ಹುಬ್ಬಳ್ಳಿ: ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸುತ್ತಿದ್ದ ವೇಳೆ ಭದ್ರತಾ ಲೋಪ ಕಂಡು ಬಂದಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಇಂದಿನಿಂದ ಆರಂಭವಾಗಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ. ಒಂದು ತಾಸು ಪ್ರಧಾನಿ ಮೋದಿ ನಡೆಸಿದ ರೋಡ್ ಶೋ ನೋಡಲು ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲೂ ಕಾಯುತ್ತಾ ನಿಂತಿದ್ದರು.
ಈ ವೇಳೆ ಭದ್ರತಾಲೋಪ ಕಂಡು ಬಂದಿದೆ. ಬಿಗಿ ಭದ್ರತೆಯನ್ನೂ ಮೀರಿ ಬ್ಯಾರಿಕೇಡ್ ದಾಟಿ ಬಾಲಕನೊಬ್ಬ ಹಾರಹಾಕಲು ಪ್ರಧಾನಿ ಕಾರಿನತ್ತ ನುಗ್ಗಿ ಬಂದ ಘಟನೆ ಗುರುವಾರ ಮಧ್ಯಾಹ್ನ ನಡೆಯಿತು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಪ್ರಧಾನಿಗಳು ರೋಡ್ ಶೋ ನಡೆಸುತ್ತಿದ್ದ ವೇಳೆ ಖುದ್ದು ಮೋದಿ ಅವರ ಕೈಗೆ ಹೂವಿನ ಹಾರ ಕೊಡಲು ಬಾಲಕ ಮೋದಿ ಅವರ ಕಾರಿನತ್ತ ನುಗ್ಗಿದ್ದಾನೆ. ತಕ್ಷಣ ಬಾಲಕನನ್ನ ವಶಕ್ಕೆ ಪಡೆದ ಪ್ರಧಾನಿ ಭದ್ರತಾ ಸಿಬ್ಬಂದಿ ಆತನ ಕೈಯಿಂದ ಹಾರ ತೆಗೆದುಕೊಂಡರು. ಆದರೆ ಮೋದಿ ಅವರ ಬಾಲಕ ತಂದಿದ್ದ ಹಾರವನ್ನು ಭದ್ರತಾ ಸಿಬ್ಬಂದಿಯಿಂದ ಪಡೆದುಕೊಂಡರು.ಹಾಗೂ ಅದನ್ನು ತಮ್ಮ ಕಾರಿಗೆ ಹಾಕಿದರು.
ಮೋದಿಗೆ ಹಾರ ಹಾಕಲು ಕಂಬಿಗಳ ಮಧ್ಯೆಯಿಂದ ಈತ ನುಸುಳಿ ಬಂದಿದ್ದ. ಕಂಬಿಗಳ ನಡುವೆಯಿಂದ ಓಡುತ್ತಾ ಬಂದಿದ್ದ ಆತನನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಹುಬ್ಬಳ್ಳಿಯ ಗೋಕುಲ ರಸ್ತೆ ಬಳಿ ಭದ್ರತಾ ಲೋಪ ನಡೆದಿದೆ.
ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಮೋದಿ ಅವರಿಗೆ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ