ಜೋಶಿಮಠದ 500 ಕ್ಕೂ ಹೆಚ್ಚು ಮನೆ-ಕಟ್ಟಡಗಳಲ್ಲಿ ಬಿರುಕು: ದೇವಸ್ಥಾನ ಕುಸಿತ | ವೀಕ್ಷಿಸಿ

ಜೋಶಿಮಠ (ಉತ್ತರಾಖಂಡ): ಉತ್ತರಾಖಂಡದ ಹಿಮಾಲಯದ ಜೋಶಿಮಠದಲ್ಲಿ ಶುಕ್ರವಾರ ಸಂಜೆ ದೇವಾಲಯವೊಂದು ಕುಸಿದಿದ್ದು, 500 ಕ್ಕೂ ಹೆಚ್ಚು ಮನೆಗಳು ಮತ್ತು ಇತರ ಕಟ್ಟಡಗಳು ಬಿರುಕು ಬಿಟ್ಟಿರುವುದರಿಂದ ತೀವ್ರ ಚಳಿಯಲ್ಲಿ ಬೀಡುಬಿಟ್ಟಿರುವ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. ಗುರುವಾರದಿಂದ ತೆರವು ಕಾರ್ಯ ಆರಂಭಗೊಂಡಿದ್ದು, ಭೂಮಿ ಕುಸಿದು ಕೆಲವು ದಿನಗಳ ನಂತರ ಮನೆಗಳು ಮತ್ತು ದೇವಾಲಯಗಳ ಗೋಡೆಗಳು ಬಿರುಕು ಬಿಟ್ಟಿವೆ. ಮನೆ-ಮನೆ … Continued

ಕನ್ನಡಕ್ಕೆ ಯಾವತ್ತಿಗೂ ಕುತ್ತು ತರಲು ಸಾಧ್ಯವಿಲ್ಲ : ಸಿಎಂ ಬೊಮ್ಮಾಯಿ

posted in: ರಾಜ್ಯ | 0

ಹಾವೇರಿ: ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಇದಕ್ಕೆ ಆಪತ್ತು ತರುವ ಶಕ್ತಿ ವಿಶ್ವದಲ್ಲಿ ಎಲ್ಲಿಯೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಶುಕ್ರವಾರದಿಂದ ಆರಂಭವಾದ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, , ಭಾರತ ದೇಶದಲ್ಲಿ ಕನ್ನಡಕ್ಕೆ ಮಾತ್ರ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ದೇಶದ ಬೇರೆ … Continued

ಜೈನರ ಪವಿತ್ರ ಸ್ಥಳ ಶ್ರೀ ಸಮ್ಮೇದ್ ಶಿಖರ್ಜಿ ಕುರಿತ ಜಾರ್ಖಂಡ್ ಸರ್ಕಾರದ ನಿರ್ಧಾರದ ವಿರುದ್ಧ ಉಪವಾಸ ಮಾಡುತ್ತಿದ್ದ ಮತ್ತೊಬ್ಬ ಜೈನ ಸನ್ಯಾಸಿ ನಿಧನ

ಜೈಪುರ: ಜೈನರ ಪವಿತ್ರ ಕ್ಷೇತ್ರ ಶ್ರೀ ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿ ಸ್ಥಳವನ್ನಾಗಿ ಘೋಷಿಸುವ ಜಾರ್ಖಂಡ್ ಸರ್ಕಾರದ ನಿರ್ಧಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜೈನ ಸನ್ಯಾಸಿಯೊಬ್ಬರು ಜೈಪುರದಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಸಮುದಾಯದ ಮುಖಂಡರೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಜೈನ ಸನ್ಯಾಸಿ ಸಮರ್ಥ ಸಾಗರ (74) ಅವರು ಐದು ದಿನಗಳ ಉಪವಾಸದ ನಂತರ ಶುಕ್ರವಾರ ಬೆಳಗಿನ ಜಾವ … Continued

ಅಪ್ರಾಪ್ತ ವಿದ್ಯಾರ್ಥಿನಿ ಜೊತೆ ತಿರುಗಾಡುತ್ತಿದ್ದ ಅನ್ಯಕೋಮಿನ ಯುವಕನಿಗೆ ಥಳಿತ

posted in: ರಾಜ್ಯ | 0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ‘ನೈತಿಕ ಪೊಲೀಸ್ ಗಿರಿ’ ಪ್ರಕರಣ ವರದಿಯಾಗಿದ್ದು, ಗುರುವಾರ ಸಂಜೆ ಸುಬ್ರಹ್ಮಣ್ಯದಲ್ಲಿ ಗುಂಪೊಂದು 20 ವರ್ಷದ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ. ಸುಳ್ಯ ತಾಲೂಕಿನ ಕಲ್ಲುಗುಂಡಿ ನಿವಾಸಿ ಅಫೀದ್ ಎಂಬ ಯುವಕ 17 ವರ್ಷದ ಹಿಂದೂ ಯುವತಿಯನ್ನು ಬಸ್ ನಿಲ್ದಾಣದಲ್ಲಿ ಭೇಟಿ ಮಾಡುತ್ತಿದ್ದ ಎನ್ನಲಾಗಿದೆ. ಸುಬ್ರಹ್ಮಣ್ಯದ … Continued

ಪರ್ಯಾಯ ಸಮ್ಮೇಳನಕ್ಕೆ ಸಚಿವ ಸುನಿಲಕುಮಾರ ಆಕ್ಷೇಪ

posted in: ರಾಜ್ಯ | 0

ಹಾವೇರಿ: ಸರ್ಕಾರದ ವತಿಯಿಂದ ನಡೆಯುತ್ತಿರುವ ಸಮ್ಮೇಳನಕ್ಕೆ ವಿರುದ್ಧವಾಗಿ ಪರ್ಯಾಯ ಸಮ್ಮೇಳನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲಕುಮಾರ ಹೇಳಿದ್ದಾರೆ. ಈ ಸಂಬಂಧ ಹಾವೇರಿಯಲ್ಲಿ ಆರಂಭವಾಗಿರುವ 86ನೇ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮಾತನಾಡಿದ ಅವರು, ದೊಡ್ಡ ಕಾರ್ಯಕ್ರಮದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾಗಬಹುದು. ಅದನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಮಹತ್ವವಾಗಿರುವ … Continued

ಬಿ.ಇಡಿ ಕೋರ್ಸ್‌ಗೆ ಆಯ್ಕೆ ಪಟ್ಟಿ ಪ್ರಕಟ

posted in: ರಾಜ್ಯ | 0

ಬೆಂಗಳೂರು: 2022-23ನೇ ಸಾಲಿನ ಎರಡು ವರ್ಷದ ಬಿ.ಇಡಿ ಕೋರ್ಸ್ ನ ದಾಖಲಾತಿಗೆ ( B.Ed Course Admission 2023 ) ಸಂಬಂಧಿಸಿದಂತೆ ಸರ್ಕಾರಿ ಕೋಟಾದ ಸೀಟುಗಳ ಆಯ್ಕೆ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. 2022-23ನೇ ಸಾಲಿನ ಬಿಇಡಿ … Continued

ಸಲಿಂಗ ವಿವಾಹ: ಹೈಕೋರ್ಟ್‌ಗಳ ಮುಂದಿರುವ ಎಲ್ಲ ಅರ್ಜಿಗಳನ್ನು ತನಗೆ ವರ್ಗಾಯಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸಲಿಂಗಿ, ದ್ವಿಲಿಂಗಿ, ಮಂಗಳಮುಖಿ, ಲಿಂಗಪರಿವರ್ತಿತ, ಅಸಮ, ಅಂತರ್‌ ಲಿಂಗಿ, ಅಲೈಂಗಿಕ ಮತ್ತಿತರ (ಎಲ್‌ಜಿಬಿಟಿಕ್ಯುಐಎ ಪ್ಲಸ್‌) ಸಮುದಾಯಕ್ಕೆ ಸೇರಿದವರಿಗೂ ವಿವಾಹದ ಹಕ್ಕನ್ನು ವಿಸ್ತರಿಸುವಂತೆ ಕೋರಿ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳನ್ನು ತನಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ … Continued

ಸದ್ಯಕ್ಕೆ ದೆಹಲಿಗೆ ಮೇಯರ್ ಇಲ್ಲ: ಎಎಪಿ-ಬಿಜೆಪಿ ಘರ್ಷಣೆ ನಂತರ ಚುನಾವಣೆ ಮುಂದೂಡಿಕೆ

ನವದೆಹಲಿ : 10 ಮಂದಿ ಆಲ್ಡರ್‌ಮನ್‌ಗಳಿಗೆ ಮೊದಲು ಪ್ರಮಾಣ ವಚನ ಬೋಧಿಸುವ ಸಭಾಧ್ಯಕ್ಷರ ನಿರ್ಧಾರದ ಕುರಿತು ಆಪ್ ಕೌನ್ಸಿಲರ್‌ಗಳ ತೀವ್ರ ಪ್ರತಿಭಟನೆಯ ನಡುವೆ ಹೊಸದಾಗಿ ಆಯ್ಕೆಯಾದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ನ ಮೊದಲ ಸಭೆಯಲ್ಲಿ ಮೇಯರ್ ಮತ್ತು ಉಪಮೇಯರ್ ಆಯ್ಕೆ ಮಾಡದೆ ಮುಂದೂಡಲಾಗಿದೆ. ಸಭೆಯ ಹೊಸ ದಿನಾಂಕವನ್ನು ನಂತರ ಪ್ರಕಟಿಸಲಾಗುತ್ತದೆ ಎಂದು ತಿಳಿಸಲಾಗಿದೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ … Continued

ವೈಎಸ್‌ವಿ ದತ್ತ ಕಾಂಗ್ರೆಸ್​ ಸೇರ್ಪಡೆಗೆ ಮುಹೂರ್ತ ಫಿಕ್ಸ್

posted in: ರಾಜ್ಯ | 0

ಚಿಕ್ಕಮಗಳೂರು:: ಜನವರಿ 15ರ ಬಳಿಕ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗುವುದಾಗಿ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಪ್ರಕಟಿಸಿದ್ದಾರೆ. ಕಡೂರು ತಾಲೂಕಿನ ಸ್ವಗ್ರಾಮ ಯುಗಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಐವತ್ತು ವರ್ಷಗಳಿಂದ ಮಾಜಿ ಪ್ರಧಾನಿ ದೇವೇಗೌಡರು-ನನ್ನದು ತಂದೆ ಮಕ್ಕಳ ಸಂಬಂಧ ಆಗಿದೆ. ನಾನು ಎಲ್ಲೇ … Continued

ಶೀತಗಾಳಿ ಆಘಾತ : ಕಾನ್ಪುರದಲ್ಲಿ ಒಂದೇ ದಿನ 25 ಮಂದಿ ಹೃದಯಾಘಾತ, ಬ್ರೈನ್ ಸ್ಟ್ರೋಕ್‌ನಿಂದ ಸಾವು

ಕಾನ್ಪುರ: ಉತ್ತರ ಪ್ರದೇಶದಲ್ಲಿ ಚಳಿಗಾಳಿ ದಿನದಿಂದ ದಿನಕ್ಕೆ ಮಾರಕವಾಗುತ್ತಿದೆ. ಕಾನ್ಪುರದಲ್ಲಿ ಗುರುವಾರ 25 ಮಂದಿ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ ಹದಿನೇಳು ಮಂದಿ ವೈದ್ಯಕೀಯ ನೆರವು ನೀಡುವ ಮುನ್ನವೇ ಸಾವಿಗೀಡಾಗಿದ್ದಾರೆ. ವೈದ್ಯರ ಪ್ರಕಾರ, ಶೀತದಲ್ಲಿ ರಕ್ತದೊತ್ತಡವು ಹಠಾತ್ ಹೆಚ್ಚಳ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಹೃದಯಾಘಾತ ಮತ್ತು ಮೆದುಳಿನ ಮೇಲೆ ಪರಿಣಾಮಕ್ಕೆ … Continued