ನೀರಿನಲ್ಲಿ ತನ್ನ ಬೇಟೆಯಾಡಲು ಪ್ರಯತ್ನಿಸಿದ ದೈತ್ಯಾಕಾರದ ಮೊಸಳಯನ್ನೇ ನೀರಿನಿಂದ ಮೇಲಕ್ಕೆ ಎಳೆದೊಯ್ದ ಕಾಡೆಮ್ಮೆ: ಕುತೂಹಲಕಾರಿ ವೀಡಿಯೊ ನೋಡಿ

ಕಾಡು ಪ್ರಾಣಿಗಳ ನಡುವಿನ ಸಂಘರ್ಷವನ್ನು ತೋರಿಸುವ ವೀಡಿಯೊಗಳನ್ನು ಕೆಲವೊಮ್ಮೆ ನಂಬಲಾಗದಷ್ಟು ಅಚ್ಚರಿ ಉಂಟು ಮಾಡುತ್ತವೆ. ಎಮ್ಮೆ ಮತ್ತು ಮೊಸಳೆಯ ನಡುವಿನ ಜೀವನ್ಮರಣದ ಸಂಘರ್ಷವನ್ನು ತೋರಿಸುವ ಇಂಥದ್ದೇ ವೀಡಿಯೊವೊಂದನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ಕಾಡೆಮ್ಮೆಯೊಂದು ನೀರಿನಲ್ಲಿ ತನ್ನನ್ನು ಬೇಟೆಯಾಡಲು ಪ್ರಯತ್ನಿಸುತ್ತಿದ್ದ ದೈತ್ಯಾಕಾರದ ಮೊಸಳೆಯನ್ನು ದಡಕ್ಕೆ ಹೇಗೆ ಎಳೆದೊಯ್ದಿದೆ ಎಂಬುದನ್ನು ಈ ವೀಡಿಯೊ ತೋರಿಸುತ್ತದೆ.
ದಕ್ಷಿಣ ಆಫ್ರಿಕಾದ ಗ್ರೇಟರ್ ಕ್ರುಗರ್ ಪ್ರದೇಶದಲ್ಲಿ ನೆಲೆಗೊಂಡಿರುವ ಸಾಬಿ ಸಾಬಿ ಅಭಯಾರಣ್ಯದಲ್ಲಿ ಈ ವೀಡಿಯೊವನ್ನು ಸೆರೆಹಿಡಿಯಲಾಗಿದೆ ಎಂದು ಅದು ವಿವರಿಸುತ್ತದೆ. ಡಾ ಮಾರ್ಕ್ ಡೆಬೆರಾರ್ಡಿನಿ ಎಂಬ ವ್ಯಕ್ತಿ ನಂಬಲಾಗದ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ ಎಂದು ಹೇಳುತ್ತದೆ.
ಕಾಡೆಮ್ಮೆಗಳು ನೀರು ಕುಡಿಯಲು ಪ್ರಾರಂಭಿಸಿದಾಗ, ನೀರು ಕುಡಿಯುತ್ತಿದ್ದ ವಯಸ್ಕ ಕಾಡೆಮ್ಮೆಯ ಮೂತಿಯನ್ನು ದೈತ್ಯ ಮೊಸಳೆಯು ಬಲವಾಗಿ ಕಚ್ಚಿ ಹಿಡಿಯಿತು. ತನ್ನ ಪಾಡಿಗೆ ತಾನು ನೀರು ಕುಡಿಯುತ್ತಿದ್ದ ಎಮ್ಮೆಯ ಬಾಯಿಗೇ ನೇರ ಬಾಯಿ ಹಾಕಿ ಕಚ್ಚಿದ ದೈತ್ಯ ಮೊಸಳೆ ಬಲವಾಗಿ ಹಿಡಿದಿದೆ.
ನಾನು ನಂಬಲಾಗದೆ ಆಶ್ಚರ್ಯಚಕಿತನಾಗಿ ಅಲ್ಲಿಯೇ ಕುಳಿತುಕೊಂಡೆ. ಕಾಡೆಮ್ಮೆ ಒಮ್ಮೆ ಜೋರಾಗಿ ಕೂಗಿದ್ದು ಕಾಡಿನಲ್ಲಿ ಪ್ರತಿಧ್ವನಿಸಿತು. ಸುತ್ತಲಿನ ಪೊದೆಯ ಮೂಲಕ ಹಿಂಡಿನ ಉಳಿದ ಎಮ್ಮೆಗಳು ಈ ದೃಶ್ಯವನ್ನು ಆಘಾತದಿಂದ ನೋಡಿದವು. ಎಮ್ಮೆ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಇದೇ ವೇಳೆ ಮೊಸಳೆಯು ತನ್ನ ಎಲ್ಲಾ ದೇಹದ ಕಸುವಿನೊಂದಿಗೆ ಸೊಂಟದೆತ್ತರ ನೀರಿನಲ್ಲಿ ಗಟ್ಟಿಯಾಗಿ ಎಮ್ಮೆಯನ್ನು ಹಿಡಿದುಕೊಂಡಿತ್ತು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ನಾವು ಭಯೋತ್ಪಾದನೆ ಬೀಜ ಬಿತ್ತಿದ್ದೇವೆ, ಇಸ್ರೇಲ್‌-ಭಾರತದಲ್ಲೂ ಪ್ರಾರ್ಥನೆ ಮಾಡುವಾಗ ಭಕ್ತರು ಕೊಲ್ಲಲ್ಪಟ್ಟಿಲ್ಲ; ಪೇಶಾವರ ಸ್ಫೋಟದ ಬಗ್ಗೆ ಪಾಕ್ ರಕ್ಷಣಾ ಸಚಿವ

ಯುದ್ಧವು ಬಹಳ ಹೊತ್ತಿನ ವರೆಗೆ ಮುಂದುವರೆಯಿತು. ಆದರೆ ಎಮ್ಮೆ ಹೆದರಲಿಲ್ಲ, ಆದರೆ ಅದಕ್ಕೆ ಮೊಸಳೆ ಹಿಡಿತದಿಂದ ತಪ್ಪಿಸಿಕೊಳ್ಳಲಿಕ್ಕೂ ಆಗಲಿಲ್ಲ. ಆಗ ಕಾಡೆಮ್ಮೆ ನೀರಿನೊಳಗೆ ನಿಧಾನವಾಗಿ ಹಿಂದೆ ಹಿಂದೆ ಹೆಜ್ಜೆ ಹಾಕುತ್ತ ಆ ಬೃಹತ್​ ಮೊಸಳೆಯನ್ನು ದಡಕ್ಕೆ ಎಳೆದುಕೊಂಡು ಬರಲು ಪ್ರಯತ್ನಿಸಿತು. ಉಳಿದ ಎಮ್ಮೆಗಳ ಹಿಂಡು ಈ ದೃಶ್ಯವನ್ನು ನೋಡುತ್ತಿದ್ದವು. ಕೊನೆಗೆ ಕಾಡೆಮ್ಮೆಹಿಂದಿನ ಕಾಲಿನಲ್ಲಿ ಹೆಜ್ಜೆ ಹಾಕುತ್ತ ದೈತ್ಯ ಮೊಸಳೆಯನ್ನು ನೀರಿನಿಂದ ಮೇಲೆ ದಡಕ್ಕೆ ಎಳೆದೊಯ್ದೇ ಬಿಟ್ಟಿತು. ಆಗ ಹೆದರಿದ ಮೊಸಳೆ ಕಾಡೆಮ್ಮೆ ಮೂತಿ ಬಿಟ್ಟು ನೀರಿನೆಡೆಗೆ ಓಡಿತು.

ಕೆಲ ದಿನಗಳ ಹಿಂದೆ ಈ ವೀಡಿಯೊ ಪೋಸ್ಟ್ ಮಾಡಲಾಗಿತ್ತು. ಹಂಚಿಕೊಂಡಾಗಿನಿಂದ, ಕ್ಲಿಪ್ 76 ಲಕ್ಷ ವೀಕ್ಷಣೆಗಳನ್ನು ಕಂಡಿದೆ.
“ಅಂತಹ ಕಳಪೆ ಹಿಡಿತದ ನಡುವೆಯೂ ಮೊಸಳೆಯು ಎಮ್ಮೆಯನ್ನು ಹಿಡಿದುಕೊಂಡಿರುವುದು ಅದರ ಅಗಾಧ ಕಚ್ಚುವಿಕೆಯ ಶಕ್ತಿಯನ್ನು ತೋರಿಸುತ್ತದೆ” ಎಂದು ಯೂ ಟ್ಯೂಬ್ ಬಳಕೆದಾರರೊಬ್ಬರು ಬರೆದಿದ್ದಾರೆ. “ಅಲ್ಲಿ ರೆಕಾರ್ಡ್ ಆಗದ ಎಲ್ಲ ವಿಷಯವನ್ನು ನಾನು ಮಾತ್ರ ಊಹಿಸಬಲ್ಲೆ ಎಂದು ಇನ್ನೊಬ್ಬರು ಬರೆದಿದ್ದಾರೆ. “ಕಾಡೆಮ್ಮೆ ಎಷ್ಟು ಪ್ರಬಲವಾಗಿದೆ ಎಂದು ನೋಡಿ” ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ. “ಅದ್ಭುತ. ಅದು ನಂಬಲಸಾಧ್ಯವಾಗಿತ್ತು, ಎಂದು ನಾಲ್ಕನೆಯವರು ಪೋಸ್ಟ್ ಮಾಡಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ನಾವು ಭಯೋತ್ಪಾದನೆ ಬೀಜ ಬಿತ್ತಿದ್ದೇವೆ, ಇಸ್ರೇಲ್‌-ಭಾರತದಲ್ಲೂ ಪ್ರಾರ್ಥನೆ ಮಾಡುವಾಗ ಭಕ್ತರು ಕೊಲ್ಲಲ್ಪಟ್ಟಿಲ್ಲ; ಪೇಶಾವರ ಸ್ಫೋಟದ ಬಗ್ಗೆ ಪಾಕ್ ರಕ್ಷಣಾ ಸಚಿವ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement