ಗಾಯಕಿ ವಾಣಿ ಜೈರಾಮ್ ನಿಧನ: ಅನುಮಾನಾಸ್ಪದ ಸಾವು ಪ್ರಕರಣ  ದಾಖಲಿಸಿದ ಚೆನ್ನೈ ಪೊಲೀಸರು

ಚೆನ್ನೈ: ಶನಿವಾರ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜೈರಾಮ್ ಅವರ ನಿಧನದ ಬಗ್ಗೆ ಚೆನ್ನೈ ಪೊಲೀಸರು (ಫೆಬ್ರವರಿ 4) ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಅವರ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರದಂದು ವಾಣಿ ಜೈರಾಮ್ ತನ್ನ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಹಣೆಯ ಮೇಲೆ ಗಾಯದ ಗುರುತು ಕಂಡುಬಂದಿವೆ. ಅವರ ನಿವಾಸದಲ್ಲಿ ದಿನನಿತ್ಯದ ಕೆಲಸಗಳನ್ನು ಮಾಡುತ್ತಿದ್ದ ಮಹಿಳೆ ಮಲಾರಕೋಡಿ ಅವರು ಬೆಳಗ್ಗೆ 11 ಗಂಟೆಗೆ ಕೆಲಸಕ್ಕೆ ಮನೆಗೆ ಬಂದು ಪದೇ ಪದೇ ಬೆಲ್ ಬಾರಿಸಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅವರು ತಕ್ಷಣ ವಾಣಿಯ ಸಹೋದರಿ ಉಮಾ ಅವರಿಗೆ ಫೋನ್‌ ಮಾಡಿದ್ದಾರೆ. ಅವರು ಬಂದು ನಕಲಿ ಕೀಗಳನ್ನು ಬಳಸಿ ಮನೆಗೆ ಪ್ರವೇಶಿಸಿದ್ದಾರೆ. ಆಗ ವಾಣಿ ಜಯರಾಮ್‌ ಅವರ ಶವ ಅವರ ಮಲಗುವ ಕೋಣೆಯಲ್ಲಿ ಕಂಡುಬಂದಿದೆ. ಗಾಯಕಿ ವಾಣಿ ಜಯರಾಂ ನೆಲಕ್ಕೆ ಉರುಳಿ ಬಿದ್ದ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ. ಅವರ ಹಣೆಗೂ ಗಾಯವಾಗಿದ್ದು, ಬಿದ್ದಿರುವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿದ್ದಲ್ಲಿಯೇ ಅವರಿಗೆ ಹೃದಯಾಘಾತವಾಗಿರಬಹುದು ಎಂದು ಹೇಳಲಾಗುತ್ತಿದೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಕಿಲ್ಪಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.ಈ ಎಲ್ಲ ಅನುಮಾನಗಳಿಗೆ ಮರಣೋತ್ತರ ಪರೀಕ್ಷೆಯ ವರದಿಯೇ ಉತ್ತರವಾಗಲಿದೆ.
2018 ರಲ್ಲಿ ವಾಣಿ ಅವರು ಪತಿ ಜೈರಾಮ್ ಅವರ ಮರಣದ ನಂತರ, ಅವರು ಚೆನ್ನೈನ ನುಂಗಂಬಾಕ್ಕಂನ ಹ್ಯಾಡೋಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. “ಅವರು ತನ್ನ ಮನೆಯಲ್ಲಿ ಒಬ್ಬರೇ ಇದ್ದಳು, ಸಾಮಾನ್ಯವಾಗಿ, ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಮತ್ತು ಮನೆಗೆ ಒಳಗಿನಿಂದ ಬೀಗ ಹಾಕಲಾಗಿತ್ತು ಮತ್ತು ಅವರ ಹಣೆಯ ಮೇಲೆ ಒಂದು ರಕ್ತ ಗಾಯವಾಗಿತ್ತು. ರಾತ್ರಿಯಲ್ಲಿ ಸಾವು ಸಂಭವಿಸಬಹುದು. ಆದರೆ ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ನಿಖರವಾದ ಸಮಯ ತಿಳಿಯಬೇಕಿದೆ. ನಿಖೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement