ಪ್ರೇಮಿಗಾಗಿ ಹುಡುಗಿಯಿದ್ದವಳು ಶಸ್ತ್ರಚಿಕಿತ್ಸೆಯಿಂದ ಹುಡುಗನಾಗಿ ಬದಲು: ಆದ್ರೆ ಕೈಕೊಟ್ಟ ಪ್ರೇಮಿಕಾ, ಆತನ ವಿರುದ್ಧವೇ ಪ್ರಕರಣ ದಾಖಲು..!

ಝಾನ್ಸಿ: ಸಿನಿಮಾದ ಕಥಾವಸ್ತುವಿನಂತಿರುವ ಈ ನೈಜ ಕಥೆಯಲ್ಲಿ, ಇಬ್ಬರು ಹುಡುಗಿಯರು, ಮೊದಲು ಸ್ನೇಹಿತರಾದರು ಮತ್ತು ನಂತರ ಪ್ರೀತಿಯ ಬಲೆಯಲ್ಲಿ ಬಿದ್ದರು, ಈಗ ಪರಸ್ಪರ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಹಾಗೂ ಪೊಲೀಸ್‌ ಠಾಣೆ, ಕೋರ್ಟ್‌ ಮೆಟ್ಟಲೇರಿದ್ದಾರೆ.
ಇದು ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಇಬ್ಬರು ಹುಡುಗಿಯರ ಕಥೆ. ಝಾನ್ಸಿಯ ಕುಟುಂಬವೊಂದು ಪೇಯಿಂಗ್ ಗೆಸ್ಟ್‌ಗೆ ತಮ್ಮ ಮನೆಯಲ್ಲಿ ಯುವತಿಯೊಬ್ಬಳಿಗೆ ಅವಕಾಶ ನೀಡಿದ ನಂತರ ಈ ಕಥೆ ಪ್ರಾರಂಭವಾಯಿತು. ಇದು ಸೋನಾಲ್‌ ಹಾಗೂ ಸನಾ ಎಂಬ ಹುಡುಗಿಯರ ಕಥೆ.
ಸೋನಾಲ್ ತನ್ನ ಹೆತ್ತವರೊಂದಿಗೆ ಇರುತ್ತಿದ್ದಳು, 2016ರಲ್ಲಿ ಸನಾ ಎಂಬ ಹುಡುಗಿ ಪೇಯಿಂಗ್ ಗೆಸ್ಟ್ ಆಗಿ ಅವಳ ಮನೆಗೆ ಬಂದಳು. ಅದೇ ಮನೆಯ ಮೇಲಿನ ಮಹಡಿಯಲ್ಲಿ ತಂಗಿದ್ದಳು. ಸೋನಾಲ್ ಮತ್ತು ಸನಾ ಉತ್ತಮ ಸ್ನೇಹಿತರಾದರು. ಪರಸ್ಪರ ಆಕರ್ಷಿತರಾಗಿ ನಾಲ್ಕು ತಿಂಗಳೊಳಗೆ ಪ್ರೀತಿ ಬಲೆಯಲ್ಲಿ ಬಿದ್ದರು. ಆದರೆ, ಈ ವಿಷಯ ಗೊತ್ತಾಗಿ ಸೋನಾಲ್ ಕುಟುಂಬವು ಈ ಯುವತಿಯರಿಬ್ಬರ ಪ್ರೀತಿಯನ್ನು ವಿರೋಧಿಸಿತು ಹಾಗೂ ಸನಾಗೆ ಮನೆಯಿಂದ ಹೊರಗೆ ಹೋಗುವಂತೆ ಸೂಚಿಸಲಾಯಿತು.
ಝಾನ್ಸಿಯಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದ ಸನಾ ಅವರಿಗೆ ಕ್ವಾಟರ್ಸ್‌ ಮಂಜೂರು ಆದ ನಂತರ, 2017ರಲ್ಲಿ ಸನಾ ಪೇಯಿಂಗ್‌ ಗೆಸ್ಟ್‌ ಆಗಿದ್ದ ಮನೆಯಿಂದ ಹೊರನಡೆದಳು. ಕೆಲವು ದಿನಗಳ ನಂತರ ಸೋನಾಲ್ ಕೂಡ ತನ್ನ ಮನೆಯನ್ನು ತೊರೆದು ಆಕೆಯೊಂದಿಗೆ ಹೋಗಿ ವಾಸ ಮಾಡಲು ಆರಂಭಿಸಿದಳು.
ಇದಾದ ಕೆಲ ದಿನಗಳ ನಂತರ, ಸೋನಾಲ್ ಸನಾಗೆ ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಮನವರಿಕೆ ಮಾಡಿದಳು ಮತ್ತು ಅದಕ್ಕಾಗಿಯೇ ಇಬ್ಬರೂ ದೆಹಲಿ ಮೂಲದ ಸರ್ ಗಂಗಾ ರಾಮ್ ಆಸ್ಪತ್ರೆಗೆ ಭೇಟಿ ನೀಡಿದರು, ಅಲ್ಲಿ ವೈದ್ಯರು ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರು ಮತ್ತು ಶಸ್ತ್ರಚಿಕಿತ್ಸೆಗೆ ಸನಾ “ಫಿಟ್” ಎಂದು ಘೋಷಿಸಿದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಅಭ್ಯರ್ಥಿಗಳ ಬದಲಾವಣೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ

ಸನಾ ನಂತರ ಜೂನ್ 2020ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹುಡುಗಿಯಿದ್ದವಳು ಲಿಂಗ ಪರಿವರ್ತನೆ ಮಾಡಿಕೊಂಡು ಹುಡುಗನಾದನು. ಅಲ್ಲದೆ, ಅಧಿಕೃತವಾಗಿ ಹೆಸರು ಸಹ ಸೊಹೈಲ್ ಖಾನ್ ಎಂದು ಬದಲಾಯಿತು. ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ, ಸೋನಾಲ್ ಎಲ್ಲಾ ವೈದ್ಯಕೀಯ ದಾಖಲೆಗಳಿಗೆ ಸೊಹೈಲ್ ಖಾನ್ ಅವರ “ಪತ್ನಿ” ಎಂದು ಸಹಿ ಹಾಕಿದ್ದಾರೆ ಎಂದು ಸನಾ ಉರ್ಫ್‌ ಸೊಹೈಲ್‌ ಖಾನ್‌ ಹೇಳುತ್ತಾನೆ.
ಕೆಲಸ ಹುಡುಕುತ್ತಿದ್ದ ಸೋನಾಲ್‌ 2022ರಲ್ಲಿ, ಯಥಾರ್ಥ ಎಂಬ ಆಸ್ಪತ್ರೆಯಲ್ಲಿ ಕೆಲಸ ಪಡೆದಳು. ಇದರ ನಂತರ ಸೊಹೈಲ್‌ಗೆ ಸೋನಾಲಳ ನಡವಳಿಕೆಯಲ್ಲಿ ಬದಲಾವಣೆ ಕಂಡಿತು ಹಾಗೂ ನಂತರದಲ್ಲಿ ಇವರಿಬ್ಬರ ಸಂಬಂಧ ಹುಳಿಯಾಗಿ ಪರಿಣಮಿಸಿತು. ಸೋನಾಲ್ ಅವಳು ಸೊಹೈಲ್‌ನಿಂದ ತಪ್ಪಿಸಿಕೊಳ್ಳಲು ಪ್ರಾರಂಭಿಸಿದಳು ಮತ್ತು ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲಿ ಕಳೆಯುತ್ತಿದ್ದಳು. ಇದು ಆಗಾಗ್ಗೆ ಅವರ ನಡುವೆ ವಾಗ್ವಾದಗಳಿಗೆ ಕಾರಣವಾಯಿತು.

ಸೊಹೈಲ್ ಖಾನ್‌(ಸನಾ) ಒಂದು ರಾತ್ರಿ ಸೋನಾಲ್ ಅಳುವುದನ್ನು ನೋಡಿದನು ಮತ್ತು ಸೋನಾಲ್‌ ಇತರ ಇಬ್ಬರೊಂದಿಗೆ ಗುಂಪು ಕರೆಯಲ್ಲಿ ತನ್ನ ಕುಟುಂಬವನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಿದ್ದಳು. ನಂತರ ಸೋನಾಲ್ ಅವಳು ತನ್ನೊಂದಿಗೆ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಜ್ಞಾನ್ ಎಂಬ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಸೊಹೈಲ್‌ ಶೀಘ್ರದಲ್ಲೇ ಕಂಡುಕೊಂಡ. ಈ ಬಗ್ಗೆ ಪ್ರಶ್ನಿಸಿದಾಗ, ಸೋನಾಲ್ ತಾನು ಜ್ಞಾನ್‌ ಜೊತೆಗೆ ವಾಸಿಸಲು ಬಯಸುವುದಾಗಿ ಹೇಳಿದಳು. ಸೋನಾಲ್ ಶೀಘ್ರದಲ್ಲೇ ಸೊಹೈಲ್‌ನನ್ನು ತೊರೆದು ತನ್ನ ಮನೆಗೆ ಮರಳಿದಳು. ನಂತರ ಆಕೆ ಮತ್ತು ಆಕೆಯ ಕುಟುಂಬದವರು ಸೊಹೈಲ್ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ಕಿರುಕುಳದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ.
ಸೋಹೈಲ್ ಪೊಲೀಸರ ಮುಂದೆ ಘಟನೆಯನ್ನು ವಿವರಿಸಿದರು, ನಂತರ ಸೋನಾಲ್ ಅವರನ್ನು ವಿಚಾರಣೆಗೆ ಕರೆದರು ಆದರೆ ಅವಳು ಹಾಜರಾಗಲಿಲ್ಲ. ನಂತರ ಸೊಹೈಲ್ ಕೋರ್ಟ್‌ ಮೊರೆ ಹೋದನು. ಆದರೆ ಸೋನಾಲ್ ನ್ಯಾಯಾಲಯದ ಮುಂದೆ ಹಾಜರಾಗುವುದನ್ನು ತಪ್ಪಿಸಿದರು.
ಜನವರಿ 18 ರಂದು ಸೋನಾಲಳನ್ನು ಬಂಧಿಸಲಾಯಿತು ಮತ್ತು ಈಗ ಜಾಮೀನಿನ ಮೇಲೆ ಹೊರಗಿದ್ದಾಳೆ. ಮುಂದಿನ ವಿಚಾರಣೆ ಫೆಬ್ರವರಿ 23 ರಂದು ನಡೆಯಲಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಗಾಯಕಿ ವಾಣಿ ಜೈರಾಮ್ ನಿಧನ: ಅನುಮಾನಾಸ್ಪದ ಸಾವು ಪ್ರಕರಣ  ದಾಖಲಿಸಿದ ಚೆನ್ನೈ ಪೊಲೀಸರು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement