10ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ನಡಾಲ್ 22 ಗ್ರ್ಯಾಂಡ್‌ ಸ್ಲಾಮ್ ಪ್ರಶಸ್ತಿ ದಾಖಲೆ ಸರಿಗಟ್ಟಿದ ಜೊಕೊವಿಕ್

ಮೆಲ್ಬೋರ್ನ್:‌ ನೊವಾಕ್ ಜೊಕೊವಿಕ್ 10ನೇ ಬಾರಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್‌ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಹಾಗೂ ಇಷ್ಟು ಬಾರಿ ಈ ಪ್ರಶಸ್ತಿ ಗೆದ್ದ ಮೊದಲ ವ್ಯಕ್ತಿಯಾಗಿದ್ದಾರೆ.
4ನೇ ಶ್ರೇಯಾಂಕದ ನೊವಾಕ್ ಜೊಕೊವಿಕ್ ಅವರು ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯನ್‌ ಓಪನ್‌ ಗೆಲ್ಲುವ ಮೂಲಕ ತಮ್ಮ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಸಂಖ್ಯೆಯನ್ನು 22 ಕ್ಕೆ ಹೆಚ್ಚಿಸಿಕೊಂಡರು ಹಾಗೂ ರಾಫೆಲ್ ನಡಾಲ್ ಅವರ ದಾಖಲೆಯನ್ನು ಸರಿಗಟ್ಟಿದರು.
20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗಳಿಸಿದ ಮೊದಲ ವ್ಯಕ್ತಿ ರೋಜರ್ ಫೆಡರರ್ ಕಳೆದ ವರ್ಷ ನಿವೃತ್ತರಾದರು, ನಡಾಲ್ ಗಾಯದ ಸಮಸ್ಯೆಯಿಂದಾಗಿ ಈಸಲದ ಆಸ್ಟ್ರೇಲಿಯನ್‌ ಓಪನ್‌ನ 2 ನೇ ಸುತ್ತಿನಲ್ಲೇ ಹೊರಬಿದ್ದರು.
ಜೊಕೊವಿಕ್ ಅವರು ರಾಫೆಲ್ ನಡಾಲ್ (ಫ್ರೆಂಚ್ ಓಪನ್‌ನಲ್ಲಿ 14) ನಂತರ ಒಂದೇ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯಲ್ಲಿ ಕನಿಷ್ಠ 10 ಪ್ರಶಸ್ತಿಗಳನ್ನು ಗೆದ್ದ 2ನೇ ಆಟಗಾರರಾದರು.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 24 ವರ್ಷದ ಸ್ಟೆಫಾನೋಸ್ ಸಿಟ್ಸಿಪಾಸ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದರು. 2 ಗಂಟೆ 56 ನಿಮಿಷಗಳ ಹೋರಾಟದಲ್ಲಿಜೊಕೊವಿಕ್‌ ಅವರು ಸಿಟ್ಸಿಪಾಸ್‌ರನ್ನು 6-3, 7-6 (4), 7-6 (5) ಸೆಟ್‌ಗಳಿಂದ ಸೋಲಿಸಿದರು.
22ನೇ ಗ್ರ್ಯಾಂಡ್ ಸ್ಲಾಮ್ ಗೌರವ
ಜೊಕೊವಿಕ್ ಈಗ 22ನೇ ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ. ಅವರ 10ನೇ ಆಸ್ಟ್ರೇಲಿಯನ್‌ ಕಿರೀಟದ ಜೊತೆಗೆ, ಅವರು ಎರಡು ಫ್ರೆಂಚ್ ಓಪನ್ ಪ್ರಶಸ್ತಿಗಳು, ಏಳು ವಿಂಬಲ್ಡನ್ ಪ್ರಶಸ್ತಿಗಳು ಮತ್ತು ಮೂರು ಅಮೆರಿಕ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಎಲ್ಲಾ ನಾಲ್ಕು ಸ್ಲಾಮ್ ಈವೆಂಟ್‌ಗಳಲ್ಲಿ, ಜೊಕೊವಿಕ್ ಇಲ್ಲಿಯವರೆಗಿನ ಅವರ ವೃತ್ತಿಜೀವನದಲ್ಲಿ 80- ಪ್ಲಸ್ ಗೆಲುವುಗಳನ್ನು ಕಂಡಿದ್ದಾರೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement