ಹೈದರಾಬಾದ್: ದಕ್ಷಿಣ ಭಾರತದ ಚಿತ್ರ ರಂಗದ ಹಿರಿಯ ನಟಿ ಜಮುನಾ (Jamuna) ಇಂದು ಶುಕ್ರವಾರ (ಜನವರಿ 27) ಹೈದರಾಬಾದಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ತೆಲುಗು, ಕನ್ನಡ, ಹಿಂದಿ ಸೇರಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆಯಿಂದ ಜಮುನಾ ಅಪಾರ ಖ್ಯಾತಿ ಪಡೆದಿದ್ದರು. ಜಮುನಾ ಅವರನ್ನು ದಕ್ಷಿಣ ಭಾರತದ ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.
ಜಮುನಾ ಅವರು 1936 ಆಗಸ್ಟ್ 30 ರಂದು ಕರ್ನಾಟಕದ ಹಂಪಿಯಲ್ಲಿ (Hampi) ಜನಿಸಿದ್ದರು. ಅವರ ತಂದೆ ನಿಪ್ಪಾಣಿ ಶ್ರೀನಿವಾಸ ರಾವ್ ಮತ್ತು ತಾಯಿ ಕೌಸಲ್ಯಾದೇವಿ. ನಂತರ ಅವರ ಕುಟುಂಬ ಆಂಧ್ರಕ್ಕೆ ವಲಸೆ ಹೋಯಿತು. 1952ರಲ್ಲಿ ಪುಟ್ಟಿಲು ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ 1954ರಲ್ಲಿ ಆದರ್ಶ ಪತಿ ಸಿನಿಮಾ ಮೂಲಕ ಕನ್ನಡ ಸಿನೆಮಾ ಪ್ರವೇಶಿಸಿದರು. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸುವ ಜೊತೆಗೆ ಹಿಂದಿಯಲ್ಲೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ತೆಲುಗು-88, ತಮಿಳು-27, ಕನ್ನಡ-8, ಹಿಂದಿ-11 ಸಿನಿಮಾ ಸೇರಿ ಒಟ್ಟು 134 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಕನ್ನಡದಲ್ಲಿ ಅವರಿಗೆ ಸಾಕ್ಷಾತ್ಕಾರ ಸಿನಿಮಾದ ಅಭಿನಯ ಅಪಾರ ಖ್ಯಾತಿ ತಂದುಕೊಟ್ಟಿತು. ಅವರು ಡಾ. ರಾಜಕುಮಾರ ಅವರ ಎದುರು ಅಭಿಯನಿಸಿದ್ದರು. ಕನ್ನಡದಲ್ಲಿ ಅವರು ಆದರ್ಶ ಸತಿ (1955), ತೆನಾಲಿ ರಾಮಕೃಷ್ಣ (1956), ಭೂಕೈಲಾಸ (1956), ರತ್ನಗಿರಿ ರಹಸ್ಯ (1957), ಸಾಕ್ಷಾತ್ಕಾರ (1971) ಮಾಯೆಯ ಮುಸುಕು (1980), ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ (1980), ಪೊಲೀಸ್ ಮತ್ತು ದಾದಾ (1991) ಸಿನೆಮಾಗಳಲ್ಲಿ ನಟಿಸಿದ್ದಾರೆ.ಜಮುನಾ ಅವರ ನಟನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ಜಮುನಾ ಅವರು 1965ರಲ್ಲಿ ಪ್ರೊಫೆಸರ್ ಜುಲುರಿ ರಮಣ ರಾವ್ ಅವರನ್ನು ವಿವಾಹವಾದರು. ಅವರು 2014ರಲ್ಲಿ ಮೃತಪಟ್ಟರು.
ಜಮುನಾ ಅವರು ನಟನೆಯ ಜತೆಗೆ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದರು. 1980ರಲ್ಲಿ ಅವರು ಕಾಂಗ್ರೆಸ್ಗೆ ಸೇರ್ಪಡೆ ಆದರು. 1989ರಲ್ಲಿ ಜಮುನಾ ಅವರು ರಾಜಮಂಡ್ರಿಯಿಂದ ಸಂಸದೆಯಾಗಿ ಆಯ್ಕೆ ಆದರು. 1991ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋತರು. ಆ ಬಳಿಕ ರಾಜಕೀಯದಿಂದ ದೂರ ಉಳಿದರು.
ನಿಮ್ಮ ಕಾಮೆಂಟ್ ಬರೆಯಿರಿ