ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ಕಾರ್ಯಕ್ರಮದ ವೇಳೆ ಕುಸಿದುಬಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ

ದಾವಣಗೆರೆ: ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿರುವ ಘಟನೆ ಭಾನುವಾರ ದಾವಣಗೆರೆಯ ಹರಿಹರದ ಕಾರ್ಯಕ್ರಮದ ವೇಳೆ ನಡೆದಿದೆ.
ಬರಗೂರು ರಾಮಚಂದ್ರಪ್ಪ ಅವರು ಕಾರ್ಯಕ್ರಮ ಮುಗಿಸಿ ಪೋಸ್ಟರ್‌ ಒದನ್ನು ಉದ್ಘಾಟಿಸಲು ತೆರಳಿದ ವೇಳೆ ಅವರು ಅಸ್ವಸ್ಥರಾಗಿ ಕುಸಿದು ಕುಳಿತಿದ್ದಾರೆ ಎಂದು ಹೇಳಲಾಗಿದೆ. ತಕ್ಷಣವೇ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರಾಮಚಂದ್ರಪ್ಪ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಹೇಳಲಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಬಂಡಾಯ ವೇದಿಕೆ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಬರಗೂರು ರಾಮಚಂದ್ರಪ್ಪ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಷಣ ಮುಗಿಸಿದ್ದ ಬರುಗೂರು ಅವರು ನಂತರ ಆದರೆ ಕಾರ್ಯಕ್ರಮ ಮುಗಿಸಿದ ವೇಳೆ ಅಸ್ವಸ್ಥಗೊಂಡರು   ಎಂದು ಹೇಳಲಾಗಿದೆ. ಕೂಡಲೇ ಅಲ್ಲಿದವದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿರುವ ವೈದ್ಯರು ಭಯಪಡುವ ಆತಂಕವಿಲ್ಲ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಬರಗೂರು ರಾಂಚಂದ್ರಪ್ಪ ಅವರು ಆರೋಗ್ಯವಾಗಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಡಿಸ್ಚಾರ್ಜ್ ಬಳಿಕ ಮಾತನಾಡಿದ ಅವರು, ಕವಿಗೋಷ್ಠಿ ಉದ್ಘಾಟನೆ ನಂತರ ಸಭಾಂಗಣದ ಹೊರಗೆ ಎಸ್‌ಸಿ, ಎಸ್‌ಟಿ ಸ್ಪರ್ಧಾ ಪರೀಕ್ಷೆಗೆ ಪೋಸ್ಟರ್ ಬಿಡುಗಡೆ ಮಾಡಲು ಹೋಗಿದ್ದೆ. ಆಗ ತಲೆ ಸುತ್ತು ಬಂದಂತಾಯಿತು. ತಕ್ಷಣ ಹೋಗಿ ಕಾರಿನಲ್ಲಿ ಕುಳಿತುಕೊಂಡೆ. ಬಳಿಕ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರು. ನನಗೆ ಕೆಲ ನಿಮಿಷಗಳ ಕಾಲ ಪ್ರಜ್ಞೆ ಇರಲಿಲ್ಲ ಎಂದು ಹೇಳಿದ್ದಾರೆ.
ನನಗೆ ಬಿಪಿ, ಶುಗರ್ ಇಲ್ಲ. ಆದರೆ ಇದೆಲ್ಲಾ ಆಗಿರುವ ಹಿನ್ನೆಲೆ ವೈದ್ಯರು ಇಸಿಜಿ ಬಿಪಿ ಶುಗರ್ ಟೆಸ್ಟ್ ಮಾಡಿದ್ದಾರೆ. ಹೆಚ್ಚು ಒತ್ತಡದಿಂದ ಈ ರೀತಿ ಆಗುತ್ತದೆ ಎಂದು ಹೇಳಿದ್ದಾರೆ. ಹಾಗೂ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು : ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಿನಲ್ಲಿ ಆತ್ಮಹತ್ಯೆ

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement