ಕೇಂದ್ರ ಬಜೆಟ್ 2023: ಹೊಸ ತೆರಿಗೆ ಪದ್ಧತಿ -ಹಳೆಯ ತೆರಿಗೆ ಪದ್ಧತಿ – ಏನು ಬದಲಾಗಿದೆ ಎಂಬುದನ್ನು ನೋಡಿ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೈಯಕ್ತಿಕ ತೆರಿಗೆದಾರರಿಗೆ ವಾರ್ಷಿಕ ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ರಿಯಾಯಿತಿ ಮಿತಿಯನ್ನು ಹೆಚ್ಚಿಸಿದ್ದಾರೆ. “.. ಪ್ರಸ್ತುತ ₹ 5 ಲಕ್ಷದವರೆಗಿನ ಆದಾಯ ಹೊಂದಿರುವವರು ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಹೊಸ ತೆರಿಗೆ ಪದ್ಧತಿಯಲ್ಲಿ ರಿಯಾಯಿತಿ ಮಿತಿಯನ್ನು ₹ … Continued

ಚೀನಾ-ಪಾಕಿಸ್ತಾನ ಗಮನದಲ್ಲಿಟ್ಟು ರಕ್ಷಣಾ ಬಜೆಟ್ 13%ಕ್ಕಿಂತ ಹೆಚ್ಚು ಏರಿಕೆ

ನವದೆಹಲಿ: ದೇಶದ ರಾಷ್ಟ್ರೀಯ ಭದ್ರತೆಗೆ ಪ್ರಮುಖ ಒತ್ತು ನೀಡುವ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು 2023-24 ರ ಆರ್ಥಿಕ ವರ್ಷಕ್ಕೆ ರಕ್ಷಣಾ ಬಜೆಟ್ ಅನ್ನು ಸುಮಾರು 13%ರಷ್ಟು ಹೆಚ್ಚಳ ಮಾಡಿದೆ. ಅಂದರೆ ರಕ್ಷಣಾ ಬಜೆಟ್‌ ಅನ್ನು 5.93 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಚೀನಾ ಮತ್ತು ಪಾಕಿಸ್ತಾನದಿಂದ ಹೆಚ್ಚುತ್ತಿರುವ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ಹೆಚ್ಚಳ … Continued

ಕೇಂದ್ರ ಬಜೆಟ್ 2023 : 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ, 5ಜಿ ಅಪ್ಲಿಕೇಶನ್ ಅಭಿವೃದ್ಧಿಗೆ ನೂರು ಲ್ಯಾಬ್

ನವದೆಹಲಿ : ಕೇಂದ್ರ ಬಜೆಟ್‌-2023 ರಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ, ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮ ರೂಪಿಸಲು ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಬಜೆಟ್ ಮಂಡನೆ ಮಾಡಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮ ಅಳವಡುಸಲಾಗುತ್ತದೆ. ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಒತ್ತು … Continued

ಕೇಂದ್ರ ಬಜೆಟ್‌ 2023 : ಕಾರ್ಬನ್ ಮುಕ್ತ ಪರಿಸರಕ್ಕೆ 35,000 ಸಾವಿರ ಕೋಟಿ ರೂ. ಮೀಸಲು

ನವದೆಹಲಿ : 2070ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣದ ಗುರಿ ಹೊಂದಲಾಗಿದ್ದು, ಕಾರ್ಬನ್ ಮುಕ್ತ ಪರಿಸರಕ್ಕೆ 35,000 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಂದು ಬುಧವಾರ ಕೇಂದ್ರ ಬಜೆಟ್‌-ಮಂಡಿಸಿದ ಅವರು, ಗ್ರೀನ್ ಹೈಡ್ರೋಜನ್ ಮಿಷನ್‌ಗೆ 19,700 ಕೋಟಿ ರೂಪಾಯಿ ಮೀಸಲು. ಹಸಿರು ಕ್ರಾಂತಿಗೆ ಪಿಎಂ ಪ್ರಣಾಂ … Continued

ಕಾರಿನ ಮೇಲೆ ಉರುಳಿದ ಕಾಂಕ್ರಿಟ್ ಮಿಕ್ಸ್ ಲಾರಿ : ತಾಯಿ-ಮಗಳು ಸಾವು

ಬೆಂಗಳೂರು: ಕಾರಿನ ಮೇಲೆ ಕಾಂಕ್ರೀಟ್ ಮಿಕ್ಸರ್ ಲಾರಿ ಬಿದ್ದು ಸ್ಥಳದಲ್ಲೇ ತಾಯಿ -ಮಗಳು ಮೃತಪಟ್ಟ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಬ್ಯಾಲದಮರದ ದೊಡ್ಡಿ ಬಳಿ ನಡೆದಿದೆ. ಶಾಲೆಗೆ ಬಿಡಲು ಮಗಳನ್ನು ಕಾರಿನಲ್ಲಿ ಬರುತ್ತಿದ್ದಾಗ ಮಿಕ್ಸರ್ ಲಾರಿ ಅದರ ಬಿದ್ದಿದೆ. ಕನಕಪುರ ರಸ್ತೆ ಮಾರ್ಗವಾಗಿ ಬನ್ನೇರುಘಟ್ಟಕ್ಕೆ ಬರುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ, ಲಾರಿ … Continued

ಕೇಂದ್ರ ಬಜೆಟ್-2023 : 1%ರಷ್ಟು ವೆಚ್ಚ ಕಡಿತಕ್ಕೆ ಏಪ್ರಿಲ್ 1ರಿಂದ ಎಂಎಸ್‌ಎಂಇಗಳಿಗೆ ಪರಿಷ್ಕರಿಸಿದ ಕ್ರೆಡಿಟ್ ಗ್ಯಾರಂಟಿ ಯೋಜನೆ, ಎಲ್ಲ ವ್ಯವಹಾರಗಳಿಗೆ ಪಾನ್‌ (PAN) ಸಾಮಾನ್ಯ ಗುರುತಿಸುವಿಕೆ ಕಾರ್ಡ್‌ ಆಗಿ ಬಳಕೆ

ನವದೆಹಲಿ : ಬುಧವಾರ (ಫೆಬ್ರವರಿ 1) ತಮ್ಮ ತಮ್ಮ ಕೇಂದ್ರ ಬಜೆಟ್-2023 ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾಂಕ್ರಾಮಿಕದ ನಂತರದಲ್ಲಿ ಕಾರ್ಪೊರೇಟ್ ವಲಯಕ್ಕೆ ವ್ಯವಹಾರವನ್ನು ಸುಲಭಗೊಳಿಸುವ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಹಾಗೂ ಸ್ಟಾರ್ಟ್-ಅಪ್‌ಗಳಿಗೆ ಹೆಚ್ಚುವರಿ ಉತ್ತೇಜನ ನೀಡುವ ಮತ್ತು ಪ್ರೋತ್ಸಾಹಿಸುವ ಘೋಷಣೆ ಮಾಡಿದರು. ಅಲ್ಲದೆ, ಸೂಕ್ಷ್ಮ, ಸಣ್ಣ ಮತ್ತು … Continued

ಕೇಂದ್ರ ಬಜೆಟ್ 2023 : ಕೃಷಿ ಕ್ಷೇತ್ರಕ್ಕೆ ದೊಡ್ಡ ಉತ್ತೇಜನದಲ್ಲಿ 20 ಲಕ್ಷ ಕೋಟಿ ರೂ. ಸಾಲದ ಗುರಿ

ನವದೆಹಲಿ: ಕೇಂದ್ರ ಬಜೆಟ್ 2023-24ರಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರಮುಖ ಉತ್ತೇಜನದ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಬುಧವಾರ (ಫೆಬ್ರವರಿ 1) ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆಯ ಮೇಲೆ ಕೇಂದ್ರೀಕರಿಸಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದರು. ನೈಸರ್ಗಿಕ ಕೃಷಿ ನಿರ್ಮಲಾ ಸೀತಾರಾಮನ್ ಅವರು ಕೃಷಿ … Continued

ಕೇಂದ್ರ ಬಜೆಟ್ 2023: ರಸಗೊಬ್ಬರ ಸಬ್ಸಿಡಿಗಳಿಗೆ 1.75 ಲಕ್ಷ ಕೋಟಿ ರೂ.

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌-2023ರಲ್ಲಿ ರಸಗೊಬ್ಬರ ಸಬ್ಸಿಡಿಗಾಗಿ 1.75 ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿಸಿದ್ದಾರೆ. ಭಾರತದ ಆರ್ಥಿಕ ವರ್ಷವು ಏಪ್ರಿಲ್ 1 ರಿಂದ ಮಾರ್ಚ್ 31 ರ ವರೆಗೆ ನಡೆಯುತ್ತದೆ. ಈ ವರ್ಷದ ರಸಗೊಬ್ಬರ ಸಬ್ಸಿಡಿ ವೆಚ್ಚದ 2.25 ಲಕ್ಷ ಕೋಟಿ ರೂಪಾಯಿಗಳ ಪರಿಷ್ಕೃತ ಅಂದಾಜಿಗಿಂತ ಮುಂದಿನ ಹಣಕಾಸು ವರ್ಷಕ್ಕೆ ಮಾಡಿದ ಹಂಚಿಕೆ … Continued

ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಹೆಂಡತಿ,ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ; ನಂತರ ತಾನೂ ನೇಣಿಗೆ ಶರಣು

ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೆಂಡತಿ ಹಾಗೂ ಮೂವರು ಮಕ್ಕಳ ಮೇಲೆ ಕೊಡಲಿ, ಸುತ್ತಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ನಂತರ ತಾನೂ ನೇಣಿಗೆ ಶರಣಾದ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ ಎಂದು ವರದಿಯಾಗಿದೆ. ಇಂದು, ಬುಧವಾರ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ … Continued

ಕೇಂದ್ರದ ಬಜೆಟ್‌ 2023: ಯಾವುದು ಅಗ್ಗವಾಗಲಿದೆ..? ಯಾವುದು ತುಟ್ಟಿಯಾಗಲಿದೆ..?

ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಐದನೇ ಬಜೆಟ್ 2023 ಅನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಇದು ಭಾರತವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಇರಿಸುವ ಗುರಿಯನ್ನು ಹೊಂದಿದೆ. ಹಲವಾರು ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಿರುವುದರಿಂದ ಅನೇಕ ವಸ್ತುಗಳ ಬೆಲೆ ಕಡಿಮೆಯಾಗಲಿವೆ ಹಾಗೂ ಕೆಲವು ವಸ್ತುಗಳ ಸುಂಕಗಳನ್ನು ಹೆಚ್ಚು ಮಾಡಿದ್ದರಿಂದ … Continued