ಯಾತ್ರಾರ್ಥಿಗಳು ಶಬರಿಮಲೆ ಸನ್ನಿಧಾನಕ್ಕೆ ಸಿನಿಮಾ ತಾರೆಯರು, ರಾಜಕಾರಣಿಗಳ ಪೋಸ್ಟರ್‌ ಒಯ್ಯುವುದನ್ನು ನಿಷೇಧಿಸಿದ ಕೇರಳ ಹೈಕೋರ್ಟ್‌

ತಿರುವನಂತಪುರಂ: ಪೂಜ್ಯ ಶಬರಿಮಲೆ ಸನ್ನಿಧಾನಂ ಪ್ರವೇಶಿಸುವ ಯಾತ್ರಾರ್ಥಿಗಳು ಚಲನಚಿತ್ರ ತಾರೆಯರು, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಪೋಸ್ಟರ್‌ಗಳು ಮತ್ತು ದೊಡ್ಡ ಛಾಯಾಚಿತ್ರಗಳನ್ನು ಹೊಂದಿದ್ದರೆ ಅವರಿಗೆ ಪ್ರವೇಶ ನಿರಾಕರಿಸಲಾಗುವುದು ಎಂದು ಕೇರಳ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ.
ಈ ಕುರಿತು ಯಾತ್ರಾರ್ಥಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌ , ಶಬರಿಮಲೆಯಲ್ಲಿ ಅಯ್ಯಪ್ಪನ ಭಕ್ತರು ದೇವಸ್ಥಾನದಲ್ಲಿ ಅಭ್ಯಾಸ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ “ಒಗ್ಗಿಕೊಂಡ ರೀತಿಯಲ್ಲಿ”. ತಮ್ಮ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಡಲು ಕ್ರಮಕೈಗೊಳ್ಳುವಂತೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಗೆ ಸೂಚಿಸಿದೆ.
ಯಾವುದೇ ಯಾತ್ರಾರ್ಥಿಗಳು ಶಬರಿಮಲೆ ಸನ್ನಿಧಾನಕ್ಕೆ ಪಥಿನೆಟ್ಟಂಪಾಡಿ ಮೂಲಕ ಅಥವಾ ಶಬರಿಮಲೆ ಸನ್ನಿಧಾನಂನ ಸೋಪಾನಂನ ಮುಂದೆ ದರ್ಶನ ಪಡೆಯಲು, ಪೋಸ್ಟರ್‌ಗಳು ಮತ್ತು ಸೆಲೆಬ್ರಿಟಿಗಳು, ರಾಜಕಾರಣಿಗಳು ಇತ್ಯಾದಿಗಳ ಬೃಹತ್ ಛಾಯಾಚಿತ್ರಗಳನ್ನು ಇಟ್ಟುಕೊಳ್ಳಲು ಅನುಮತಿಸಲಾಗುವುದಿಲ್ಲ” ಎಂದು ನ್ಯಾಯಮೂರ್ತಿಗಳಾದ ಅನಿಲ ಕೆ. ನರೇಂದ್ರನ್ ಮತ್ತು ಪಿ.ಜಿ. ಅಜಿತಕುಮಾರ ಅವರ ವಿಭಾಗೀಯ ಪೀಠವು ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಆಕ್ಸ್‌ಫರ್ಡ್ ನಿಘಂಟಿನ ಪ್ರಕಾರ ‘ಆರಾಧಕ’(‘worshipper’) ಎಂದರೆ ದೇವರಿಗೆ ಗೌರವ ಮತ್ತು ಆರಾಧನೆಯನ್ನು ತೋರಿಸುವ ವ್ಯಕ್ತಿ. ಪೂಜಿಸುವ ಹಕ್ಕು ನಾಗರಿಕ ಹಕ್ಕು, ಸಹಜವಾಗಿ ಒಗ್ಗಿಕೊಂಡಿರುವ ರೀತಿಯಲ್ಲಿ ಮತ್ತು ಪ್ರತಿ ದೇವಸ್ಥಾನದಲ್ಲಿ ಅದರ ಆಚರಣೆ ಮತ್ತು ಸಂಪ್ರದಾಯಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ.
ಶಬರಿಮಲೆಯಲ್ಲಿನ ಆಚರಣೆ ಮತ್ತು ಸಂಪ್ರದಾಯಕ್ಕೆ ಒಳಪಟ್ಟು ಒಗ್ಗಿಕೊಂಡಿರುವ ರೀತಿಯಲ್ಲಿ ಪೂಜೆ ಮಾಡುವ ಹಕ್ಕನ್ನು ಚಲಾಯಿಸಲು ‘ಆರಾಧಕ’ ಕರ್ತವ್ಯ ಬದ್ಧನಾಗಿರುತ್ತಾನೆ ಎಂದು ಸಜೀವ್ ಶಾಸ್ತ್ರಾಂ ವರ್ಸಸ್ ಸ್ಟೇಟ್ ಆಫ್ ಕೇರಳ ಮತ್ತು ಇತರರ ಹಿಂದಿನ ಆದೇಶವನ್ನು ನ್ಯಾಯಾಲಯ ಉಲ್ಲೇಖಿಸಿದೆ.
ವಿಚಾರಣೆಯ ಸಂದರ್ಭದಲ್ಲಿ, ಶಬರಿಮಲೆ ಸನ್ನಿಧಾನಂನ ಸೋಪಾನಂ ಮುಂದೆ ಡ್ರಮ್ಮರ್ ಶಿವಮಣಿ ಅವರ ಪ್ರದರ್ಶನದ ಕುರಿತು ಮಾಧ್ಯಮ ವರದಿಯನ್ನು ಪೀಠವು ಪರಿಗಣಿಸಿತು ಮತ್ತು ಎಲ್ಲಾ ಯಾತ್ರಾರ್ಥಿಗಳು ದೇವಸ್ಥಾನದಲ್ಲಿ ಡ್ರಮ್ ಅಥವಾ ಇತರ ರೀತಿಯ ವಾದ್ಯಗಳನ್ನು ನುಡಿಸುವುದನ್ನು ನಿರ್ಬಂಧಿಸಿತು.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement