ಟರ್ಕಿ-ಸಿರಿಯಾ ಭೂಕಂಪ: 25 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ತಾಂಬುಲ್‌: ಟರ್ಕಿ ಮತ್ತು ಸಿರಿಯಾದಲ್ಲಿ ಸಂಬವಿಸಿದ ಭಾರೀ ಭೂಕಂಪದಲ್ಲಿ ಸಾವಿನ ಸಂಖ್ಯೆ 25,000 ದಾಟಿದೆ ಎಂದು ವರದಿಗಳು ತಿಳಿಸಿವೆ ವ್ಯಾಪಕ ವಿನಾಶ ಮತ್ತು ಶೀತ, ಹಸಿವು ಮತ್ತು ಹತಾಶೆಯ ನಡುವೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ವಿಪರೀತ ಚಳಿಯ ಮಧ್ಯೆ ಲಕ್ಷಾಂತರ ಜನ ಮನೆ-ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಹಟಾಯ್ ಪ್ರಾಂತ್ಯದ ಸಮಂದಾಗ್ ಜಿಲ್ಲೆಯಲ್ಲಿ 90 ಗಂಟೆಗಳ ನಂತರ 10 ವರ್ಷದ ಬಾಲಕ ಹಾಗೂ ಆತನ ತಾಯಿಯನ್ನು ರಕ್ಷಿಸಲಾಗಿದೆ. ಇದಲ್ಲದೆ ಅವಶೇಷಗಳಡಿಯಲ್ಲಿ ಸಿಲುಕಿದ್ದ ಹಲವಾರು ಜನರನ್ನು ರಾತ್ರಿಯಲ್ಲಿ ರಕ್ಷಿಸಲಾಗಿದೆ. ಹಟಾಯ್‌ನಲ್ಲಿ, ಅಸ್ಯ ಡೊನ್ಮೆಜ್ ಎಂಬ ಏಳು ವರ್ಷದ ಬಾಲಕಿಯನ್ನು 95 ಗಂಟೆಗಳ ನಂತರ ರಕ್ಷಿಸಲಾಗಿದೆ ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಅನಾಡೋಲು ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಸಮಯ ಕಳೆದಂತೆ ಕುಸಿದ ಸಾವಿರಾರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರು ಜೀವಂತವಾಗಿರುವವರು ಬದುಕುಳಿಯುವ ಭರವಸೆ ಸಹ ಕ್ಷೀಣಿಸುತ್ತಿದೆ.
ವಿಶ್ವ ಸಂಸ್ಥೆಯ ಮೊದಲ ನೆರವು ವಿತರಣೆಗಳು ಸಿರಿಯನ್ ಬಂಡುಕೋರರ ಹಿಡಿತದಲ್ಲಿರುವ ವಲಯಗಳಿಗೆ ಗುರುವಾರ ಆಗಮಿಸಿದವು. ಭಾರತ ಸೇರಿದಂತೆ ಹಲವಾರು ದೇಶಗಳು ಟರ್ಕಿ ಮತ್ತು ಸಿರಿಯಾಕ್ಕೆ ನೆರವು ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿವೆ.
122 ಗಂಟೆಗಳ ನಂತರ ಇಬ್ಬರು ಮಹಿಳೆಯರ ರಕ್ಷಣೆ…
ಎರಡು ದಶಕಗಳಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪದ ನಂತರ 122 ಗಂಟೆಗಳ ಕಾಲ ಸಿಕ್ಕಿಬಿದ್ದ ನಂತರ ಟರ್ಕಿಯಲ್ಲಿನ ರಕ್ಷಣಾ ಸಿಬ್ಬಂದಿ ಕುಸಿದ ಕಟ್ಟಡಗಳ ಅವಶೇಷಗಳಿಂದ ಇಬ್ಬರು ಮಹಿಳೆಯರನ್ನು ಜೀವಂತವಾಗಿ ಹೊರತೆಗೆದಿದ್ದಾರೆ ಎಂದು ಅಧಿಕಾರಿಗಳು ಅಲ್-ಜಜೀರಾಗೆ ತಿಳಿಸಿದ್ದಾರೆ. ಭೂಕಂಪದ 119 ಗಂಟೆಗಳ ನಂತರ ಟರ್ಕಿಯ ಕಹ್ರಮನ್‌ಮರಸ್‌ನಲ್ಲಿ ಧ್ವಂಸಗೊಂಡ ಕಟ್ಟಡದ ಅವಶೇಷಗಳಿಂದ 16 ವರ್ಷದ ಹುಡುಗನನ್ನು ಜೀವಂತವಾಗಿ ಹೊರತೆಗೆಯಲಾಯಿತು ಎಂದು ಸಿಎನ್‌ಎನ್ ವರದಿ ಮಾಡಿದೆ.24 ಗಂಟೆಗಳಲ್ಲಿ 60 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಟರ್ಕಿಯ ಉಪಾಧ್ಯಕ್ಷರು ಹೇಳಿದ್ದಾರೆ. 24 ಗಂಟೆಗಳಲ್ಲಿ ಅರವತ್ತೇಳು ಜನರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ ಎಂದು ಟರ್ಕಿಯ ಉಪಾಧ್ಯಕ್ಷ ಫುವಾಟ್ ಒಕ್ಟೇ ಸುದ್ದಿಗಾರರಿಗೆ ತಿಳಿಸಿದರು, ಪೀಡಿತ ಪ್ರದೇಶದಾದ್ಯಂತ ಬೇರೆಬೇರೆ ದೇಶಗಖ ಸಿಬ್ಬಂದಿ ಸೇರಿ 31,000 ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಅಲ್-ಜಜೀರಾ ವರದಿ ಮಾಡಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಕೊರೊನಾ ಸಂಬಂಧಿತ ಮೆದುಳು ಕಾಯಿಲೆಯಿಂದ ಜಪಾನ್‌ನಲ್ಲಿ 10%ಕ್ಕಿಂತ ಹೆಚ್ಚು ಮಕ್ಕಳು ಸಾವು : ಸಮೀಕ್ಷೆಯಲ್ಲಿ ಬಹಿರಂಗ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement