ಹೊನ್ನಾವರ: ಕರ್ಕಿಯ ದೈವಜ್ಞ ಮಠದಲ್ಲಿ ಫೆಬ್ರವರಿ 3ರಿಂದ 5ರ ವರೆಗೆ ಶ್ರೀ ರಾಮತಾರಕ ನಾಮ ಜಪ ಮಹಾಯಜ್ಞ-ಶ್ರೀರಾಮ ಪಟ್ಟಾಭಿಷೇಕ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯ ದೈವಜ್ಞ ಮಠದಲ್ಲಿ ಫೆಬ್ರವರಿ ೩ರಿಂದ ೫ರ ತನಕ ಲೋಕಕಲ್ಯಾಣಾರ್ಥವ ಶ್ರೀ ರಾಮತಾರಕ ನಾಮ ಜಪ ಮಹಾಯಜ್ಞ ಹಾಗೂ ಶ್ರೀರಾಮ ಪಟ್ಟಾಭಿಷೇಕ ನಡೆಯಲಿದೆ ಎಂದು ದೈವಜ್ಞ ವಾಹಿನಿ ಮತ್ತು ಮಾತೃವಾಹಿನಿ ಅಧ್ಯಕ್ಷ ಕೃಷ್ಣಕುಮಾರ ಶೇಟ್ ತಿಳಿಸಿದ್ದಾರೆ.
ಪಟ್ಟಣದ ಶ್ರೀ ವಿಠ್ಠಲ ರುಕುಮಾಯಿ ದೇವಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೈವಜ್ಞ ಬ್ರಾಹ್ಮಣ ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿಗಳವರು ೨೦೧೮ರಲ್ಲಿ ಶ್ರೀ ರಾಮತಾರಕ ಜಪ ಮಾಡಲು ಆಹ್ವಾನ ಕೊಟ್ಟಿದ್ದರು. ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ಎಲ್ಲೆಡೆ ದೈವಜ್ಞ ಬ್ರಾಹ್ಮಣ ಸಮಾಜದವರು ೧೩ ಕೋಟಿ ರಾಮತಾರಕ ಜಪ ಮಾಡಿದ್ದು ಸಮಾರೋಪ ಈಗ ನಡೆಯಲಿದೆ ಎಂದು ಮಾಹಿತಿ ನೀಡಿದರು.
ರಾಮಮಂದಿರದ ತೀರ್ಪು ಬಂದಿರಲಿಲ್ಲ. ಇವೆಲ್ಲದಕ್ಕೆ ಪ್ರಾರ್ಥಿಸಿ ಶ್ರೀಗಳು ರಾಮತಾರಕ ಜಪ ಮಾಡಲು ಆಹ್ವಾನ ಕೊಟ್ಟಿದ್ದರು. ನಂತರ ರಾಮಮಂದಿರದ ತೀರ್ಪು ಬಂದು ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಅದರಲ್ಲಿ ನಾವು ಕೂಡ ಒಂದ ಭಾಗ ಎಂಬ ಹೆಮ್ಮೆಯಿದೆ ಎಂದರು.
ಫೆಬ್ರವರಿ ೧ರಿಂದ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಫೆ.೩ರಂದು ಬೆಳಿಗ್ಗೆ ೧೦ಗಂಟೆಗೆ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸುವರು. ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ಆರ್.ವಿ.ದೇಶಪಾಂಡೆ, ದಿನಕರ ಶೆಟ್ಟಿ, ಸುನೀಲ ನಾಯ್ಕ, ಶಾಂತಾರಾಮ ಸಿದ್ದಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಆರ್.ಎಸ್.ರಾಯ್ಕರ ಅಧ್ಯಕ್ಷತೆ ವಹಿಸುವರು. ರಾಮರಾಜ್ಯದ ಪರಿಕಲ್ಪನೆ ಇಂದಿಗೂ ಪ್ರಸ್ತುತ ಎಂಬುದರ ಕುರಿತು ಟಿ.ಎನ್.ಪ್ರಭಾಕರ ಉಪನ್ಯಾಸ ನೀಡುವರು ಎಂದು ತಿಳಿಸಿದರು.
ಮಧ್ಯಾಹ್ನ ೧೨:೩೦ಗಂಟೆಗೆ ಮಹಾಗಣಪತಿ ಹವನ, ಶ್ರೀ ದುರ್ಗಾ ಹೋಮ, ಶ್ರೀಸುದರ್ಶನ ಹೋಮ, ಶ್ರೀಧನ್ವಂತರಿ ಹೋಮಗಳ ಪೂರ್ಣಾಹುತಿ ನಡೆಯಲಿದೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಸಂಜೆ ಶ್ರೀರಾಮ ಕಥನ ಕುರಿತು ಚಕ್ರವರ್ತಿ ಸೂಲಿಬೆಲೆಯವರಿಂದ ಉಪನ್ಯಾಸ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ೪ ಗಂಟೆಗೆ ಸಾಂಸ್ಕೃತಿಕ ಸಭೆಯಲ್ಲಿ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಶ್ರೀಗಳು ಆಶೀರ್ವಚನ ನೀಡುವರು. ಸಚಿವ ಸುನೀಲಕುಮಾರ ಉದ್ಘಾಟಿಸುವರು. ಅನಿಲಚೋಡಣಕರ ಅಧ್ಯಕ್ಷತೆ ವಹಿಸುವರು. ಚಕ್ರವರ್ತಿ ಸೂಲಿಬೆಲೆ, ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಫೆ.೪ರಂದು ಬೆಳಿಗ್ಗೆ ೧೦ ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ. ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ, ಶಿವಮೊಗ್ಗದ ಶ್ರೀ ಬ್ರಹ್ಮಾನಂದತೀರ್ಥ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು.

ನಂತರ ವಿವಿಧ ಹೋಮಗಳು, ಸಂಜೆ ಸಭಾಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ೪ಗಂಟೆಗೆ ಸಾಂಸ್ಕೃತಿಕ ಸಭೆಯಲ್ಲಿ ಶ್ರೀ ಬ್ರಹ್ಮಾನಂದತೀರ್ಥ ಮಹಾಸ್ವಾಮೀಜಿ ಆಶೀರ್ವಚನ ನೀಡುವರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಉದ್ಘಾಟಿಸುವರು.
ಫೆ.೫ರಂದು ಬೆಳಿಗ್ಗೆ ೧೦:೩೦ ಗಂಟೆಗೆ ಶ್ರೀರಾಮತಾರಕ ಹವನದ ಪೂರ್ಣಾಹುತಿ ನೆರವೇರಲಿದೆ. ೧೧ ಗಂಟೆಗೆ ಚಂದಾವರದ ಶ್ರೀ ಹನುಮಂತ ದೇವರ ಪಲ್ಲಕ್ಕಿ, ರಾಮತೀರ್ಥದ ಶ್ರೀ ಶ್ರೀಧರ ಸ್ವಾಮೀಜಿಗಳವರ ಪಾದುಕೆಗಳ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಶ್ರೀಗಳಿಂದ ಶ್ರೀರಾಮ ಪಟ್ಟಾಭಿಷೇಕ ನೆರವೇರಲಿದೆ ಎಂದು ತಿಳಿಸಿದರು.
ಮಧ್ಯಾಹ್ನ ೩ಗಂಟೆಗೆ ಧಾರ್ಮಿಕ ಸಭೆಯಲ್ಲಿ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡುವರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ರೂಪಾಲಿ ನಾಯ್ಕ, ಗಣಪತಿ ಉಳ್ವೇಕರ, ವಿಶ್ವ ಹಿಂದು ಪರಿಷತ್ತಿನ ಗೋಪಾಲಜಿ ಮತ್ತಿತರರು ಪಾಲ್ಗೊಳ್ಳುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದ ಅವರು ಪ್ರತಿದಿನ ೯ ಗಂಟೆಗೆ ಮಹಿಳೆಯರಿಗೆ ಅರಿಶಿನ ಕುಂಕುಮ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಊರ್ಮಿಳಾ ಶೇಟ್, ಸಚಿನ ಶೇಟ್, ರವೀಂದ್ರ ಶೇಟ್, ದೀಪಕ ಶೇಟ್, ರಾಘವೇಂದ್ರ ಶೇಟ್, ಕಮಲಾಕರ ಶೇಟ್, ಸಚಿನ ಆರ್.ಶೇಟ್, ಗುರುಮೂರ್ತಿ ಶೇಟ್ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

.

3.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement