ತಮ್ಮ 93ನೇ ಜನ್ಮದಿನದಂದು 4ನೇ ಬಾರಿಗೆ ವಿವಾಹವಾದ ಚಂದ್ರನ ಮೇಲೆ ಕಾಲಿಟ್ಟ ಎರಡನೇ ವ್ಯಕ್ತಿ ಎಂದು ಖ್ಯಾತಿ ಪಡೆದ ಬಜ್ ಆಲ್ಡ್ರಿನ್…!

ಅಮೆರಿಕದ ಮಾಜಿ ಗಗನಯಾತ್ರಿ ಬಜ್ ಆಲ್ಡ್ರಿನ್ ತಮ್ಮ 93ನೇ ಜನ್ಮದಿನದಂದು ನಾಲ್ಕನೇ ಬಾರಿಗೆ ವಿವಾಹವಾದರು.
ಆಲ್ಡ್ರಿನ್ ಅವರು 1969 ರಲ್ಲಿ ಚಂದ್ರನ ಮೇಲೆ ಇಳಿದ ಐತಿಹಾಸಿಕ ಅಪೊಲೊ-11 ಬಾಹ್ಯಾಕಾಶ ನೌಕೆಯ ಪೈಲಟ್‌ಗಳಲ್ಲಿ ಒಬ್ಬರಾಗಿದ್ದರು, ಮಿಷನ್‌ನ ಕಮಾಂಡರ್ ನೀಲ್ ಆರ್ಮ್‌ಸ್ಟ್ರಾಂಗ್ ನಂತರ ಚಂದ್ರನ ಮೇಲೆ ನಡೆದ ವ್ಯಕ್ತಿಗಳಾಗಿ ಖ್ಯಾತಿ ಪಡೆದಿದ್ದಾರೆ. ಅಲ್ಲದೆ, ಚಂದ್ರನ ಮೇಲೆ ಕಾಲಿಟ್ಟಿರುವ ಜೀವಂತವಾಗಿರುವ ನಾಲ್ವರಲ್ಲಿ ಇವರು ಒಬ್ಬರು.
ಮಾಜಿ ಪೈಲಟ್ ಬಜ್ ಆಲ್ಡ್ರಿನ್ ಅವರು ಅಂಕಾ ಫೌರ್ ಅವರನ್ನು ಮದುವೆಯಾಗಿದ್ದಾರೆ. ಲಾಸ್ ಏಂಜಲೀಸ್ ಸಮಾರಂಭದ ಚಿತ್ರಗಳನ್ನು ಆಲ್ಡ್ರಿನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ನನ್ನ 93ನೇ ಜನ್ಮದಿನದಂದು ಮತ್ತು ಲಿವಿಂಗ್ ಲೆಜೆಂಡ್ಸ್ ಆಫ್ ಏವಿಯೇಷನ್‌ನಿಂದ ನನ್ನನ್ನು ಗೌರವಿಸುವ ದಿನದಂದು ನನ್ನ ಬಹುಕಾಲದ ಪ್ರೀತಿ ಡಾ. ಅಂಕಾ ಫೌರ್ ಮತ್ತು ನಾನು ಮದುವೆಯಾಗಿದ್ದೇವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಹೊಂದಿರುವ 63 ವರ್ಷದ ಡಾ.ಫೌರ್, ಆಲ್ಡ್ರಿನ್ ಕಂಪನಿ ಬಜ್ ಆಲ್ಡ್ರಿನ್ ವೆಂಚರ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ.
ಇದಕ್ಕೂ ಮೊದಲು ಆಲ್ಡ್ರಿನ್ ಅವರು ಮೂರು ಬಾರಿ ವಿಚ್ಛೇದನ ಪಡೆದಿದ್ದಾರೆ. ಅವರ ಮೊದಲ ಮದುವೆಯು ಜೋನ್ ಆನ್ ಆರ್ಚರ್ ಅವರೊಂದಿಗೆ 1954 ರಲ್ಲಿ ನಡೆಯಿತು ಮತ್ತು 20 ವರ್ಷಗಳ ಒಟ್ಟಿಗೆ ಇದ್ದ ನಂತರ ದಂಪತಿ ಬೇರ್ಪಟ್ಟರು. ನಂತರ ಅವರು ಬೆವರ್ಲಿ ವ್ಯಾನ್ ಝೈಲ್ ಅವರನ್ನು ವಿವಾಹವಾದರು ಮತ್ತು ಮದುವೆಯು 1975 ರಿಂದ 1978 ರ ವರೆಗೆ ಮುಂದುವರಿಯಿತು. ಅವರು 1988 ರಲ್ಲಿ ಮೂರನೇ ಬಾರಿಗೆ ಲೂಯಿಸ್ ಡ್ರಿಗ್ಸ್ ಕ್ಯಾನನ್ ಅವರೊಂದಿಗೆ ಮದವೆಯಾದರು. ಅದು 2012ರಲ್ಲಿ ಕೊನೆಗೊಂಡತು. ಅವರಿಗೆ ಮೂವರು ಮಕ್ಕಳು, ಮೂವರು ಮೊಮ್ಮಕ್ಕಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   10ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ನಡಾಲ್ 22 ಗ್ರ್ಯಾಂಡ್‌ ಸ್ಲಾಮ್ ಪ್ರಶಸ್ತಿ ದಾಖಲೆ ಸರಿಗಟ್ಟಿದ ಜೊಕೊವಿಕ್

1969ರಲ್ಲಿ, ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಅವರು ಅಪೊಲೊ 11 ಮಿಷನ್‌ನ ಭಾಗವಾಗಿ ಚಂದ್ರನ ಮೇಲೆ ನಡೆದಾಡಿದ ಮೊದಲ ವ್ಯಕ್ತಿಗಳಾಗಿ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಿಗೆ ಕಾರಣರಾದರು.
ಚಂದ್ರನ ಮೇಲೆ ಇಳಿಯುವ ಮೊದಲು, ಆಲ್ಡ್ರಿನ್ ಕೊರಿಯಾ ಯುದ್ಧದ ಸಮಯದಲ್ಲಿ ಅಮೆರಿಕದ ವಾಯುಪಡೆಯ ಯುದ್ಧ ಕಾರ್ಯಾಚರಣೆಗಳಲ್ಲಿ ಯುದ್ಧ ವಿಮಾನಗಳ ಪೈಲಟ್ ಆಗಿದ್ದರು. 2018ರಲ್ಲಿ ಅವರು ಹ್ಯೂಮನ್ ಸ್ಪೇಸ್ ಫ್ಲೈಟ್ ಇನ್ಸ್ಟಿಟ್ಯೂಟ್ ಎಂಬ ಲಾಭರಹಿತ ಥಿಂಕ್ ಟ್ಯಾಂಕ್ ಅನ್ನು ಸ್ಥಾಪಿಸಿದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಆಸ್ಟ್ರೇಲಿಯಾದಲ್ಲಿ ತ್ರಿವರ್ಣ ಧ್ವಜ ಹಿಡಿದ ಭಾರತೀಯರ ಮೇಲೆ ದೊಣ್ಣೆ-ಕತ್ತಿ ಹಿಡಿದು ದಾಳಿ ಮಾಡಿದ ಖಾಲಿಸ್ತಾನ್ ಪರ ಗುಂಪು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3.5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement