ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಬಳಿ ಸಮುದ್ರದಲ್ಲಿ ಮುಳಗುತ್ತಿದ್ದ ಪರ್ಸಿನ್ ಬೋಟ್‌ನಿಂದ 17 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಕುಮಟಾ ತಾಲುಕಿನ ಕಡ್ಲೆ ಬಳಿ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಶ್ರೀದೇವಿ ಅನುಗ್ರಹ ಹೆಸರಿನ ಬೋಟ್ ಬಂಡೆಗೆ ಬಡಿದು ಮುಳುಗಡೆಯಾಗಿದೆ. ಕರಾವಳಿ ಕಾವಲು ಪಡೆಯವರು ಹಾಗೂ ಅಕ್ಕಪಕ್ಕದ ಬೋಟ್‌ನಲ್ಲಿದ್ದವರು ಸೇರಿ ಎಲ್ಲ 17 ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.
ಮೀನು ಹಿಡಿದುಕೊಂಡು ವಾಪಾಸ್ಸಾಗುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಕರಾವಳಿ ಕಾವಲು ಪಡೆಯವರು ಆಗಮಿಸಿದ್ದು,17 ಮೀನುಗಾರರನ್ನ ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ. ಸುಧಾಕರ ಖಾರ್ವಿ ಎಂಬವರಿಗೆ ಸೇರಿದ್ದು ಎನ್ನಲಾದ ಶ್ರೀದೇವಿ ಅನುಗ್ರಹ ಹೆಸರಿನ ಪರ್ಸಿನ್ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ.
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ