8ನೇ ತರಗತಿ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ 47 ವರ್ಷದ ಶಿಕ್ಷಕ…!

ಕಾನ್ಪುರ : ಉತ್ತರ ಪ್ರದೇಶದ ಬಲ್ಲಾರ್ಪುರದ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ, ಎಂಟನೇ ತರಗತಿ ಬಾಲಕಿಗೆ ಪ್ರೇಮ ಪತ್ರ ಬರೆದು ಈಗ ಅಮಾನತಾಗಿದ್ದಾನೆ ಹಾಗೂ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
13 ವರ್ಷದ ಬಾಲಕಿಯ ತಂದೆ ಶುಕ್ರವಾರ ನೀಡಿದ ದೂರಿನ ಅನ್ವಯ ಶಿಕ್ಷಕ ಹರಿ ಓಂ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕುನ್ವಾರ್ ಎಸ್‌ಪಿ ಅನುಪಮ್ ಸಿಂಗ್ ತಿಳಿಸಿದ್ದಾರೆ.
ಕನೌಜ್‌ನಲ್ಲಿ ಎಂಟನೇ ತರಗತಿಯ ಬಾಲಕಿಗೆ ಶಿಕ್ಷಕರೊಬ್ಬರು ‘ಪ್ರೇಮ ಪತ್ರ’ ಬರೆದಿದ್ದಾರೆ ಮತ್ತು ಓದಿದ ನಂತರ ಅದನ್ನು ಹರಿದು ಹಾಕುವಂತೆ ಹೇಳಿದ್ದಾರೆ ಎಂದು ಆರೋಪಿಸಿ ಬಾಲಕಿಯ ಕುಟುಂಬವು ದೂರು ನೀಡಿದೆ. ಡಿಸೆಂಬರ್ 30 ರಂದು ವಿದ್ಯಾರ್ಥಿನಿಗೆ ಪತ್ರ ನೀಡಲಾಗಿತ್ತು, ನಂತರ ಶಾಲೆಗೆ ಚಳಿಗಾಲದ ರಜೆ ನೀಡಲಾಗಿತ್ತು. ಶಿಕ್ಷಕ ಕಿರುಕುಳ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕುಟುಂಬದವರು ಸದರ್ ಕೊತ್ವಾಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಯು ವಿಚಾರಣೆ ನಡೆಸಿ ವರದಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲು ಸೂಚಿಸಲಾಗಿದೆ ಎಂದು ಕನ್ನೌಜ್ ಎಸ್ಪಿ ಕುನ್ವರ್ ಅನುಪಮ್ ಸಿಂಗ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ಬ್ಲಾಕ್ ಶಿಕ್ಷಣಾಧಿಕಾರಿ ನೇತೃತ್ವದ ತಂಡ ತನಿಖೆ ಆರಂಭಿಸಿದೆ ಎಂದು ಮೂಲ ಶಿಕ್ಷಾ ಅಧಿಕಾರಿ ಕೌಸ್ತುಭ್ ಸಿಂಗ್ ತಿಳಿಸಿದ್ದಾರೆ. “ಪತ್ರದಲ್ಲಿನ ಕೈಬರಹವನ್ನು ಶಿಕ್ಷಕರ ಕೈಬರಹದೊಂದಿಗೆ ಹೊಂದಿಸಿ ನೋಡಲು ನಾವು ಪೊಲೀಸರಿಗೆ ವಿನಂತಿಸಿದ್ದೇವೆ.ವಿಚಾರಣೆಯಲ್ಲಿ ಆರೋಪಗಳು ಸಾಬೀತಾದರೆ ಶಿಕ್ಷಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಸುಮಾರು 47 ವರ್ಷ ವಯಸ್ಸಿನ ಶಿಕ್ಷಕ ಕಿರುಕುಳ ನೀಡುತ್ತಿದ್ದ ಎಂದು ಬಾಲಕಿಯ ತಂದೆ ಹೇಳಿದ್ದಾರೆ. ” ಡಿಸೆಂಬರ್ 30 ರಂದು ಶಿಕ್ಷಕ ತನಗೆ ಪ್ರೇಮ ಪತ್ರ ನೀಡಿದ್ದಾನೆ ಎಂದು ನನ್ನ ಮಗಳು ಹೇಳಿದ್ದಾಳೆ. ನಾವು ಈ ಬಗ್ಗೆ ಶಿಕ್ಷಕನನ್ನು ಭೇಟಿ ಮಾಡಿ ತನ್ನ ಕೃತ್ಯಕ್ಕೆ ಕ್ಷಮಾಪಣೆ ಕೋರುವಂತೆ ಆಗ್ರಹಿಸಿದ್ದರು. ಆದರೆ ಕ್ಷಮೆ ಕೋರಲು ನಿರಾಕರಿಸಿದ್ದ ಶಿಕ್ಷಕ, ಇದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ. ಅಲ್ಲದೆ, ಮಗಳನ್ನು ಅಪಹರಿಸುವುದಾಗಿ ನಮಗೆ ಬೆದರಿಕೆ ಹಾಕಿದ್ದಾನೆ ಎಂದು ಅವರು ಹೇಳಿದರು.

ವಿದ್ಯಾರ್ಥಿನಿಯ ಹೆಸರಿನೊಂದಿಗೆ ಪತ್ರ ಆರಂಭಿಸಿರುವ ಶಿಕ್ಷಕ, ಆಕೆಯನ್ನು ಬಹಳ ಪ್ರೀತಿಸುತ್ತಿರುವುದಾಗಿ ಬರೆದುಕೊಂಡಿದ್ದಾನೆ. ರಜಾ ದಿನಗಳ ವೇಳೆ ಆಕೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾಗಿ ಹೇಳಿಕೊಂಡಿರುವ ಆತ, ಸಮಯ ಸಿಕ್ಕರೆ ಕರೆ ಮಾಡಬೇಕು ಎಂದು ತಿಳಿಸಿದ್ದಾನೆ.
ಶಿಕ್ಷಕ ಮತ್ತು ಆತನ ಕುಟುಂಬ ಸದಸ್ಯರು ಭೂಗತರಾಗಿದ್ದಾರೆ ಮತ್ತು ಅವರ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಕನ್ನೌಜ್ ಶಿಕ್ಷಕರ ಸಂಘದ ಅಧ್ಯಕ್ಷ ಅನುಪ್ ಮಿಶ್ರಾ ಮಾತನಾಡಿ, ಶಿಕ್ಷಕನ ಮೇಲೆ ಆರೋಪ ಸಾಬೀತಾದರೆ ಶಿಕ್ಷಕನ ಮೇಲೆ ಸಂಘವು ಕಠಿಣ ಶಿಕ್ಷೆ ಬಯಸುತ್ತದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement