40 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ 88 ವರ್ಷದ ವೃದ್ಧ 5 ಕೋಟಿ ರೂಪಾಯಿ ಲಾಟರಿ ಬಹುಮಾನ ಗೆದ್ದ

ಪಂಜಾಬ್‌ನ ದೇರಾಬಸ್ಸಿಯಲ್ಲಿ 88 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ರಾತ್ರೋರಾತ್ರಿ ಅದೃಷ್ಟ ಖುಲಾಯಿಸಿದೆ, ಅವರು ಬುಧವಾರ 5 ಕೋಟಿ ರೂ. ಲಾಟರಿ ಬಂಪರ್‌ ಬಹುಮಾನ ಗೆದ್ದಿದ್ದಾರೆ. ಸಾಧಾರಣ ಹಿನ್ನೆಲೆಯಿಂದ ಬಂದ ಅವರು ದೇರಾಬಸ್ಸಿ ಪ್ರದೇಶದಲ್ಲಿ ಮಹಂತ್ ದ್ವಾರಕಾ ದಾಸ್ ಎಂದು ಜನಪ್ರಿಯರಾಗಿದ್ದಾರೆ, ಅವರು ಪಂಜಾಬ್‌ ಲೋಹ್ರಿ ಮಕರ ಸಕ್ರಾಂತಿ ಬಂಪರ್ ಲಾಟರಿ ಗೆದ್ದಿದ್ದಾರೆ.
ಮಹಂತ್ ದ್ವಾರಕಾ ದಾಸ್ ಅವರು 1947 ರಲ್ಲಿ ತಮ್ಮ 13 ನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರು. ಅವರು ಆಗಾಗ್ಗೆ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು.
ಅಲ್ಲಿನ ಸ್ಥಳೀಯ ಡೇರಾವನ್ನು ನೋಡಿಕೊಳ್ಳುವ ದ್ವಾರಕಾ ಅವರು ಡೇರಾಗೆ ಅರ್ಧ ಹಣವನ್ನು ದಾನ ಮಾಡುವುದಾಗಿ ಹೇಳಿದ್ದಾರೆ ಮತ್ತು ಉಳಿದ ಹಣವನ್ನು ಅವರ ಇಬ್ಬರು ಪುತ್ರರಿಗೂ ಸಮಾನವಾಗಿ ಹಂಚುವುದಾಗಿ ಹೇಳಿದ್ದಾರೆ.

“ನಾನು ಸಂತೋಷವಾಗಿದ್ದೇನೆ. ನಾನು ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದೇನೆ. ಗೆದ್ದ ಮೊತ್ತವನ್ನು ನನ್ನ ಇಬ್ಬರು ಪುತ್ರರಿಗೆ ಮತ್ತು ನನ್ನ ‘ಡೇರಾ’ಗೆ ಹಂಚುತ್ತೇನೆ ಎಂದು ಮಹಂತ್ ದ್ವಾರಕಾ ದಾಸ್ ಹೇಳಿದ್ದಾರೆ.
ಮಹಂತ್ ಅವರ ಪುತ್ರರಲ್ಲಿ ಒಬ್ಬರಾದ ನರೇಂದ್ರ ಕುಮಾರ್ ಶರ್ಮಾ ಅವರು, “ನನ್ನ ತಂದೆ ನನ್ನ ಸೋದರಳಿಯನಿಗೆ ಲಾಟರಿ ಟಿಕೆಟ್ ಖರೀದಿಸಲು ಹಣ ನೀಡಿದ್ದರು. ಈಗ ಅವರು ಲಾಟರಿ ಬಹುಮಾನ ಗೆದ್ದಿದ್ದಾರೆ. ನಮಗೆ ಸಂತೋಷವಾಗಿದೆ” ಎಂದು ಹೇಳಿದರು.
30% ತೆರಿಗೆ ಮತ್ತು ನಿಗದಿತ ಕಾರ್ಯವಿಧಾನವನ್ನು ಪೂರ್ಣಗೊಳಿಸಿದ ನಂತರ, ವಿಜೇತರು ಮೊತ್ತವನ್ನು ಸ್ವೀಕರಿಸುತ್ತಾರೆ ಎಂದು ಸಹಾಯಕ ಲಾಟರಿ ನಿರ್ದೇಶಕ ಕರಮ್ ಸಿಂಗ್ ಹೇಳಿದ್ದಾರೆ.
“ಪಂಜಾಬ್ ರಾಜ್ಯ ಲೋಹ್ರಿ ಮಕರ ಸಂಕ್ರಾಂತಿ ಬಂಪರ್ ಲಾಟರಿ 2023 ಫಲಿತಾಂಶಗಳನ್ನು ಜನವರಿ 16 ರಂದು ಪ್ರಕಟಿಸಲಾಯಿತು. ಅವರು (ದ್ವಾರಕಾ ದಾಸ್) 5 ಕೋಟಿ ರೂ.ಗಳ ಪ್ರಥಮ ಬಹುಮಾನ ಗೆದ್ದರು. ನಿಗದಿತ ಕಾರ್ಯವಿಧಾನವನ್ನು ಪೂರ್ಣಗೊಳಿಸಿದ ನಂತರ, 30% ತೆರಿಗೆಯನ್ನು ಕಡಿತಗೊಳಿಸಿದ ನಂತರ ಮೊತ್ತವನ್ನು ಅವರಿಗೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ತೆರಿಗೆ ದಾಳಿಯಲ್ಲಿ ದಾಖಲೆ ಪ್ರಮಾಣದ ನಗದು ಹಣ ವಶ : ತನ್ನ ಪಕ್ಷದ ಸಂಸದರಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement