ನಾವು ವೋಟ್​ ಬ್ಯಾಂಕ್ ರಾಜಕಾರಣ ಮಾಡಲ್ಲ, ಮನೆಮನೆಗೆ ನೀರು ಕೊಡ್ತೇವೆ, ಅಭಿವೃದ್ಧಿ ರಾಜಕಾರಣ ಮಾಡ್ತೇವೆ : ಪ್ರಧಾನಿ ಮೋದಿ

ಯಾದಗಿರಿ: ನಾವು ವೋಟ್​ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ನಾವು ಅಭಿವೃದ್ಧಿ ರಾಜಕಾರಣ ಮಾಡುತ್ತೇವೆ. ಯಾದರಿಗಿ ಸೇರಿದಂತೆ ದೇಶದ ಇಂಥ ಅನೇಕ ಜಿಲ್ಲೆಗಳಲ್ಲಿ ಆಕಾಂಕ್ಷಿ ಜಿಲ್ಲೆ ಎನ್ನುವ ಹೊಸ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗುರುವಾರ ಜಲಜೀವನ್ ಮಿಷನ್ ಯೋಜನೆಯಡಿ ಯಾದಗಿರಿ ಜಿಲ್ಲೆಯ 710 ಗ್ರಾಮೀಣ ವಸತಿ ಪ್ರದೇಶಗಳಿಗೆ ಕುಡಿಯುವ ನೀರಿನ ಸೌಕರ್ಯ ನೀಡುವ ಬೃಹತ್ ಯೋಜನೆಯೆಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. 2,004 ಕೋಟಿ ರೂ. ಅನುದಾನದಲ್ಲಿ ಜಾರಿಗೊಳ್ಳಲಿರುವ ಈ ಯೋಜನೆಯಲ್ಲಿ 117 ಅಡಿ ಸಾಮರ್ಥ್ಯದ ಜಲಶುದ್ಧೀಕರಣ ಘಟಕ, ನಾರಾಯಣಪುರ ಅಣೆಕಟ್ಟಿನಿಂದ ಜನರಿಗೆ ಶುದ್ಧೀಕರಿಸಿದ ನೀರು ಹಾಗೂ ಕೆಕ್ಕೇರಾ- ಕೆಂಭಾವಿ- ಹುಣಸಗಿ ಪ್ರದೇಶದ ಜನರಿಗೆ ನೀರಿನ ಸೌಕರ್ಯಗಳು ಸಿಗಲಿವೆ.
ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಿ ಮಾತನಾಡಿದ ಅವರು, ಸಂಪರ್ಕದಲ್ಲಿ ಯಾದಗಿರಿ ಇಂದು ಟಾಪ್-10 ಆಕಾಂಕ್ಷಿ ಜಿಲ್ಲೆಗಳಲ್ಲಿ ಸ್ಥಾನ ಪಡೆದಿದೆ. ಈ ಸಾಧನೆಗಾಗಿ ಯಾದಗಿರಿಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಶ್ಲಾಘಿಸುತ್ತೇನೆ ಎಂದು ಅವರು ಹೇಳಿದರು.
ಈ ಕ್ಷೇತ್ರವು ಅಭಿವೃದ್ಧಿ ಯಾತ್ರೆಯಲ್ಲಿ ಬಹಳ ಹಿಂದೆ ಬಿದ್ದಿತ್ತು. ಹಿಂದೆ ಇದ್ದ ಸರ್ಕಾರಗಳು ಯಾದಗಿರಿಯಂಥ ಹಲವು ಜಿಲ್ಲೆಗಳನ್ನು ಹಿಂದುಳಿದಿವೆ ಎಂದು ಘೋಷಿಸಿದ್ದು ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ. ಆದರೆ ನಾವು ಹಾಗೆ ಮಾಡಿಲ್ಲ. ಈ ಜಿಲ್ಲೆಗಳು ಹಿಂದುಳಿದಿರುವ ಕಾರಣಗಳನ್ನು ಹುಡುಕಿ, ಅದರ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಆದರೆ ಹಿಂದಿದ್ದವರಿಗೆ ಇವುಗಳನ್ನು ಹುಡುಕಲು ಸಮಯವೇ ಸಿಗಲಿಲ್ಲ. ರಸ್ತೆ, ವಿದ್ಯುತ್, ನೀರಿನಂಥ ಮೂಲ ಸೌಕರ್ಯ ಒದಗಿಸಲೂ ಹಿಂದಿನ ಸರ್ಕಾರಗಳು ವಿಫಲವಾದವು. ಕುಡಿಯುವ ನೀರಿಗೆ ತತ್ವಾರವಿದ್ದಾಗ ಹಿಂದಿನ ಸರ್ಕಾರಗಳು ಸುಮ್ಮನೆ ಕುಳಿತವು. ಆದರೆ, ನಾವು ಇಲ್ಲಿ ಮನೆಮನೆಗಳಿಗೆ ನೀರು ಕೊಡುವ ಕೆಲಸಕ್ಕೆ ಕೈ ಹಾಕಿದ್ದೇವೆ. ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಿಂದಾಗಿ ಸದ್ಯದಲ್ಲೇ ಯಾದಗಿರಿ, ರಾಯಚೂರಿನಲ್ಲಿ ಮನೆಮನೆಗೆ ನೀರು ಸಿಗುತ್ತದೆ. ನೀರು ಬಂದರೆ, ಇಲ್ಲಿನ ಪ್ರತಿಮನೆಮನೆಗಳ ಮಹಿಳೆಯರು ನನಗೆ ಆಶೀರ್ವಾದ ಮಾಡುತ್ತಾರೆ. ಅಲ್ಲದೆ, ಮೂಲಸೌಕರ್ಯ ವೃದ್ಧಿಗೂ ಡಬಲ್ ಇಂಜಿನ್ ಸರ್ಕಾರ ಬದ್ಧವಾಗಿದ್ದು ಇಲ್ಲಿನ ಜನರ ಸಂಪೂರ್ಣ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದ ಅವರು ಹಿಂದಿನ ಸರ್ಕಾರಗಳು ಕೇವಲ ಮತಬ್ಯಾಂಕ್ ರಾಜಕಾರಣಕ್ಕೇ ಒತ್ತು ಕೊಟ್ಟರು. ಜಾತಿ, ಮತಗಳನ್ನು ಮುಂದಿಟ್ಟು ರಾಜಕಾರಣ ಮಾಡಿದರು ಎಂದು ವಾಗ್ದಾಳಿ ನಡೆಸಿದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ವಿಶ್ವದ ಟಾಪ್‌- 20 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಗೌತಮ್ ಅದಾನಿ

ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಡಬಲ್ ಇಂಜಿನ್ ಸರ್ಕಾರಗಳು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಬದ್ಧತೆ ತೋರಿವೆ. ಪ್ರತಿ ವರ್ಷ ತೊಗರಿ ಬೇಳೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸುತ್ತವೆ. ಉತ್ತರ ಕರ್ನಾಟಕವು ತೊಗರಿಯ ಕಣಜ. 2014ಕ್ಕಿಂತ ಮುಂಚೆ ತೊಗರಿಗೆ ಕೆಲವು ಕೋಟಿಗಳಷ್ಟೇ ನೀಡಲಾಗುತ್ತಿತ್ತು. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ 7,000 ಕೋಟಿ ರೂ. ಸಹಾಯ ಧನ ನೀಡಿದ್ದೇವೆ ಅಲ್ಲದೆ, ಈ ಭಾಗದ ರೈತರ ಅಭಿವೃದ್ಧಿಗೆ ಕೇಂದ್ರದ ಹಲವಾರು ಯೋಜನೆಗಳು ಉಪಯೋಗಕ್ಕೆ ಬರಲಿವೆ. ಬಯೋಫ್ಯೂಯೆಲ್, ಇಥನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ. ಇದರಿಂದಲೂ ರೈತರಿಗೆ ಆರ್ಥಿಕವಾಗಿಯೂ ಲಾಭ ಸಿಗಲಿದೆ ಎಂದು ಹೇಳಿದರು.
ಈ ವರ್ಷವನ್ನು ವಿಶ್ವಸಂಸ್ಥೆಯ ಸಿರಿಧಾನ್ಯಗಳ ವರ್ಷವಾಗಿ ಘೋಷಿಸಿದೆ. ಸ್ಥಳೀಯ ಮಟ್ಟದಲ್ಲಿ ಬೆಳೆಯುವ ಸಿರಿಧಾನ್ಯಗಳನ್ನು ವಿಶ್ವ ಮಾರುಕಟ್ಟೆಗೆ ಪರಿಚಯಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಹಾಗಾಗಿ, ಈ ಭಾಗದಲ್ಲಿ ಬೆಳೆಯುವ ಸಜ್ಜೆ, ನವಣೆ ಮುಂತಾದ ಸಿರಿಧಾನ್ಯಗಳನ್ನು ನಾವು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತೇವೆ. ಅದರಿಂದ ಇಲ್ಲಿನ ಸಣ್ಣ ಪ್ರಮಾಣದ ರೈತರಿಗೆ ಸಹಾಯವಾಗುತ್ತದೆ ಎಂದರು.

ಇಂದಿನ ಪ್ರಮುಖ ಸುದ್ದಿ :-   ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ ಇನ್ನಿಲ್ಲ

ಉತ್ತರ ಕರ್ನಾಟಕದಲ್ಲಿ ಹೂಡಿಕೆ ಹೆಚ್ಚಳ…
ಈಗ ಸಂಪರ್ಕ ಮುಖ್ಯ. ನಮ್ಮ ಡಬಲ್ ಇಂಜಿನ್ ಸರ್ಕಾರರಗಳಿಂದ ಕರ್ನಾಟಕಕ್ಕೂ ಲಾಭವಾಗಿದೆ. ಸೂರತ್ ಹಾಗೂ ಚೆನ್ನೈ ಸೂಪರ್ ಫಾಸ್ಟ್ ಹೆದ್ದಾರಿಯಿಂದ ಉತ್ತರ ಕರ್ನಾಟಕಕ್ಕೆ ಲಾಭವಗಾಲಿದೆ. ಹೊಸ ಉದ್ಯೋಗಗಳನ್ನು ಸೃಷ್ಟಿಸಲು ನಾಂದಿ ಹಾಡಲಿದೆ. ಉತ್ತರ ಕರ್ನನಾಟಕದ ಪುಣ್ಯ ಕ್ಷೇತ್ರಗಳಿಗೆ ಬರಲು ದೇಶದ ಪ್ರವಾಸಿಗರಿಗೆ ಅನುಕೂಲ. ಯುವಕರಿಗೆ ಹೊಸ ಉದ್ಯೋಗ ಸಿಗಲಿವೆ. ಮೂಲಸೌಕರ್ಯಗಳ ಮೇಲೆ ಒತ್ತು ಕೊಟ್ಟಿರುವುದುರಿಂದ ಕರ್ನಾಟಕಲ್ಲಿ ಈ ಸೌಲಭ್ಯ ಮತ್ತಷ್ಟು ಹೆಚ್ಚಾಗಲಿದೆ. ಇದರ ಲಾಭ ಉತ್ತರ ಕರ್ನಾಟಕಕ್ಕೂ ಸಿಗಲಿದೆ ಎಂದರು.
ದೇಶದ ಎರಡು ದೊಡ್ಡ ಬಂದರು ನಗರಿಗಳ ಸಂಪರ್ಕ ಮುಂದಿನ ದಿನಗಳಲ್ಲಿ ಸುಧಾರಿಸಲಿದೆ. ಇದರಿಂದ ಉದ್ಯೋಗಾವಕಾಶ ಹೆಚ್ಚಾಗಲಿದೆ. ಪ್ರವಾಸೋದ್ಯಮಕ್ಕೆ ಹೊಸ ಒತ್ತು ಸಿಗಲಿದೆ. ಮೂಲಸೌಕರ್ಯದ ವಿಚಾರದಲ್ಲಿ ಡಬಲ್ ಎಂಜಿನ್ ಸರ್ಕಾರದ ಪರಿಶ್ರಮದಿಂದಾಗಿ ಕರ್ನಾಟಕಕ್ಕೆ ಹೂಡಿಕೆಗಳು ಹರಿದು ಬರುತ್ತಿವೆ. ಉತ್ತರ ಕರ್ನಾಟಕಕ್ಕೂ ಇದರ ಲಾಭ ಸಿಕ್ಕೇ ಸಿಗುತ್ತದೆ. ಇನ್ನೊಮ್ಮೆ ಇದೇ ರೀತಿ ನಮಗೆ ಆಶೀರ್ವದಿಸಿ ಎಂದು ಕೋರುತ್ತೇನೆ ಎಂದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement