ಇದು ರಿಯಲ್‌ ‘ಚಾರ್ಲಿ 777’..: ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಡತಿಗಾಗಿ ನರ್ಸಿಂಗ್ ಹೋಂ ವಾರ್ಡ್‌ ಮುಂದೆ ಕಾದು ಕುಳಿತ ನಾಯಿ..!

posted in: ರಾಜ್ಯ | 0

ನಾಯಿಗಳು (Dog) ತಮ್ಮ ಮಾಲೀಕನನ್ನು ಪ್ರೀತಿಸುವಷ್ಟು ಇನ್ಯಾವ ಪ್ರಾಣಿಗಳೂ ಪ್ರೀತಿಸುವುದಿಲ್ಲ ಎಂದರೆ ತಪ್ಪಾಗಲಾರದು. ಅದೇ ರೀತಿ ಇಲ್ಲಿಯೂ ಒಂದು ಅಪರೂಪದ ಘಟನೆ ನಡೆದಿದೆ. ತೀರ್ಥಹಳ್ಳಿಯಲ್ಲಿ ನಾಯಿ ತನ್ನ ಮಾಲಕಿಗಾಗಿ ಆಸ್ಪತ್ರೆ ಬಾಗಿಲಲ್ಲಿ ಕಾದು ಕುಳಿತ ದೃಶ್ಯ ಕಂಡುಬಂದಿದೆ.
ಇತ್ತೀಚೆಗೆ ಬಿಡುಗಡೆಯಾದ ‘ಚಾರ್ಲಿ 777’ ಸಿನಿಮಾದ ದೃಶ್ಯವನ್ನು ನೆನಪಿಸುವಂತೆ ಈ ಘಟನೆಯೂ ನಡೆದಿದೆ. ಆಸ್ಪತ್ರೆಯಲ್ಲಿ ಇರುವ ಇತರರಿಗೆ ಇದು ಅಚ್ಚರಿ ಮೂಡಿಸಿದೆ.
ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನಾಗರತ್ನ ಎಂಬ ವೃದ್ಧೆಯನ್ನು ನೋಡಿಕೊಳ್ಳಲು ತಾನೂ ಆಸ್ಪತ್ರೆಗೆ ಬಂದಿದೆ ಈ ನಾಯಿ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಹಾಗೂ ಸುಧಾ ಜೋಯಿಸ್ ಅವರ ಮನೆ ನಾಯಿ ಎಂದು ಹೇಳಲಾಗಿದೆ. ನಾಗರತ್ನ ಶಾಸ್ತ್ರಿ ಆಸ್ಪತ್ರೆಗೆ ಕರೆತರುತ್ತಿದ್ದಂತೆ ಪಪ್ಪಿ ಹೆಸರಿನ 8 ತಿಂಗಳ ನಾಯಿ ಆಸ್ಪತ್ರೆಗೆ ಹಿಂಬಾಲಿಸಿಕೊಂಡು ಬಂದಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಆಸ್ಪತ್ರೆಯ ಬಾಗಿಲಲ್ಲಿ ಕಾದು ಕುಳಿತ ಫೋಟೊ ವೈರಲ್
ನಾಗರತ್ನ ಶಾಸ್ತ್ರಿ ಅವರ ಮಗಳು ಸುಧಾ ಜೋಯಿಸ್ ಮನೆಯಲ್ಲಿ ನಾಯಿ (dog) ಸಾಕಿದ್ದಾರೆ. 8 ತಿಂಗಳ ನಾಯಿಗೆ ಪಪ್ಪಿ ಎಂದು ಕರೆಯುತ್ತಿದ್ದಾರೆ. ನಾಗರತ್ನ ಶಾಸ್ತ್ರಿಯವರು ಆಸ್ಪತ್ರೆಗೆ ದಾಖಲಾದಾಗಿನಿಂದ ಅದು, ಕಿರಣ್ ಆಸ್ಪತ್ರೆ ಬಾಗಿಲಲ್ಲಿ ಮೊಕ್ಕಾಂ ಹೂಡಿತ್ತು. ಆಸ್ಪತ್ರೆ ಸಿಬ್ಬಂದಿ ಮತ್ತು ಬಂದು ಹೋಗುವ ಸಾರ್ವಜನಿಕರಿಗೆ ಅದು ತೊಂದರೆ ಕೊಟ್ಟಿಲ್ಲ. ಆದರೆ ಹೆಚ್ಚು ಹೊತ್ತು ಆಸ್ಪತ್ರೆ ಬಾಗಿಲಲ್ಲೇ ಕಾದು ಕುಳಿತಿರುತ್ತಿತ್ತು.
ಆಸ್ಪತ್ರೆ ಬಾಗಿಲಲ್ಲಿ ನಿಲ್ಲುತ್ತಿದ್ದ ನಾಯಿ, ನಾಗರತ್ನ ಶಾಸ್ತ್ರಿಯವರನ್ನು ಕರೆದೊಯ್ದು ದಾಖಲು ಮಾಡಿದ್ದ ವಾರ್ಡ್ ಕಡೆಗೆ ದೃಷ್ಟಿ ನೆಟ್ಟಿರುತ್ತಿತ್ತು. ನಾಗರತ್ನ ಶಾಸ್ತ್ರಿಯವರು ಆಸ್ಪ್ರೆಯಿಂದ ಡಿಸ್ಚಾರ್ಜ್ ಆದಾಗ, ಆಂಬುಲೆನ್ಸ್ ಬಳಿ ಕುಣಿದಾಡಿತ್ತು ಅನ್ನುತ್ತಾರೆ ಸಿಬ್ಬಂದಿ.

ಇಂದಿನ ಪ್ರಮುಖ ಸುದ್ದಿ :-   ಬೆಂಗಳೂರಿನಲ್ಲಿ ಚಲಿಸುತ್ತಿರುವ ಕಾರಿನ ಛಾವಣಿ ಮೇಲೆ ನಾಯಿಯ ಸವಾರಿ | ವೀಕ್ಷಿಸಿ

‘ಒಂದೂವರೆ ತಿಂಗಳಿದ್ದಾಗ ಈ ನಾಯಿಯನ್ನು ಮನೆಗೆ ತರಲಾಗಿತ್ತು. ಈಗ ಅದಕ್ಕೆ 8 ತಿಂಗಳು. ನಮ್ಮ ತಾಯಿಗೆ ವಯಸ್ಸಾಗಿದೆ. ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಕಿರಣ್ ಆಸ್ಪತ್ರೆಗೆ ದಾಖಲು ಮಾಡಿದ್ದೆವು. ನಮ್ಮ ಜೊತೆಗೆ ಬಂದು ಆಸ್ಪತ್ರೆ ಮುಂದೆ ನಿಲ್ಲುತ್ತಿತ್ತು. ಅಲ್ಲಿಗೆ ಬರುವ ಎಲ್ಲರಿಗು ಅದು ನಮ್ಮ ಮನೆ ನಾಯಿ ಅನ್ನುವುದು ಗೊತ್ತಾಗಿ ಹೋಗಿದೆ’ ಎಂದು ನಾಗರತ್ನ ಶಾಸ್ತ್ರಿ ಅವರ ಮಗಳು ಸುಧಾ ಜೋಯಿಸ್ ಕೆಲ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಿರಣ್ ಆಸ್ಪತ್ರೆಗೆ ದಾಖಲಾಗಿರುವ ವೃದ್ಧೆ  ಆಸ್ಪತ್ರೆಯಿಂದ ಹೊರಬರುವಾಗಲೂ ಸಹ ಆ ನಾಯಿ ಪಪ್ಪಿ ಬಾಗಿಲ ಬಳಿಯೇ ನಿಂತಿತ್ತು. ಇದನ್ನು ಕಂಡು ಎಲ್ಲರಿಗೂ ಚಾರ್ಲಿ ಚಿತ್ರದ ನೆನಪಾಗಿತ್ತು.
ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗರತ್ನ ಶಾಸ್ತ್ರಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ಕೊನೆಯುಸಿರೆಳೆದಿದ್ದಾರೆ. ಆಗಿನಿಂದಲು ಪುಪ್ಪಿ ಆಹಾರ ಸೇವಿಸದೆ ಸುಮ್ಮನೆ ಕುಳಿತಿದೆಯಂತೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಹಾಡಹಗಲೇ ಚೂರಿಯಿಂದ ಇರಿದು ಸಿಬ್ಬಂದಿ ಕೊಲೆ

4.7 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

advertisement