ಪತನಗೊಳ್ಳುವ ಮುನ್ನ ಆಗಸದಲ್ಲಿ ನಿಯಂತ್ರಣ ಕಳೆದುಕೊಂಡ ನೇಪಾಳ ವಿಮಾನ : ದೃಶ್ಯ ಕ್ಯಾಮರಾದಲ್ಲಿ ಸೆರೆ

ಭಾನುವಾರ ನೇಪಾಳದ ಪೋಖರಾ ವಿಮಾನ ನಿಲ್ದಾಣದ ಬಳಿ ಪತನಗೊಳ್ಳುವ ಮುನ್ನ ನೇಪಾಳಿ ವಿಮಾನವು ಆಗಸದಲ್ಲಿ ನಿಯಂತ್ರಣ ಕಳೆದುಕೊಂಡಿರುವ ದೃಶ್ಯಗಳು ಹೊರಬಿದ್ದಿವೆ.
ನೆರೆಹೊರೆಯಲ್ಲಿರುವ ಕಟ್ಟಡದ ಟೆರೇಸ್‌ನಿಂದ ಚಿತ್ರೀಕರಿಸಲಾದ ವೀಡಿಯೊವು ಎಟಿಆರ್ -72 ಎಂಬ ಪ್ರಯಾಣಿಕ ವಿಮಾನವು 72 ಜನರನ್ನು ಹೊತ್ತೊಯ್ಯುತ್ತಿರುವುದನ್ನು ಹಾಗೂ ಅದು ಅಪಘಾತಕ್ಕೀಡಾಗುವ ಮೊದಲು ನಿಯಂತ್ರಣ ಕಳೆದುಕೊಂಡಿದ್ದನ್ನು ತೋರಿಸುತ್ತದೆ.
ವಿಮಾನವು ಕಠ್ಮಂಡುವಿನಿಂದ ಪೋಖರಾಗೆ ತೆರಳುತ್ತಿತ್ತು. ವಿಮಾನವು ಹಳೆಯ ದೇಶೀಯ ವಿಮಾನ ನಿಲ್ದಾಣ ಮತ್ತು ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಹರಿಯುವ ಸೇಟಿ ಗಂಡಕಿ ನದಿಯ ದಡದಲ್ಲಿರುವ ಅರಣ್ಯ ಭೂಮಿಗೆ ಅಪ್ಪಳಿಸಿತು.
ಒಟ್ಟು 53 ನೇಪಾಳಿಗಳು, ಐವರು ಭಾರತೀಯರು, ನಾಲ್ವರು ರಷ್ಯನ್ನರು, ಒಬ್ಬ ಐರಿಶ್, ಇಬ್ಬರು ಕೊರಿಯನ್ನರು, ಒಬ್ಬ ಅರ್ಜೆಂಟೀನಾದ ಮತ್ತು ಒಬ್ಬ ಫ್ರೆಂಚ್ ಪ್ರಜೆ ವಿಮಾನದಲ್ಲಿದ್ದರು.

ವಿಮಾನ ಪತನವಾಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ರಕ್ಷಣಾ ಕಾರ್ಯಕರ್ತರು ಅದನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಈವರೆಗೆ ೪೦ ಮೃತದೇಹಗಳು ಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ. ಪೋಖರಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ವಿಮಾನ ಪತನವಾದ ನಂತರ ಸರ್ಕಾರವು ಸಚಿವ ಸಂಪುಟದ ತುರ್ತು ಸಭೆಯನ್ನು ಕರೆದಿದೆ.

ಪ್ರಮುಖ ಸುದ್ದಿ :-   ಅನ್ಯಗ್ರಹದ ಲೋಹಗಳಿಂದ ತಯಾರಿಸಲಾದ 3000 ವರ್ಷಗಳಷ್ಟು ಪುರಾತನ ಚಿನ್ನದ ಕಲಾಕೃತಿಗಳು ಪತ್ತೆ...!

ಬದುಕುಳಿದವರು ಇದ್ದಾರೆಯೇ ಎಂಬುದು ನಮಗೆ ಈಗ ತಿಳಿದಿಲ್ಲ ಎಂದು ಏರ್‌ಲೈನ್‌ನ ವಕ್ತಾರ ಸುದರ್ಶನ್ ಬರ್ತೌಲಾ ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದರು.ಹಳೆಯ ವಿಮಾನ ನಿಲ್ದಾಣ ಮತ್ತು ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಪತನಗೊಂಡ ಯೇತಿ ಏರ್‌ಲೈನ್ಸ್ ವಿಮಾನದಲ್ಲಿ 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎಂದು ಹೇಳಲಾಗಿದೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement