ಬೆಂಗಳೂರಿನ ಕೆ.ಆರ್​ ಮಾರ್ಕೆಟ್ ಮೇಲ್ಸೇತುವೆಯಿಂದ ನೋಟುಗಳನ್ನು ಎಸೆದ ವ್ಯಕ್ತಿ ವಶಕ್ಕೆ

ಬೆಂಗಳೂರು: ಕೆ.ಆರ್​ ಮಾರ್ಕೆಟ್​ನ ಫ್ಲೈಓವರ್ ಮೇಲೆ ನಿಂತು ನೋಟುಗಳನ್ನು ಎಸೆದಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದ್ದು ಈ ಸಂಬಂಧ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣ ಸಂಬಂಧ ತನಿಖೆಗೆ ಇಳಿದ ಪೊಲೀಸರು, ನಾಗಬಾವಿಯ ಯೂ ಟ್ಯೂಬ್​ ಚಾನಲ್ ಕಚೇರಿಯಲ್ಲಿ ಹಣ ಎಸೆದ ವ್ಯಕ್ತಿ ಇರುವುದನ್ನು ಖಚಿತಪಡಿಸಿ ಕಚೇರಿಗೆ ಹೋಗಿ ವಶಕ್ಕೆ ಪಡೆದಿದ್ದಾರೆ. ಹಣ ಎಸೆದ ವ್ಯಕ್ತಿ ಅರುಣ ಎಂದು ಹೇಳಲಾಗಿದ್ದು, ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ.
ಫ್ಲೈಓವರ್​ನಿಂದ ಹಣ ಎಸೆದ ಘಟನೆ ಸಂಬಂಧ ಕರ್ನಾಟಕ ಪೊಲೀಸ್ ಕಾಯ್ದೆ 92ಡಿ, ಐಪಿಸಿ 283ರ ಅಡಿ ಎನ್​ಸಿಆರ್ ಪ್ರಕರಣ ದಾಖಲಿಸಿದ ಕೆ.ಆರ್.ಮಾರ್ಕೆಟ್​ ಠಾಣಾ ಪೊಲೀಸರು, ಕಾರಣ ನೀಡುವಂತೆ ನಾಗರಭಾವಿಯಲ್ಲಿರುವ ಹಣ ಎಸೆದ ಅರುಣ​ ನಿವಾಸಕ್ಕೆ ನೋಟಿಸ್ ಜಾರಿ ಕಳುಹಿಸಿದ್ದರು. ಅದಾಗ್ಯೂ ಉತ್ತರಿಸದಿದ್ದಾಗ ಅರುಣ ನಾಗರಭಾವಿಯಲ್ಲಿರುವ ಯೂಟ್ಯೂಬ್ ಕಚೇರಿಯಲ್ಲಿ ಇರುವುದು ಗೊತ್ತಾಗಿ ಅಲ್ಲಿಗೆ ಹೋಗಿ ಠಾಣೆಗೆ ಕರೆದೊಯ್ದಿದ್ದಾರೆ.
ನಗರದಲ್ಲಿ ಸದಾ ಜನಜಂಗುಳಿಯಿಂದಿರುವ ಪ್ರದೇಶದಲ್ಲಿ ಇಂದು ಮಂಗಳವಾರ ಬೆಳಗ್ಗೆ 10:50ರ ವೇಳೆ ವ್ಯಕ್ತಿಯೊಬ್ಬ ಬ್ಯಾಗ್​ ಒಂದರಲ್ಲಿ 10 ರೂ ನೋಟುಗಳನ್ನು ಫ್ಲೈ ಓವರ್​ ಮೇಲಿಂದ ಎಸೆದಿದ್ದ.ಬೈಕ್​ನಲ್ಲಿ ಬಂದಂತಹ ಅಪರಿಚಿತ ವ್ಯಕ್ತಿ ಫ್ಲೈಓವರ್​ನ ಮೇಲೆ ನಿಂತು ನೋಟುಗಳನ್ನು ಎಸೆದು, ಅಲ್ಲಿಂದ ಹೋಗಿದ್ದ. ಮೇಲಿಂದ ನೋಟುಗಳು ಬೀಳುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಆಯ್ದುಕೊಳ್ಳಲು ಮುಂದಾಗಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

 

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement