ಪಾಲ್ಘರ್ (ಮಹಾರಾಷ್ಟ್ರ): ಕುಟುಂಬಸ್ಥರು ಶವಸಂಸ್ಕಾರ ನೆರವೇರಿಸಿದ ಮೇಲೆ ಸತ್ತ ವ್ಯಕ್ತಿಯೊಬ್ಬ ತನ್ನ ಗೆಳೆಯನಿಗೆ ಕರೆ ಮಾಡಿ ಶಾಕ್ ನೀಡಿದ್ದಾರೆ…! ಈ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಿದೆ.
ಮೃತರೆಂದು ಭಾವಿಸಿ ಮಣ್ಣು ಮಾಡಿದ್ದ ವ್ಯಕ್ತಿ ಜೀವಂತವಾಗಿ ಪತ್ತೆಯಾಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. 60 ವರ್ಷದ ಆಟೋ ರಿಕ್ಷಾ ಚಾಲಕ ರಫೀಕ್ ಕರೀಂ ಶೇಖ್ ಸಾಕಷ್ಟು ಸಮಯದಿಂದ ಕಾಣೆಯಾಗಿದ್ದು, ಆತನ ಕುಟುಂಬ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿತ್ತು.
ಜನವರಿ 29 ರಂದು ಬೋಯ್ಸರ್ ಮತ್ತು ಪಾಲ್ಘರ್ ರೈಲು ನಿಲ್ದಾಣಗಳ ನಡುವೆ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ರೈಲ್ವೆ ಪೊಲೀಸರು ಮೃತರ ಫೋಟೋವನ್ನು ಗುರುತಿಸಲು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದನ್ನು ನೋಡಿದ ಶೇಖ್ ಅವರ ಸಹೋದರ ಗಫೂರ್ ರೈಲ್ವೆ ಜಿಆರ್‌ಪಿಯನ್ನು ಸಂಪರ್ಕಿಸಿದರು ಮತ್ತು ಸತ್ತ ವ್ಯಕ್ತಿಯನ್ನು ತನ್ನ ಸಹೋದರ ಎಂದು ಹೇಳಿಕೊಂಡರು. ಪೊಲೀಸರು ನಂತರ ಶವವನ್ನು ಗುರುತಿಸಲು ರಫೀಕ್ ಅವರ ಪತ್ನಿಯನ್ನು ಕೇರಳದಿಂದ ಪಾಲ್ಘರ್‌ಗೆ ಕರೆಸಿಕೊಂಡರು. ಪತ್ನಿ ಶವ ನೋಡಿ ಇದು ರಫೀಕ್ ಶೇಖ್ ಅವರದ್ದೇ ಎಂದು ದೃಢೀಕರಣ ಮಾಡಿದ ನಂತರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ನಂತರ ಕುಟುಂಬದವರು ಅವರನ್ನು ಮಣ್ಣಿನಲ್ಲಿ ದಫನ್ ಮಾಡಿದರು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಏತನ್ಮಧ್ಯೆ, ಮೃತ ರಫೀಕ್ ಶೇಖ್ ತನ್ನ ಸ್ನೇಹಿತನಿಗೆ ಫೆಬ್ರವರಿ 5 ರಂದು ಕರೆ ಮಾಡಿದರು. ಆದರೆ ಕರೆ ಸ್ವೀಕರಿಸಿದ ಸ್ನೇಹಿತ ಮಾತ್ರ ಅತ್ತ ಕಡೆಯಿಂದ ಬಂದ ಉತ್ತರ ಕೇಳಿ ಆಘಾತಕ್ಕೊಳಗಾದರು. ತನ್ನ ಗುರುತನ್ನು ದೃಢಪಡಿಸಿದ ರಫೀಕ್ ಶೇಖ್ ನಂತರ ದೃಢೀಕರಣಕ್ಕಾಗಿ ವೀಡಿಯೊ ಚಾಟ್ ಮಾಡಿದರು, ನಂತರ ಈತ ರಫೀಕ್ ಕರೀಂ ಶೇಖ್ ಹೌದು ಎಂದು ಖಾತ್ರಿ ಪಡಿಸಿಕೊಂಡ ಸ್ನೇಹಿತ ಈ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿದ್ದಾನೆ. ಹಾಗೂ ಪಾಲ್ಘರ್‌ನ ಸಫಲೆ ಬಳಿಯ ಆಶ್ರಮ(ನಿರ್ಗತಿಕ ಮನೆ)ದಲ್ಲಿದ್ದಾನೆ ಎಂದು ಹೇಳಿದ್ದಾರೆ. ತಕ್ಷಣವೇ ಕುಟುಂಬಸ್ಥರು ಅಲ್ಲಿಗೆ ಹೋಗಿ ಅವರನ್ನು ಕಂಡರು. ಮತ್ತು ರಫೀಕ್ ಇರುವಿಕೆಯ ಬಗ್ಗೆ ಕುಟುಂಬದವರು ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ಮಾಹಿತಿ ನೀಡಿದರು.
ಈ ಬಗ್ಗೆ ಜಿಆರ್‌ಪಿ ಇನ್ಸ್‌ಪೆಕ್ಟರ್ ನರೇಶ್ ರಣಧೀರ್ ಮಾತನಾಡಿ, ಮೃತನ ಫೋಟೋಗಳು ಶೇಖ್ ಅವರ ಫೋಟೋವನ್ನು ಹೋಲುವಂತಿತ್ತು ಎಂದರು. ಪೊಲೀಸ್ ಅಧಿಕಾರಿಯ ಪ್ರಕಾರ, ಶೇಖ್ ಒಂದೆರಡು ತಿಂಗಳ ಹಿಂದೆ ತನ್ನ ಮನೆಯನ್ನು ತೊರೆದು ಪಾಲ್ಘರ್‌ನ ಸಫಲಾದಲ್ಲಿರುವ ನಿರ್ಗತಿಕರ ಮನೆಗೆ ಬಂದರು. ಆದರೆ ಇದು ಕುಟುಂಬಸ್ಥರಿಗೆ ಗೊತ್ತಿರದ ಕಾರಣ ಅವರು ನಾಪತ್ತೆ ದೂರು ದಾಖಲಿಸಿದ್ದರು. ರೈಲ್ವೆ ಡಿಕ್ಕಿ ಹೊಡೆದು ಮೃತಪಟ್ಟ ವ್ಯಕ್ತಿಯ ಶವ ರಫೀಕ್ ಶೇಖ್ ಎಂಬವರದ್ದು ಎಂದು ಕುಟುಂಬಸ್ಥರು ಗುರುತಿಸಿದ ನಂತರವೇ ಅಗತ್ಯವಿರುವ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಿ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು.
ನಂತರ ಶೇಖ್ ಬದುಕಿರುವ ಬಗ್ಗೆ ನಮಗೆ ಮಾಹಿತಿ ನೀಡಲಾಯಿತು ಎಂದು ಅವರು ಹೇಳಿದರು. ಈಗ, ಹೂಳಲಾದ ಅಪರಿಚಿತ ಮೃತ ವ್ಯಕ್ತಿಯ ಕುಟುಂಬವನ್ನು ಪತ್ತೆಹಚ್ಚುವುದು ನಮ್ಮ ಕಾರ್ಯವಾಗಿದೆ” ಎಂದು ಅಧಿಕಾರಿ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ