿದ್ದಾರೆ. ಈ ಆದೇಶದ ಮೂಲಕ ಸಿಸಿಐ 2005ರಿಂದ ಅಂದರೆ ಕಳೆದ 17 ವರ್ಷಗಳಿಂದ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಬದಲಾಯಿಸುತ್ತಿದೆ ಎಂದು ಆರೋಪಿಸಿದರು.
ಆದರೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಿಸಿಐ ಆದೇಶ ಬಂದಿರುವುದರಿಂದ ಮಧ್ಯಂತರ ಆದೇಶ ರವಾನಿಸುವ ಯಾವುದೇ ತುರ್ತು ಅಗತ್ಯವಿಲ್ಲ ಎಂದು ಎನ್‌ಸಿಎಲ್‌ಎಟಿ ಹೇಳಿದೆ. “ಮಧ್ಯಂತರ ಆದೇಶ ನೀಡುವ ಮೊದಲು ದಾಖಲೆಗಳನ್ನು ನೋಡಬೇಕಿದೆ. ಅರ್ಧಗಂಟೆ ನಿಮ್ಮ ಮಾತು ಕೇಳಿ ಆದೇಶ ರವಾನಿಸುತ್ತೇವೆ ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ” ಎಂದ ನ್ಯಾಯಮಂಡಳಿ ಪ್ರಕರಣವನ್ನು ಫೆಬ್ರವರಿ 13ಕ್ಕೆ ಮುಂದೂಡಿತು.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

ವಿತ್ತೀಯ ದಂಡವನ್ನು ವಿಧಿಸುವುದರ ಹೊರತಾಗಿ, ಸಿಸಿಐ (CCI) ಸ್ಪರ್ಧಾತ್ಮಕ-ವಿರೋಧಿ ಅಭ್ಯಾಸಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಲು ಮತ್ತು ತ್ಯಜಿಸಲು ಗೂಗಲ್‌(Google)ಗೆ ನಿರ್ದೇಶಿಸಿದೆ ಮತ್ತು ಅದರ ನಡವಳಿಕೆಯನ್ನು ನಿರ್ದಿಷ್ಟ ಸಮಯದೊಳಗೆ ಬದಲಾಯಿಸಿಕೊಳ್ಳಲು ನಿರ್ದೇಶಿಸಿದೆ.
ಆಯೋಗವು ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಮತ್ತು ಅದರ ಹಲವಾರು ಮೊಬೈಲ್ ಅಪ್ಲಿಕೇಶನ್‌ಗಳಾದ ಪ್ಲೇ ಸ್ಟೋರ್, ಗೂಗಲ್ ಸರ್ಚ್, ಗೂಗಲ್ ಕ್ರೋಮ್, ಯೂಟ್ಯೂಬ್ ಇತ್ಯಾದಿಗಳ ಪರವಾನಗಿಗೆ ಸಂಬಂಧಿಸಿದಂತೆ ಗೂಗಲ್‌ನ ವಿವಿಧ ಅಭ್ಯಾಸಗಳನ್ನು ಪರಿಶೀಲಿಸಿತು. ಅದರ ಮೌಲ್ಯಮಾಪನದ ಆಧಾರದ ಮೇಲೆ, ಆಯೋಗವು ಎಲ್ಲಾ ಸಂಬಂಧಿತ ಮಾರುಕಟ್ಟೆಗಳಲ್ಲಿ ಗೂಗಲ್‌ ಪ್ರಬಲವಾಗಿದೆ ಎಂದು ಕಂಡುಹಿಡಿದಿದೆ.
ಮಾರುಕಟ್ಟೆಗಳು ಅರ್ಹತೆಯ ಮೇಲೆ ಸ್ಪರ್ಧಿಸಲು ಅವಕಾಶ ನೀಡಬೇಕು ಮತ್ತು ಅದರ ನಡವಳಿಕೆಯು ಅರ್ಹತೆಯ ಮೇಲೆ ಈ ಸ್ಪರ್ಧೆಯನ್ನು ಅಡ್ಡಿಪಡಿಸುವುದಿಲ್ಲ ಎಂದು ತೋರಿಸುವ ಜವಾಬ್ದಾರಿಯು ಪ್ರಬಲ ಕಂಪನಿ ಮೇಲಿದೆ ಎಂದು ಅದು ಹೇಳಿದೆ.

3.5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement