ಕಾಬೂಲ್ ಮನೆಯಲ್ಲಿ ಅಫ್ಘಾನಿಸ್ತಾನದ ಮಾಜಿ ಮಹಿಳಾ ಸಂಸದೆಯ ಗುಂಡಿಕ್ಕಿ ಹತ್ಯೆ

ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಲ್ ನಬಿಜಾದಾ ಮತ್ತು ಅವರ ಅಂಗರಕ್ಷಕನನ್ನು ಅಫಘಾನ್ ರಾಜಧಾನಿ ಕಾಬೂಲ್‌ನಲ್ಲಿರುವ ಅವರ ಮನೆಯಲ್ಲಿ ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದಾರೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಕಾಬೂಲ್‌ನಲ್ಲಿ ಉಳಿಯಲು ನಿರ್ಧರಿಸಿದ ಕೆಲವೇ ಮಹಿಳಾ ಸಂಸದರಲ್ಲಿ ಮುರ್ಸಲ್ ನಬಿಜಾದಾ ಒಬ್ಬರಾಗಿದ್ದರು.
ಸ್ಥಳೀಯ ಪೊಲೀಸ್ ಮುಖ್ಯಸ್ಥ ಮೊಲ್ವಿ ಹಮೀದುಲ್ಲಾ ಖಾಲಿದ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಗುಂಡಿನ ದಾಳಿಯಲ್ಲಿ ಮಾಜಿ ಸಂಸದೆ ಮುರ್ಸಲ್ ನಬಿಜಾದಾ ಅವರ ಸಹೋದರ ಮತ್ತು ಎರಡನೇ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಮೂರನೇ ಸಿಬ್ಬಂದಿ ಹಣ ಮತ್ತು ಆಭರಣದೊಂದಿಗೆ ಪರಾರಿಯಾಗಿದ್ದಾನೆ.
ತಾಲಿಬಾನ್‌ ಅಧಿಕಾರ ವಹಿಸಿಕೊಂಡ ನಂತರ ಕಾಬೂಲ್‌ ನಗರದಲ್ಲಿ ಹಿಂದಿನ ಆಡಳಿತದ ಜನಪ್ರತಿನಿಧಿಯೊಬ್ಬರು ಹತ್ಯೆಯಾದ ಮೊದಲ ಘಟನೆ ಇದಾಗಿದೆ. ನಬಿಜಾದಾ ಮತ್ತು ಅವರ ಸಿಬ್ಬಂದಿಯನ್ನು ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮನೆಯ ಮೊದಲ ಮಹಡಿಯಲ್ಲಿರುವ ಕೋಣೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
2019 ರಲ್ಲಿ ಕಾಬೂಲ್‌ನಿಂದ ಚುನಾಯಿತರಾದ ಮತ್ತು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುವವರೆಗೆ ಸಂಸದರಾಗಿ ಉಳಿದುಕೊಂಡಿದ್ದ ನಬಿಜಾದಾ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ – ಇನ್‌ಸ್ಟಿಟ್ಯೂಟ್‌ನಲ್ಲಿ ಸಹ ಕೆಲಸ ಮಾಡಿದರು.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement