ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಸಿಸ್ಟರ್ ಆಂಡ್ರೆ ನಿಧನ

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ, ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್, ಮಂಗಳವಾರ ಫ್ರಾನ್ಸ್‌ನ ಟೌಲನ್ ನಗರದಲ್ಲಿ ತಮ್ಮ 118 ನೇ ವಯಸ್ಸಿನಲ್ಲಿ ನಿಧನರಾದರು.
ರಾಂಡನ್ ಅವರ ವಕ್ತಾರ ಡೇವಿಡ್ ತವೆಲ್ಲಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಲುಸಿಲ್ ರಾಂಡನ್ ಅವರು ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ನಿಧನರಾದರು. “ಅತ್ಯಂತ ದುಃಖವಿದೆ, ಆದರೆ ಅದು ಸಂಭವಿಸಬೇಕೆಂದು ಲುಸಿಲ್ ರಾಂಡನ್ ಬಯಸಿದ್ದರು, ಅವರಿಗೆ ತನ್ನ ಪ್ರೀತಿಯ ಸಹೋದರನನ್ನು ಸೇರುವ ಬಯಕೆಯಾಗಿತ್ತು. ಅವರಿಗೆ ಅದು ಸ್ವಾತಂತ್ರ್ಯ” ಎಂದು ತಾವೆಲ್ಲಾ ಹೇಳಿದ್ದಾರೆ.
ಕಳೆದ ವರ್ಷ 119 ವರ್ಷ ವಯಸ್ಸಿನ ಜಪಾನ್‌ನ ಕೇನ್ ತನಕಾ ಅವರ ಮರಣದ ಮೊದಲು ಲುಸಿಲ್ ರಾಂಡನ್ ಅತ್ಯಂತ ಹಿರಿಯ ಯುರೋಪಿಯನ್ ಎಂದು ಗುರುತಿಸಲ್ಪಟ್ಟಿದ್ದರು, ಕೇನ್ ತನಕಾ ಅವರ ಮರಣದ ನಂತರ ಅವರು ಭೂಮಿಯ ಮೇಲೆ ಹೆಚ್ಚು ಕಾಲ ಬದುಕಿದ ವ್ಯಕ್ತಿಯಾಗಿದ್ದರು.
ಸಿಸ್ಟರ್ ಆಂಡ್ರೆ ಎಂದೂ ಕರೆಯಲ್ಪಡುವ ಲುಸಿಲ್ ರಾಂಡನ್ 1904 ರಲ್ಲಿ ಫ್ರೆಂಚ್ ಪಟ್ಟಣವಾದ ಅಲೆಸ್‌ನಲ್ಲಿ ಜನಿಸಿದರು. ಅವರು 1918 ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್ ಜ್ವರದ ಸಾಂಕ್ರಾಮಿಕ ಮತ್ತು ಎರಡು ವಿಶ್ವ ಯುದ್ಧಗಳ ಸಮಯವನ್ನು ನೋಡಿದವರು.
ಲುಸಿಲ್ ರಾಂಡನ್ ಎಂಟು ವರ್ಷಗಳ ನಂತರ ಸನ್ಯಾಸಿಯಾಗಿ ಸಿಸ್ಟರ್‌ ಆಂಡ್ರೆ ಆದರು. ಅವರು ಶಿಕ್ಷಕಿ ಮತ್ತು ಆಡಳಿತಗಾರರಾಗಿ ಕೆಲಸ ಮಾಡಿದರು ಮತ್ತು ಎರಡನೆಯ ಮಹಾಯುದ್ಧದ ಹೆಚ್ಚಿನ ಸಮಯದಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.
ಯುದ್ಧವು ಕೊನೆಗೊಂಡ ನಂತರ, ಅವರು ಆಸ್ಪತ್ರೆಯಲ್ಲಿ ಕೆಲಸ ಮಾಡಲು ವಿಚಿಗೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು 28 ವರ್ಷಗಳ ಕಾಲ ಅನಾಥರು ಮತ್ತು ವೃದ್ಧರ ಸೇವೆ ಮಾಡಿದರು. 2021 ರಲ್ಲಿ, ಅವರು ವಾಸಿಸುತ್ತಿದ್ದ ನರ್ಸಿಂಗ್ ಹೋಮ್ ಮೂಲಕ ವೈರಲ್ ಸೋಂಕು ಹರಡಿದ ನಂತರ ಅವರು ಕೋವಿಡ್ -19 ಸಾಂಕ್ರಾಮಿಕದಿಂದ ಬದುಕುಳಿದರು, ಇತರ 10 ನಿವಾಸಿಗಳು ಕೋವಿಡ್‌ನಿಂದ ಮೃತಪಟ್ಟರು.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement