ಶಿಕ್ಷಣಕ್ಕಾಗಿ ಬೆಳಕು ಯೋಜನೆ ಕರ್ಣಾಟಕ ಬ್ಯಾಂಕ್‌ ದೃಷ್ಟಿಯಲ್ಲಿ ಖರ್ಚಲ್ಲ, ಸಮಾಜಮುಖಿ ಬದ್ಧತೆಗೆ ವಿನಿಯೋಗ : ಮಹಾಬಲೇಶ್ವರ ಎಂ.ಎಸ್.

ಶಿರಸಿ: ಲಾಭದಲ್ಲಿ ಸಮಾಜಕ್ಕೆ ಒಂದಂಶ ಅರ್ಪಿಸಬೇಕು ಎಂಬ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್ ಸೇವೆ ಸಲ್ಲಿಸುತ್ತಿದ್ದು, ಅದರ ಭಾಗವಾಗಿ ಶಿಕ್ಷಣಕ್ಕಾಗಿ ಬೆಳಕು ಎಂಬ ಯೋಜನೆ ಸೆಲ್ಕೋದ ಜೊತೆಗೆ ಅನುಷ್ಠಾನವಾಗುತ್ತಿದೆ. ಇದು ಅಕ್ಷರಶಃ ಮಕ್ಕಳ ಓದಿಗೆ, ಶೈಕ್ಷಣಿಕ ಬೆಳವಣಿಗೆಗೆ ನೆರವಾಗಿದೆ ಎಂಬ ಸಮಾಧಾನವಿದೆ. ಬ್ಯಾಂಕ್‌ನ ದೃಷ್ಟಿಯಲ್ಲಿ ಇದು ಖರ್ಚಲ್ಲ, ಸಮಾಜದ ಬದ್ಧತೆಯ ದೃಷ್ಟಿಯಲ್ಲಿ ವಿನಿಯೋಗ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಅಭಿಪ್ರಾಯಪಟ್ಟರು.
ಅವರು ಬುಧವಾರ ಕರ್ಣಾಟಕ ಬ್ಯಾಂಕಿನ ಶಿಕ್ಷಣಕ್ಕಾಗಿ ಬೆಳಕು ಯೋಜನೆಗೆ ಸೆಲ್ಕೋ ಸೋಲಾರ್ ಸಂಸ್ಥೆ, ಭಾರತೀಯ ವಿಕಾಸ ಟ್ರಸ್ಟ್‌, ವಿಶ್ವಶಾಂತಿ ಸೇವಾ ಟ್ರಸ್ಟ್ ಜಂಟಿಯಾಗಿ ಹಮ್ಮಿಕೊಂಡ ಕೃತಜ್ಞತಾ ಸಮಾರಂಭದಲ್ಲಿ ಫಲಾನುಭವಿ ವಿದ್ಯಾರ್ಥಿಗಳಿಗೆ ಸೋಲಾರ್ ಬೆಳಕಿನ ಘಟಕದ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಕರ್ಣಾಟಕ ಬ್ಯಾಂಕ್ ಎಂದೂ ಲಾಭದ ಹಿಂದೆ ಬಿದ್ದು ಹೋಗಿಲ್ಲ. ಲಾಭವೇ ಕರ್ಣಾಟಕ ಬ್ಯಾಂಕ್ ಹಿಂದೆ ಬಂದಿದೆ. ಕರ್ಣಾಟಕ ಬ್ಯಾಂಕ್ ಶಾಖೆಯನ್ನು ಗ್ರಾಮೀಣ ಭಾಗದಲ್ಲೇ ಹೆಚ್ಚು ತೆರೆಯಲಾಗಿದೆ. ೧೯೨೪ರಿಂದ ಆರಂಭವಾದಾಗಿನಿಂದ ಇಂದಿನ ವರೆಗೂ ಜನರ ಅಗತ್ಯಕ್ಕೆ ಸ್ಪಂದಿಸುತ್ತ
ಲಾಭದಲ್ಲೇ ಮುನ್ನಡೆದ ದೇಶದ ಏಕ ಮೇವ ಬ್ಯಾಂಕ್ ಕರ್ಣಾಟಕ ಬ್ಯಾಂಕ್ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆ ಪ್ರಜ್ಞಾವಂತರ ಜಿಲ್ಲೆ. ಇಡೀ ರಾಜ್ಯದಲ್ಲಿ ಎರಡು ಜಿಲ್ಲೆಗಳಾದ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ರಾಜ್ಯದ ಸಾರ್ವಭೌಮ ಭಾಷೆಯಾದ ಕನ್ನಡದ ಹೆಸರನ್ನು ತಮ್ಮ ಜಿಲ್ಲೆಗೆ ಇಟ್ಟುಕೊಂಡಿವೆ. ಉತ್ತರ ಕನ್ನಡದ ಸಹಕಾರ ಚಳುವಳಿಯಲ್ಲಿ ಕೃಷಿಕರ ನೇತೃತ್ವವಿದೆ. ಇಲ್ಲಿ ಈ ಕ್ಷೇತ್ರದ ಸಾಮಾನ್ಯ ವ್ಯಕ್ತಿಗಳೂ ಅಸಮಾನ್ಯ ಸಾಧನೆ ಮಾಡಿದ್ದಾರೆ. ಉತ್ತರ ಕನ್ನಡ ಕ್ಷೇತ್ರದ ಮಾಧ್ಯಮ ಕೆಲಸ ದೊಡ್ಡದು ಎಂದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಬದುಕಿಗೇ ಬೆಳಕು ಕೊಡುವ ಯೋಜನೆ ರೂಪಿಸಿದ್ದಕ್ಕೆ ಅಭಿನಂದನೆಗಳು. ವಿದ್ಯಾಭ್ಯಾಸದ ದೃಷ್ಟಿಯಲ್ಲಿ ಇದು ಕೆಲಸ ಮಾಡುತ್ತಿರುವುದು ಶ್ರೇಷ್ಠ ಕೆಲಸ ಮಗುವಿನ ಮೂಲಭೂತ ಅವಶ್ಯಕತೆಗಳ ಬಗ್ಗೆಯೇ ಯೋಚನೆ ಮಾಡಿ ಯೋಜನೆ ರೂಪಿಸಿರುವುದು ಅಭಿನಂದನೀಯ ಎಂದರು.
೨೬ ವರ್ಷಗಳಿಂದ ಇದು ನನ್ನ ಬ್ಯಾಂಕ್. ನಾನು ಬ್ಯಾಂಕಿನ ಓರ್ವ ಗ್ರಾಹಕ. ನೂರು ವರ್ಷಗಳ ಹಿಂದೆ ಕರ್ಣಾಟಕ ಹೆಸರು ಇಟ್ಟಿದ್ದು ಅಚ್ಚರಿ ಮೂಡಿಸುತ್ತದೆ. ಇದು ಹಿರಿಯರ ಮುಂದಾಲೋಚನೆಗೆ ಸಾಕ್ಷಿ ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಕರ್ಣಾಟಕ ಬ್ಯಾಂಕ್‌ಗೂ ನಮಗೂ ವೈಯಕ್ತಿಕವಾಗಿ ಒಳ್ಳೆಯ ಸಂಬಂಧವಿದೆ. ಸೆಲ್ಕೋ ಸಂಸ್ಥೆ ಒಳ್ಳೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸೆಲ್ಕೋ ಸಿಇಒ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಮುಗ್ಧ ಮಕ್ಕಳು ಸೌಲಭ್ಯ ವಂಚಿತರಾಗಿರುವುದು ಹಿಂದುಳಿಯಲು ಕಾರಣವಾಗಿದೆ. ಅದಕ್ಕಾಗಿ

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌: ವೀಡಿಯೊ ನೀಡಿದ್ದು ನಾನೇ ಎಂದಿದ್ದ ಮಾಜಿ ಕಾರು ಚಾಲಕ ಕಾರ್ತಿಕ್ ನಾಪತ್ತೆ...!?

ಕರ್ಣಾಟಕ ಬ್ಯಾಂಕ್ ಹಾಗೂ ಸೆಲ್ಕೋ ಜೊತೆಯಾಗಿ ಈ ಯೋಜನೆಯಂತೆ ಬೆಳಕು ನೀಡಲಾಗಿದೆ. ಈವರೆಗೆ ಈ ಯೋಜನೆಯಲ್ಲಿ ೭೫೪ ಮನೆಗಳಿಗೆ ಸೌರ ಬೆಳಕು ನೀಡಲಾಗಿದೆ. ಶೇ.೫೦ರಷ್ಟು ಅಂದರೆ ೩೮.೫೦ ಲಕ್ಷ ರೂ. ಕರ್ಣಾಟಕ ಬ್ಯಾಂಕ್ ನೆರವು ನೀಡಿದೆ.
ಸೀಮಿತವಾಗಿದ್ದ ಯೋಜನೆಯನ್ನು ಬ್ಯಾಂಕ್ ಇಡೀ ಕರ್ಣಾಟಕ ರಾಜ್ಯಕ್ಕೆ ವಿಸ್ತರಿಸಿದೆ. ಜೋಯಿಡಾದಲ್ಲಿ ೧೨೦೦ಕ್ಕೂ ಮನೆಗಳಲ್ಲಿ ಬೆಳಕಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದು ನೋಡಿರುವೆ ಇಲ್ಲೂ ಸ್ಪಂದಿಸಬೇಕು ಎಂಬ ಆಶಯವಿದೆ ಎಂದರು.
ಕರ್ಣಾಟಕ ಬ್ಯಾಂಕ್ ಉಡುಪಿ ಎಜಿಎಂ ರಾಜಗೋಪಾಲ, ಶಿವಮೊಗ್ಗ ಎಜಿಎಂ ಹಯವದನ ಉಪಾಧ್ಯಾಯ, ಭಾರತೀಯ ವಿಕಾಸ ಟ್ರಸ್ಟ್‌ನ ಮನೋಹರ ಕಟಗೇರಿ, ಡಿಡಿಪಿಐ ಕಚೇರಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ವಿಶ್ವಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಇತರರು ವೇದಿಕೆಯಲ್ಲಿ ಇದ್ದರು. ರಾಘವೇಂದ್ರ ಹೆಗಡೆ ಸ್ವಾಗತಿಸಿದರು. ಸೆಲ್ಕೋ ಎಜಿಎಂ ಪ್ರಸನ್ನ ಹೆಗಡೆ ವಂದಿಸಿದರು. ಕ್ಷೇತ್ರೀಯ ವ್ಯವಸ್ಥಾಪಕ ಮಂಜುನಾಥ ಭಾಗವತ ನಿರ್ವಹಿಸಿದರು. ಸೌರ ಬೆಳಕು ಕೊಟ್ಟು ಓದಲು ನೆರವಾದ ಕಾರಣಕ್ಕೆ ಸಭೆಯಲ್ಲಿ ಪಾಲ್ಗೊಂಡ ಮಕ್ಕಳೇ ಕರ್ಣಾಟಕ
ಬ್ಯಾಂಕ್‌ನ ಮಹಾಬಲೇಶ್ವರ ಎಂ.ಎಸ್., ಸೆಲ್ಕೋ ಸಿಇಓ ಮೋಹನ ಭಾಸ್ಕರ ಹೆಗಡೆ ಹಾಗೂ ಸಚಿವ
ಶಿವರಾಂ ಹೆಬ್ಬಾರ್ ಅವರನ್ನು ಅಭಿನಂದಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಹಗರಣ: ಮಧ್ಯಂತರ ಜಾಮೀನು ಕೋರಿ ಜನಪ್ರತಿನಿಧಿಗಳ ನ್ಯಾಯಾಲಯದ ಮೆಟ್ಟಿಲೇರಿದ ರೇವಣ್ಣ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement